Master Anand:: ನಯನಾ ಮಾಸ್ಟರ್‌ ಆನಂದ್‌ಗೆ ಹೀಗೆ ಕರೆಯೋದ್ಯಾಕೆ? ಯಶಸ್ವಿನಿಗೂ ಸ್ವೀಟ್‌ ಶಾಕ್‌

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ, ನಟ ಮಾಸ್ಟರ್ ಆನಂದ್ ಅವರ ಪತ್ನಿ ಯಶಸ್ವಿನಿ ಮಾಸ್ಟರ್‌ ಆನಂದ್ ತಮ್ಮದೇ ಆದ ಹೊಸ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾರೆ. ಕನೆಕ್ಟ್‌ ಕನ್ನಡ(Konnect Kannada) ಎನ್ನುವ ಇವರ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಶೇಷವಾದ ಅತಿಥಿಗಳನ್ನೇ ಕರೆಸುತ್ತಿದ್ದು, ತಾವೇ ನಿರೂಪಕಿಯಾಗಿ ಬಹಳ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದಾರೆ.

ಇತ್ತೀಚಿಗೆ ಕನೆಕ್ಟ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್‌ ಮಾಡಲಾಗಿದ್ದ ಪ್ರೋಮೋ ವಿಡಿಯೋವೊಂದು ಸಖತ್‌ ವೈರಲ್‌ ಆಗಿತ್ತು. ಯಶಸ್ವಿನಿ ಮಾಸ್ಟರ್‌ ಆನಂದ್ ಅವರ ಯೂಟ್ಯೂಬ್‌ ಚಾನೆಲ್‌ಗೆ ಕಾಮಿಡಿ ಕಿಲಾಡಿಗಳು ನಯನ ಅತಿಥಿಯಾಗಿ ಬಂದಿದ್ದು, ಈ ಸಂದರ್ಶನದ ವಿಡಿಯೋಗೆ ಕಾಮಿಡಿ ಕಿಲಾಡಿಗಳು ನಯನ-ಮಾಸ್ಟರ್ ಆನಂದ್ ಲವ್ವಿ ಡವ್ವಿ ಎಂದು ಟೈಟಲ್‌ ನೀಡಲಾಗಿತ್ತು.

Comedy Khiladigalu Nayana Revealed The Pet Name She Called Master Anand

ಟೈಟಲ್‌ನಲ್ಲೇ ಸಖತ್‌ ಹೈಪ್‌ ಕ್ರಿಯೆಟ್‌ ಮಾಡಿದ್ದ ಕನೆಕ್ಟ್‌ ಕನ್ನಡದ ಕಾಮಿಡಿ ಕಿಲಾಡಿಗಳು ನಯನ ಸಂದರ್ಶನದಲ್ಲಿ ಅಂತಹದ್ದೇನಿರಬಹುದು ಎಂದು ವೀಕ್ಷಕರು ಕೂಡ ಕಾಯುತ್ತಿದ್ದರು. ಕೊನೆಗೂ ಸಂಪೂರ್ಣ ಸಂದರ್ಶನದ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಯಶಸ್ವಿನಿ ಮಾಸ್ಟರ್ ಆನಂದ್ ಹಾಗೂಕಾಮಿಡಿ ಕಿಲಾಡಿಗಳು ನಯನ ಸಂದರ್ಶನದಲ್ಲಿ ನಗುವಿನ ಹೊಳೆಯನ್ನೇ ಹರಿಸಿದ್ದಾರೆ.

ಮಾಸ್ಟರ್‌ ಆನಂದ್ ವಿಚಾರವಾಗಿ ನಯನಾಗೆ ಕಾಲೆಳೆದಿರುವ ಯಶಸ್ವಿನಿ, ಇಬ್ಬರು ಜೊತೆಯಾಗಿ ಮಾಡಿರುವ ಕಾರ್ಯಕ್ರಮ, ಹಾಡು ಹಾಗೂ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ನಯನ ಸೀಕ್ರೆಟ್‌ವೊಂದನ್ನು ರಿವೀಲ್‌ ಮಾಡಿದ್ದು, ಮಾಸ್ಟರ್‌ ಆನಂದ್ ಅವರನ್ನು ತಾವು ಆತ್ಮೀಯತೆಯಿಂದ ಕರೆಯುವ ಹೆಸರನ್ನು ರಿವೀಲ್‌ ಮಾಡಿದ್ದಾರೆ.

'ನಾನು ಈ ಇಂಟರ್‌ವ್ಯೂನಲ್ಲಿ ಮಾತ್ರ ಸರ್‌ ಎನ್ನುತ್ತಿರುವುದು, ಸಾಮಾನ್ಯವಾಗಿ ನಾನು ಅವರನ್ನು ಅನಿ ಅಂತಾ ಕರೆಯುತ್ತೇನೆ' ಎಂದು ನಯನ, ಮಾಸ್ಟರ್‌ ಆನಂದ್‌ ಅವರ ಪತ್ನಿ ಯಶಸ್ವಿನಿ ಅವರ ಮುಂದೆ ಹೇಳಿದ್ದಾರೆ. ನಯನಾ ಈ ಮಾತಿಗೆ ಪ್ರತಿಕ್ರಿಯಿಸಿದ ಯಶಸ್ವಿನಿ, 'ನಾನು ಕೂಡ ಇದನ್ನೇ ಹೇಳೋಣ ಅಂತಿದ್ದೆ. ನಯನ ಅವರು ಆನಂದ್‌ ಅವರನ್ನು ಅನಿ ಅಂತಾ ಕರೆಯುತ್ತಾರೆ. ನಾನು ಹರಿ ಓಂ ಅಂತಾ ಕರೆಯುತ್ತೇನೆ. ಇಲ್ಲಿ ಯಾರು ಹತ್ತಿರ ಅಂತಾ ಗೊತ್ತಾಗುತ್ತಿಲ್ಲ' ಎಂದಿದ್ದಾರೆ.

Comedy Khiladigalu Nayana Revealed The Pet Name She Called Master Anand

'ಈ ವೇಳೆ ಹರಿ ಓಂ ಅಂದರೆ ನೀವು ಗೃಹ ಲಕ್ಷ್ಮಿ ಅಂತಾ' ಎಂದು ಹೇಳಿರುವ ನಯನ 'ವಯಸ್ಸಾದ ಮೇಲಾದರೂ ಆನಂದ್‌ ಸರ್‌ಗೆ ರೋಮಾನ್ಸ್‌ ಬರಬಹುದೇನೋ ಗೊತ್ತಿಲ್ಲ' ಎಂದು ಹೇಳಿದ್ದಾರೆ. ಹೀಗೆ ಮಾಸ್ಟರ್‌ ಆನಂದ್‌ ಅವರ ಬಗ್ಗೆ ಇವರಿಬ್ಬರ ಸಂವಾದ ಮುಂದುವರಿದಿದ್ದು, ಮಾಸ್ಟರ್‌ ಆನಂದ್‌ ಹಾಗೂ ಯಶಸ್ವಿನಿ ನಡುವಿನ ನಂಬಿಕೆ, ಪ್ರೀತಿ, ವಿಶ್ವಾಸದ ಬಗ್ಗೆ ನಯನ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+