Sudhi remuneration: ಕಾಕ್ರೋಚ್ ಸುಧಿಗೆ ಬಿಗ್‌ಬಾಸ್‌ನಿಂದ ಸಿಕ್ಕ ಸಂಭಾವನೆ ಎಷ್ಟು?
ಕನ್ನಡದ ಉದಯೋನ್ಮುಖ ಖಳನಟನಾಗಿ ಗುರುತಿಸಿಕೊಂಡಿರುವ ಕಾಕ್ರೋಚ್ ಸುಧಿ ಬಿಗ್‌ಬಾಸ್ ಕನ್ನಡ ಸೀಸನ್-12ರ ಸ್ಪರ್ಧಿಯಾಗಿದ್ದರು. ಹಲವು ವಾರಗಳ ಆಟದ ನಂತರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮಿಡ್ ಫಿನಾಲೆ ವಿನ್ನರ್ ಆಗಿದ್ದ ಸುಧಿ, ಗ್ರ್ಯಾಂಡ್ ಫಿನಾಲೆವರೆಗೆ ಇರ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಬಹುಬೇಗನೆ ಕಾಕ್ರೋಚ್ ಎಲಿಮಿನೇಟ್ ಆಗಿದ್ದು ಈಗಲೂ ಪ್ರೇಕ್ಷಕರಿಗೆ ಶಾಕ್ ನೀಡುವ ವಿಚಾರ. ಇನ್ನು ಸುಧಿ ಅವರಿಗೆ ಬಿಗ್‌ಬಾಸ್‌ನಲ್ಲಿ ಭಾರೀ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರೇ ಬಾಯ್ಬಿಟ್ಟಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿನ ಅನುಭವದ ಬಗ್ಗೆ ಮಾತನಾಡಿರುವ ಸುಧಿ, 'ಸುದೀಪಣ್ಣ ಬಕೆಟ್ ಅಂದಾಗಲೇ ನನಗೆ ಗೊತ್ತಾಗಿದ್ದು, ನಾನು ಈ ಟೀಂನಲ್ಲಿದ್ದೀನಿ ಅಂತ. ಅಶ್ವಿನಿ ಮೇಡಂ ಕೂಡ ಅದೇ ಟೈಮಲ್ಲಿ ಬಂದು ನನ್ನ ತಲೆಗೆ ಏನೋ ತುಂಬೋಕೆ ನೋಡ್ತಾರೆ. ನೀವು ಗಿಲ್ಲಿನ ಯಾಕೆ ಹೀಗೆಲ್ಲ ಹೊಗಳಿದ್ರಿ? ಅಂತೆಲ್ಲ ಕೇಳಿದ್ರು. ಆಗ ನನಗೆ ಅವರು ಏನೋ ಹೇರಿಕೆ ಮಾಡ್ತಿದ್ದಾರೆ ಅಂತ ಅನಿಸಿ ಜಗಳ ಕೂಡ ಆಯ್ತು ಎಂದಿದ್ದಾರೆ. ಕೊನೆಯಲ್ಲಿ ನಾವು ಒಂದೇ ಟೀಂಗೆ ಬರ್ತೀವಿ, ಟೀಂಗೋಸ್ಕರ ಆಟ ಆಡಲೇಬೇಕಾಗುತ್ತೆ. ನಾವಿಬ್ಬರೂ ಒಬ್ಬರಿಗೊಬ್ಬರು ಕ್ಷಮೆ ಕೂಡ ಕೇಳಿಕೊಂಡಿದ್ದೀವಿ. ಅದು ಹೊರಗಡೆ ಇದ್ದೋರಿಗೆ ತಿಳಿದಿದೆಯೋ ಗೊತ್ತಿಲ್ಲ' ಎಂದಿದ್ದಾರೆ.

'ಬಿಗ್‌ಬಾಸ್‌ಗೆ ಹೋಗುವ ಮುನ್ನವೂ ಕೈತುಂಬಾ ಸಿನಿಮಾಗಳಿದ್ದವು. ಅಂದು ಆತುರದಲ್ಲಿ ಸಿನಿಮಾ ಮುಹೂರ್ತ ನೆರವೇರಿಸಿದ್ದೇ ಬಿಗ್‌ಬಾಸ್‌ಗೆ ಹೋಗುವ ಕಾರಣಕ್ಕೆ. ಬಿಗ್‌ಬಾಸ್‌ನಿಂದ ಬಂದ ಮೇಲೆಯೇ ಸಿನಿಮಾ ಶುರು ಮಾಡೋದು ಅಂತ ಎಲ್ಲರಿಗೂ ಹೇಳಿದ್ದೆ. ಅಲ್ಲದೆ ಸಿನಿಮಾ ತಂಡದವರೊಂದಿಗೆ ಮಾತುಕತೆ ನಡೆಸಿ, ಬಳಿಕ ಬಿಗ್‌ಬಾಸ್ ಮನೆಗೆ ಹೋದೆ' ಎಂದು ಸುಧಿ ಹೇಳಿದ್ದಾರೆ.
'ಮೂರು ಸಿನಿಮಾ ಲೀಡ್ ರೋಲ್, ಏಳು ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿದ್ದೇನೆ. ಹೀಗಾಗಿ ಎಲ್ಲ ಸಿನಿಮಾದವರ ಮನವೊಲಿಸಬೇಕಾಯ್ತು. ಹಗಲು ರಾತ್ರಿ ಎನ್ನದೆ ಡಬ್ಬಿಂಗ್ ಮಾಡಿದೆ. ಈಗ ಹೊರಗೆ ಬಂದಿರುವುದರಿಂದ ಆ ಸಿನಿಮಾಗಳನ್ನು ಬೇಗ ಮುಗಿಸಬೇಕಿದೆ. ಎಲ್ಲರೂ ರೆಡಿ ಇದ್ದಾರೆ' ಎಂದಿದ್ದಾರೆ.
'ಸಿನಿಮಾಗಳಲ್ಲಿ ಒಳ್ಳೆಯ ಸಂಭಾವನೆ ಇದೆ'
ಇನ್ನು ಸಂಭಾವನೆ ವಿಚಾರದ ಬಗ್ಗೆ ಮಾತನಾಡಿರುವ ಸುಧಿ, 'ನನಗೆ ಹೊರಗಡೆ ಸಂಭಾವನೆ ಚೆನ್ನಾಗಿಯೇ ಇತ್ತು. ಸಿನಿಮಾಗಳಲ್ಲಿ ಸಂಬಳ ಚೆನ್ನಾಗಿಯೇ ಬರುತ್ತದೆ. ಹೀಗಾಗಿ ಬಿಗ್‌ಬಾಸ್ ಕೂಡ ನೋಡೋಣ ಅನ್ನೋದಿತ್ತು. ಬಿಗ್‌ಬಾಸ್‌ನಲ್ಲೂ ಸಂಭಾವನೆ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಲ್ಲ. ನಾವು ಅಲ್ಲಿ ಪಡುವ ಶ್ರಮಕ್ಕೆ ತುಂಬಾ ಒಳ್ಳೆಯ ಸಂಭಾವನೆಯನ್ನೇ ಕೊಡ್ತಾರೆ. ಆದರೆ ಅಲ್ಲಿ ಸಂಭಾವನೆಗೂ ಮೀರಿದ್ದು ಮತ್ತೊಂದಿದೆ. ನಾನು ಕೆಲವನ್ನು ಸಂಬಳಕ್ಕೆ ಮಾಡಿದ್ರೆ, ಇನ್ನೂ ಕೆಲವನ್ನ ಹಂಬಲಕ್ಕೆ ಮಾಡ್ತೀನಿ. ನನಗೆ ಬಿಗ್‌ಬಾಸ್‌ನಲ್ಲಿ ಸಂಬಳ, ಹಂಬಲ ಎರಡೂ ಇತ್ತು' ಎಂದು ಸುಧಿ ಹೇಳಿದ್ದಾರೆ.












Click it and Unblock the Notifications