ರಾಕೇಶ್‌ ಪೂಜಾರಿಗೆ ತನ್ನ ಸಾವಿನ ಬಗ್ಗೆ ಮೊದಲೇ ತಿಳಿದಿತ್ತಾ? ಚರ್ಚೆಗೆ ಕಾರಣವಾಯ್ತು ಇನ್‌ಸ್ಟಾಗ್ರಾಂ ಬಯೋ

ಕಾಮಿಡಿ ಕಿಲಾಡಿಗಳು ಸೀಸನ್-3ರ ವಿನ್ನರ್ ಹಾಗೂ ಜನಪ್ರಿಯ ಹಾಸ್ಯ ಕಲಾವಿದ ರಾಕೇಶ್‌ ಪೂಜಾರಿ ಅವರು ಹೃದಯಾಘಾತದಿಂದ ಹಠಾತ್‌ ನಿಧನ ಹೊಂದಿದ್ದಾರೆ. ಇದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಉಡುಪಿ ಮೂಲದವರಾಗಿದ್ದ ಇವರು ಕಿರುತೆರೆ, ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು. ಇವರ ನಿಧನಕ್ಕೆ ಕನ್ನಡದ ನಟ ನಟಿಯರು ಕೂಡ ಕಂಬನಿ ಮಿಡಿದಿದ್ದಾರೆ. ಇದೀಗ ರಾಕೇಶ್‌ ಪೂಜಾರಿ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ತಿಳಿದಿತ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಕೇಶ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ಬರೆದುಕೊಂಡಿರುವ ಆ ಸಾಲುಗಳಿವೆ ಇದಕ್ಕೆ ಪುಷ್ಟಿ ನೀಡುವಂತಿವೆ.

ಹೌದು ರಾಕೇಶ್‌ ಪೂಜಾರಿ ಅವರು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದು ಇಡೀ ಕರ್ನಾಟಕದ ಮಂದಿ ಆಘಾತಕ್ಕೆ ಒಳಗಾಗಿದ್ದಾರೆ. ಸದಾ ಹಸನ್ಮುಖಿಯಾಗಿದ್ದ ರಾಕೇಶ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ಒಂದು ಸಾಲನ್ನು ಬರೆದುಕೊಂಡಿದ್ದು, ಈಗಿನ ಹೃದಯವಿದ್ರಾವಕ ಘಟನೆಗೆ ಹೋಲುವಂತಿದೆ.

Comedy Kiladigalu Fame Rakesh Poojary Passes Away His Instagram Bio Sparks Emotion

ರಾಕೇಶ್‌ ಪೂಜಾರಿ ಅವರು ತಮ್ಮ ಬಯೋದಲ್ಲಿ "Life is Short me 2" ಎಂದು ಬರೆದುಕೊಂಡಿರುವ ಬಗ್ಗೆಯೂ ಹೆಚ್ಚು ಚರ್ಚೆಯಾಗುತ್ತಿದೆ. ನನಗೂ ಜೀವನ ಚಿಕ್ಕದು ಎಂಬರ್ಥದಲ್ಲಿ ರಾಕೇಶ್‌ ತಮ್ಮ ಬಯೋದಲ್ಲಿ ಒಂದು ಸಾಲು ಬರೆದುಕೊಂಡಿದ್ದಾರೆ. ಹಾಗಾಗಿ ರಾಕೇಶ್‌ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಇತ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಅಥವಾ ಇದು ಕಾಕತಾಳೀಯವೋ ಅಥವಾ ಆ ಸಾಲುಗಳಿಗೆ ತಕ್ಕಂತೆ ರಾಕೇಶ್‌ ಸಣ್ಣ ವಯಸ್ಸಿಗೆ ವಿದಾಯ ಹೇಳಿದ್ದಾರೋ ಎಂದು ವಿಧಿಯ ಮುಂದೆ ಪ್ರಶ್ನೆ ಇಟ್ಟಿದ್ದಾರೆ.

ಕಾಮಿಡಿ ಕಿಲಾಡಿಗಳು ಮೂಲಕ ರಾಕೇಶ್‌ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಸದಾ ನಗುತ್ತಿದ್ದ ಅವರು ಹಠಾತ್ ಹೃದಯಾಘಾತದಿಂದ ನಿಧನರಾದರು ಎಂಬ ವಿಚಾರವನ್ನು ಹಲವರು ಈಗಲೂ ಒಪ್ಪುತ್ತಿಲ್ಲ. ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ರಾಕೇಶ್‌ ಅವರು ಮೆಹಂದಿ ಡ್ಯಾನ್ಸ್ ಮಾಡಿದ್ದರು. ಆಗ ರಾಕೇಶ್ ಹಲವು ಬಾರಿ ತಮ್ಮ ಎದೆಯನ್ನು ಹಿಡಿದುಕೊಂಡಿರುವ ವಿಡಿಯೋ ಕೂಡ ವೈರಲ್‌ ಆಗಿದೆ. ನೋವು ಕಾಣಿಸಿಕೊಂಡಾಗಲೇ ರಾಕೇಶ್‌ ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕಿತ್ತು ಎಂದು ಅನೇಕರು ಸಂಕಟ ಹೊರಹಾಕಿದ್ದಾರೆ.

Comedy Kiladigalu Fame Rakesh Poojary Passes Away His Instagram Bio Sparks Emotion

ರಕ್ಷಿತಾ, ಅನುಶ್ರೀ ಕಣ್ಣೀರು

ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ಅವರ ನಿಧನಕ್ಕೆ ನಟಿ ರಕ್ಷಿತಾ ಕೂಡ ಕಂಬನಿ ಮಿಡಿದಿದ್ದಾರೆ. ಈ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದ ರಕ್ಷಿತಾ ಅವರೊಂದಿಗೂ ರಾಕೇಶ್‌ ಉತ್ತಮ ಒಡನಾಟ ಹೊಂದಿದ್ದರು. ರಾಕೇಶ್‌ ಸಾವಿನ ವಿಚಾರ ಕೇಳಿ ರಕ್ಷಿತಾ ಅವರೂ ಶಾಕ್‌ಗೆ ಒಳಗಾಗಿದ್ದು, ಉಡುಪಿಗೆ ಬಂದು ರಾಕೇಶ್‌ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ರಕ್ಷಿತಾ ಅವರು ಕಣ್ಣೀರಿಡುತ್ತಾ ನೋವು ಹೊರಹಾಕಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನ ನಿರೂಪಕಿಯಾಗಿದ್ದ ಅನುಶ್ರೀ ಕೂಡ ರಾಕೇಶ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗಳಗಳನೆ ಅತ್ತಿದ್ದಾರೆ. ಈ ಕಾರ್ಯಕ್ರಮದ ಸಹ ಸ್ಪರ್ಧಿಗಳೆಲ್ಲ ರಾಕೇಶ್‌ ಹುಟ್ಟೂರಿಗೆ ಆಗಮಿಸಿ ಕಣ್ಣೀರಿಟ್ಟಿದ್ದಾರೆ. ಸ್ನೇಹಿತನ ಸಾವು ಕಂಡು ಮರುಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+