ನಟ ದರ್ಶನ್ ಇನ್ಮುಂದೆ ಜಾಲಿ ಜಾಲಿ, ಮತ್ತೊಂದು ಮನವಿಗೆ ಕೋರ್ಟ್ ಗ್ರೀನ್‌ಸಿಗ್ನಲ್
ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರು ಈಗಷ್ಟೇ ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಜಾಮೀನು ಪಡೆದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದು ಮಾಡುವ ಅರ್ಜಿ ವಿಚಾರಣೆಯನ್ನು ಕೂಡ ಎರಡು ತಿಂಗಳ ಕಾಲ ಮುಂದೂಡಲಾಗಿದೆ. ಈಗಾಗಲೇ ಕೋರ್ಟ್‌ಗೆ ಹಲವು ಮನವಿ ಸಲ್ಲಿಸಿದ್ದ ದರ್ಶನ್ ಅವರಿಗೆ ಕೋರ್ಟ್ ಕೂಡ ಒಪ್ಪಿಗೆ ಸೂಚಿಸಿತ್ತು. ಇದೀಗ ದರ್ಶನ್ ಅವರ ಮತ್ತೊಂದು ಮನವಿಗೆ ಕೋರ್ಟ್ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಇದು ದರ್ಶನ್ ಅವರ ಪಾಲಿಗೆ ನೆಮ್ಮದಿಯ ಸುದ್ದಿಯಾಗಿದೆ.
ಹೌದು ಕೊಲೆ ಕೇಸ್‌ನಲ್ಲಿ ದರ್ಶನ್ ಅವರಿಗೆ ಜಾಮೀನು ಸಿಕ್ಕಿದ್ದರೂ ಕೆಲವು ಷರತ್ತುಗಳನ್ನು ಮೀರುವಂತಿಲ್ಲ. ಹೀಗಾಗಿ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಲು ಕೂಡ ಇದೇ ಷರತ್ತುಗಳು ಅಡ್ಡಿಯಾಗಿದ್ದವು. ಈ ಸಂಬಂಧ ದರ್ಶನ್ ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. ಸದ್ಯ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲು ದರ್ಶನ್ ಅವರಿಗೆ ಅನುಮತಿ ಕೊಡಲಾಗಿದೆ. ಆದರೆ ವಿದೇಶಗಳಲ್ಲಿ ದರ್ಶನ್ ಅವರಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಲು ಅವಕಾಶ ಇರಲಿಲ್ಲ. ಈಗ ಇದಕ್ಕೂ ಕೋರ್ಟ್ ಗ್ರೀನ್‌ಸಿಗ್ನಲ್ ನೀಡಿದೆ.

ಸಿನಿಮಾಗಳಿಂದಲೇ ಬದುಕು ಕಟ್ಟಿಕೊಂಡಿರುವ ದರ್ಶನ್ ಅವರು ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ 64ನೇ ಸಿಸಿಹೆಚ್ ಕೋರ್ಟ್ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ಸದ್ಯ ದರ್ಶನ್ ಅವರ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ದುಬೈ, ಯುರೋಪ್‌ಗಳಲ್ಲಿ ಚಿತ್ರೀಕರಣ ಪ್ಲ್ಯಾನ್ ಮಾಡಲಾಗಿದೆ. ಹಾಗಾಗಿ ವಿದೇಶಕ್ಕೆ ತೆರಳಲು ಅವಕಾಶ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಒಟ್ಟು 25 ದಿನಗಳ ಕಾಲ ವಿದೇಶಕ್ಕೆ ಹೋಗಲು ಅನುಮರಿ ಕೋರಿದ್ದರು. ಅದರಂತೆ ಜೂನ್ ಆರಂಭದಿಂದ ಕೊನೆಯ ವಾರದವರೆಗೆ ವಿದೇಶಕ್ಕೆ ತೆರಳಲು ದರ್ಶನ್ ಅವರಿಗೆ ಅವಕಾಶ ನೀಡಿದೆ.
ಬೆಂಗಳೂರು ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಇನ್ನೂ ನಡೆಯುತ್ತಿದೆ. ಹಾಗಾಗಿ ಪ್ರತಿ ವಿಚಾರಣೆಗೂ ದರ್ಶನ್ ಅವರು ತಪ್ಪದೇ ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ. ಅದರಂತೆ ಮುಂದಿನ ವಿಚಾರಣೆಗೂ ದರ್ಶನ್ ತಪ್ಪದೇ ಹಾಜರಾಗಬೇಕು ಎನ್ನುವ ಷರತ್ತಿನ ಮೇರೆಗೆ ಈಗ ವಿದೇಶಕ್ಕೆ ಹೋಗಲು ಅನುಮತಿ ನೀಡಿದೆ. ಇದರಿಂದ ದರ್ಶನ್ ಅವರ ಡೆವಿಲ್ ಸಿನಿಮಾ ಶೂಟಿಂಗ್‌ಗೆ ಇದ್ದ ಅಡ್ಡಿ ಆತಂಕ ದೂರವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಜಾಮೀನಿನ ಮೇಲೆ ಹೊರಬಂದಿದ್ದ ನಟ ದರ್ಶನ್ ಅವರು ಕೆಲ ಕಾಲ ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆದಿದ್ದರು. ಬಳಿಕ ಅರ್ಧಕ್ಕೆ ನಿಂತಿದ್ದ ತಮ್ಮ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಹೊರರಾಜ್ಯದಲ್ಲೂ ಈ ಸಿನಿಮಾ ಶೂಟಿಂಗ್ ನಡೆದು, ಈಗಲೂ ಮುಂದುವರಿದಿದೆ. ಈಗ ವಿದೇಶದಲ್ಲೂ ಡೆವಿಲ್ ಶೂಟಿಂಗ್‌ನಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ಕೋರ್ಟ್ ಕೆಲವೇ ದಿನಗಳು ಅನುಮತಿ ನೀಡಿರುವ ನೀಡಿರುವುದರಿಂದ ಗಡುವಿನಲ್ಲಿ ಸಿನಿಮಾ ಶೂಟಿಂಗ್ ಮುಗಿಸುವ ಸಾಧ್ಯತೆ ಇದೆ.












Click it and Unblock the Notifications