Chillar Manju: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಚಿಲ್ಲರ್ ಮಂಜು: ಫೋಟೋ ವೈರಲ್
Chillar Manju: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಮೂಲಕ ಮನೆಮಾತಾಗಿರುವ ಚಿಲ್ಲರ್ ಮಂಜು ಅವರು ಕಾರುಣ್ಯ ಎಂಬುವರ ಜೊತೆ ಇಂದು (ಫೆಬ್ರವರಿ 19) ಸದ್ದಿಲ್ಲದೆ, ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ದಾರೆ. ಸರಳವಾಗಿ ನಡೆದ ಈ ಕಾರ್ಯಕ್ರಮದ ಫೋಟೋಗಳನ್ನು ಸ್ವತಃ ಮಂಜು ಅವರೇ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕಲಾವಿದರು ಈ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಕಾಮಿಡಿ ಶೋ ಮೂಲಕ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರೇಕ್ಷಕರನ್ನು ಮನರಂಜಿಸಿರುವ ಮಂಜು, ಈಗ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಮಂಜು ಸಾಮಾಜಿಕ ಜಾಲತಾಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಚಿಲ್ಲರ್ ಮಂಜು ಅವರಿಗೆ ಅಭಿಮಾನಿಗಳು ಮತ್ತು ಸಹ ಕಲಾವಿದರು ಶುಭಾಶಯ ತಿಳಿಸಿದ್ದು, ಇದೀಗ ಮದುವೆ ದಿನಾಂಕ ಯಾವಾಗ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

ವೀಕ್ಷಕರ ಮನಸು ಕದ್ದ ಚಿಲ್ಲರ್ ಮಂಜು
ಇತ್ತೀಚೆಗಷ್ಟೇ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಮತ್ತೊಬ್ಬ ಹಾಸ್ಯ ನಟ ಶಿವು ಹಾಗೂ ಮಾನಸ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಚಿಲ್ಲರ್ ಮಂಜು ಅವರು ಸಹ ಸದಿಲ್ಲದೆ, ನಿಶ್ಚಿತಾರ್ಥ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಜೀವನದಲ್ಲಿ ಏಳುಬೀಳುಗಳನ್ನು ದಾಟಿ ಬಂದಿರುವ ಚಿಲ್ಲರ್ ಮಂಜು ಪಕ್ಕಾ ಗ್ರಾಮೀಣ ಪ್ರತಿಭೆ ಆಗಿದ್ದು, ಕಲರ್ಸ್ ಕನ್ನಡ ವಾಹಿನಿಯಾಲ್ಲಿ ಪ್ರಸಾರ ಆಗುತ್ತಿದ್ದ ಮಜಾ ಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಹಾಸ್ಯದ ಮೂಲಕ ರಂಜಿಸುವ ಮೂಲಕ ವೀಕ್ಷಕರ ಮನಸು ಕದ್ದುಬಿಟ್ಟಿದ್ದಾರೆ ಅಂದ್ರೆ ತಪ್ಪಾಗಲಾರದು.












Click it and Unblock the Notifications