Darshan Thoogudeepa: ಪವಿತ್ರಾ ದರ್ಶನ್ ನಡುವೆ ಕೋಲ್ಡ್ ವಾರ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಪ್ರಸ್ತುತ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಅತ್ತ ಪವಿತ್ರಾ ಗೌಡ ಟೆಂಪಲ್ ರನ್ ಮಾಡುತ್ತಾ ತಮ್ಮ ಹುದ್ದೆಯನ್ನು ರೀ ಲಾಂಚ್ ಮಾಡಲು ತಯಾರಿ ನಡೆಸಿದ್ದಾರೆ. ಈ ನಡುವೆ ದರ್ಶನ್ ಹಾಗೂ ಪವಿತ್ರಾ ನಡುವೆ ಕೋಲ್ಡ್ ವಾರ್ ಶುರುವಾದಂತೆ ಕಾಣಿಸುತ್ತಿದೆ. ದರ್ಶನ್ ಪವಿತ್ರಾ ಗೌಡ ಅವರಿಂದ ದೂರವಾಗುತ್ತಿರುವುದು ಮಾತ್ರವಲ್ಲದೆ ಪತ್ನಿಯೊಂದಿಗೆ ಖುಷಿಯಾದ ಕ್ಷಣಗಳನ್ನು ಆನಂದಿಸುತ್ತಾ ಪವಿತ್ರಾಗೆ ಟಾಂಗ್ ಕೊಡಲು ಶುರು ಮಾಡಿದ್ದಾರೆ. ಇದರಿಂದ ದರ್ಶನ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಹಾಗಾದರೆ ಅಭಿಮಾನಿಗಳು ಮಾಡಿದ ಕಾಮೆಂಟ್ ಏನು?
ಹೌದು.. ಒಂದು ಕಾಲದಲ್ಲಿ ದರ್ಶನ್ ಪವಿತ್ರಾ ಆರ್ಆರ್ ನಗರದ ರಾಜ ರಾಣಿಯಂತೆ ಇದ್ದವರು. ಸಾರಥಿ ಸಾರಾಥ್ಯದಲ್ಲಿ ಗೌಡ್ತಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಬದುಕಿ ಮೆರೆದಿದ್ದರು. ಆದರೀಗ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ಪತ್ನಿ ವಿಜಯಲಕ್ಷ್ಮಿ ಹಾಕಿದ ಅಷ್ಟದಿಗ್ಬಂಧನದಿಂದ ಹೊರ ಬರಲು ದರ್ಶನ್‌ಗೆ ಸಾಧ್ಯವಾಗುತ್ತಿಲ್ಲ. ಹಾಗೇ ವಿಜಯಲಕ್ಷ್ಮೀ ಹಾಕಿದ ದಿಗ್ಬಂಧನವನ್ನು ದಾಟಿ ಪವಿತ್ರಾ ಗೌಡಗೆ ಒಳ ಬರಲು ಆಗುತ್ತಿಲ್ಲ. ಈ ನಡುವೆ ದರ್ಶನ್ ಪವಿತ್ರಾ ಸಹವಾಸ ಸಾಕು ಪತ್ನಿ ಮಗ ಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಪವಿತ್ರಾಗೆ ಟಾಂಗ್ ಕೊಟ್ಟ ದಾಸ- ಫ್ಯಾನ್ಸ್ ಖುಷ್
ದರ್ಶನ್ ಜೈಲಿನಲ್ಲಿ ಇರುವಾಗ ವಿಜಯಲಕ್ಷ್ಮೀ ಬರ್ತಡೇ ಬಂದಿತ್ತು. ಆದರೆ ಗಂಡ ನೋವಿನಲ್ಲಿ ಇರುವಾಗ ಖುಷಿಯಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ವಿಜಯಲಕ್ಷ್ಮೀ ಮನಸ್ಸು ಮಾಡಲಿಲ್ಲ. ಆ ದಿನ ವಿಜಯಲಕ್ಷ್ಮಿ ಒಂದು ಕೇಕ್ ಕೂಡ ಕಟ್ ಮಾಡಿರಲಿಲ್ಲ. ಇದೆಲ್ಲವನ್ನೂ ತಿಳಿದ ದರ್ಶನ್ ಪತ್ನಿಗೆ ಸರ್ಪೈಸ್ ಕೊಟ್ಟಿದ್ದಾರೆ.
ಪತ್ನಿಗೆ ಗೊತ್ತಿಲ್ಲದಂತೆ ಸರ್ಪೈಸ್ ಪಾರ್ಟಿ ಅರೆಂಜ್ ಮಾಡಿಸಿ ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ ದಾಸ. ಇದನ್ನು ನೋಡಿ ಪವಿತ್ರಾ ಅದೆಷ್ಟು ಉರಿದುಕೊಂಡಿದ್ದಾರೋ ಏನೋ ಗೊತ್ತಿಲ್ಲ. ಆದರೆ ಯಾರು ಏನೇ ಅಂದುಕೊಳ್ಳಲಿ ದರ್ಶನ್ ಮಾತ್ರ ಪತ್ನಿ ಮಗನನ್ನು ಬಿಟ್ಟು ಕಾಲು ಕಿತ್ತುತ್ತಿಲ್ಲ. ಪತ್ನಿ ಬಿಟ್ಟು ಒಂದು ನಿಮಿಷವೂ ಇರುತ್ತಿಲ್ಲ. ಇದನ್ನು ನೋಡಿದ ಅಭಿಮಾನಿಗಳು ಬಾಸ್ ನೀವು ಅತ್ತಿಗೆ ಜೊತೆ ಯಾವಾಗಲೂ ಹೀಗೆ ಇರಿ. ಅತ್ತಿಗೆ ಬರ್ತಡೆ ಮಾಡಿ ಪವಿತ್ರಾಗೆ ಟಾಂಗ್ ಕೊಟ್ಟಿದ್ದು ಖುಷಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ದರ್ಶನ್ ವಿಜಯಲಕ್ಷ್ಮೀ ಕಂಡು ಖುಷಿಯಾದ ಫ್ಯಾನ್ಸ್
ಅಲ್ಲದೆ ಫೋಟೋ ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರು ಫೋಟೋಗೆ 'ತಡವಾಗಿ ಆದರೂ ಈ ಸಂಭ್ರಮ ಖುಷಿಯಾಗಿದೆ' ಎಂದು ಬರೆದಿದ್ದಾರೆ. ಇದಕ್ಕೆ ನೆಟ್ಟಿಗರು ಅತ್ತಿಗೆ ಹ್ಯಾಪಿ ಬರ್ತಡೆ ಎಂದು ಕಾಮೆಂಟ್ ಮಾಡಿದ್ದಾರೆ. ಜೈಲಿನಲ್ಲಿ ಇರುವಾಗ ದರ್ಶನ್ ಸಾಕಷ್ಟು ನೋವು ತಿಂದಿದ್ದಾರೆ. ದರ್ಶನ್ ಮಾತ್ರವಲ್ಲ ಅವರ ಪತ್ನಿ ವಿಜಯಲಕ್ಷ್ಮೀ ಕೂಡ ಸಾಕಷ್ಟು ಕಷ್ಟಪಟ್ಟಿದ್ದಾರೆ. ಈ ಶ್ರಮದ ಫಲವಾಗಿ ಈಗ ದರ್ಶನ್ ಹಾಗೂ ವಿಜಯಲಕ್ಷ್ಮೀ ದಾಂಪತ್ಯದಲ್ಲಿ ಸಂತೋಷ ಮತ್ತೆ ಚಿಗುರೊಡೆದಿದೆ. ಇದನ್ನು ಕಂಡು ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.
ಪ್ರೇಮಿಗಳ ದಿನ ಪವಿತ್ರಾ ರೆಡ್ ಕಾರ್ಪೇಟ್ ಸ್ಟೂಡಿಯೋ ರೀ ಲಾಂಚ್
ಇನ್ನೂ ಪವಿತ್ರಾಗೆ ಇದೆಲ್ಲವನ್ನು ನೋಡಿ ಸಹಿಸಲು ಆಗುತ್ತಿಲ್ಲ. ಹೀಗಾಗಿ ದರ್ಶನ್ ಬರುವಿಕೆಗಾಗಿ, ಒಂದೇ ಒಂದು ಪೋನ್ ಕರೆಗಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಈ ಪ್ರೇಮಿಗಳ ದಿನವೇ ಅವರು ಅರ್ಧಕ್ಕೆ ನಿಲ್ಲಿಸಿದ ರೆಡ್ ಕಾರ್ಪೆಟ್ ಸ್ಟೂಡಿಯೋವನ್ನು ಮತ್ತೆ ಆರಂಭಿಸಲು ಬಯಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ದರ್ಶನ್ ಅವರನ್ನು ಆಹ್ವಾನಿಸಲು ಪವಿತ್ರಾ ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.












Click it and Unblock the Notifications