Darshan: ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡಿಲ್ಲ! ಸಾಕ್ಷಿ ಇಲ್ಲಿದೆ ನೋಡಿ ಎಂದ ಚೇತನ್ ಅಹಿಂಸಾ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಬಂಧಿಸಿದ ದಿನದಿಂದ ಇಂದಿನವರೆಗೂ ಒಂದಲ್ಲ ಒಂದು ವಿಚಾರದಲ್ಲಿ ಅವರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ದರ್ಶನ್ ಹಳೆಯ ಗಲಾಟೆಗಳು, ಪತ್ನಿ ಜೊತೆ ಜಗಳ, ಪವಿತ್ರಾ ಗೌಡ ಜೊತೆಗಿನ ಸಂಬಂಧ, ಅವರ ಸ್ನೇಹಿತರ ಬಳಗದ ಬಗ್ಗೆ ಕೂಡ ಸಾಕಷ್ಟು ಚರ್ಚೆಯಾಗುತ್ತಿದೆ. ದರ್ಶನ್ ಅನೇಕ ಬಾರಿ ತಾನು ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದೆ ಎಂದು ಹೇಳಿಕೊಂಡಿದ್ದರು, ಲೈಟ್‌ ಬಾಯ್‌ನಿಂದ ಕನ್ನಡದ ಸೂಪರ್ ಸ್ಟಾರ್ ನಟರಾಗಿ ಬೆಳೆಯಲು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ಹೇಳಿದ್ದರು.

Chetan Ahimsa Says Darshan Did Not Work as a Light Boy

ಅವರು ಬಂಧನವಾದ ಬಳಿಕ ನಿಜಕ್ಕೂ ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದರಾ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಈಗ ಆ ಚರ್ಚೆಗೆ ಚೇತನ್ ಅಹಿಂಸಾ ಸೇರಿಕೊಂಡಿದ್ದು, ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡಿರಲಿಲ್ಲ ಎಂದು ಸಾಕ್ಷಿಯನ್ನು ನೀಡಿದ್ದಾರೆ.

ಚೇತನ್ ಅಹಿಂಸಾ ಹೇಳಿದ್ದೇನು?

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಟ ಚೇತನ್ ಅಹಿಂಸಾ, ದರ್ಶನ್ ಶ್ರೀನಿವಾಸ್ ಅವರು ಛಾಯಾಗ್ರಾಹಕ ಸಹಾಯಕರಾಗಿ ಕೆಲಸ ಮಾಡಿರುವ 'ಜನುಮದ ಜೋಡಿ' (1996) ಚಿತ್ರದ ಶೀರ್ಷಿಕೆ ಕಾರ್ಡ್ ಇಲ್ಲಿದೆ. ಇದೇ ಸಾಕ್ಷಿ ನಟ ದರ್ಶನ್ ಲೈಟ್ ಬಾಯ್ ಅಲ್ಲ ಚಲನಚಿತ್ರೋದ್ಯಮದ ಉದ್ಯೋಗ ಶ್ರೇಣಿಯಲ್ಲಿ, ಲೈಟ್ ಬಾಯ್ ಕೆಳಭಾಗದಲ್ಲಿದ್ದಾನೆ ಮತ್ತು ಕ್ಯಾಮೆರಾ ಸಹಾಯಕ ಎಲ್ಲೋ ಮಧ್ಯದಲ್ಲಿದ್ದಾನೆ ಎಂದು ಹೇಳಿದ್ದಾರೆ.

ಜನುಮದ ಜೋಡಿ ಶೀರ್ಷಿಕೆ ಕಾರ್ಡ್ ಫೋಟವನ್ನು ಕೂಡ ಚೇತನ್ ಹಂಚಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಕ ಬಿ.ಸಿ. ಗೌರಿಶಂಕರ್ ಅವರಿಗೆ ದರ್ಶನ್ ತೂಗುದೀಪ ಅವರು ಸಹಾಯಕರಾಗಿ ಕೆಲಸ ಮಾಡಿದ್ದರು ಎಂದು ಹೇಳಿದ್ದಾರೆ.

ಸುಮಲತಾ ಮೌನದ ಬಗ್ಗೆಯೂ ಪ್ರಶ್ನೆ

ನಟ ದರ್ಶನ್ ಬಂಧನವಾಗಿ 10 ದಿನವಾಗಿದೆ. ದರ್ಶನ್ ಅವರ ರಕ್ಷಣೆಗೆ ಸಾಕಷ್ಟು ತೆರೆಮರೆಯ ಪ್ರಯತ್ನಗಳೂ ನಡೆದರೂ, ಪೊಲೀಸರು ಮಾತ್ರ ಸಮರ್ಥವಾಗಿ ಪ್ರಕರಣವನ್ನು ತನಿಖೆ ಮಾಡಿ 17 ಜನರನ್ನು ಬಂಧಿಸಿದ್ದಾರೆ. ದರ್ಶನ್‌ ತನ್ನ ತಾಯಿ ಎಂದೇ ಹೇಳಿಕೊಳ್ಳುತ್ತಿದ್ದ ಸುಮಲತಾ ಮಾತ್ರ ದರ್ಶನ್ ಬಂಧನದ ಬಗ್ಗೆ ಈವರೆಗೂ ಯಾವ ಪ್ರತಿಕ್ರಿಯೆ ನೀಡದೇ ಇರುವುದನ್ನು ಚೇತನ್ ಅಹಿಂಸಾ ಪ್ರಶ್ನೆ ಮಾಡಿದ್ದಾರೆ.

ಟ್ವೀಟ್ ಮಾಡಿರುವ ಚೇತನ್, "ದರ್ಶನ್ ಬಂಧನವಾಗಿ ಒಂದು ವಾರವಾದರೂ ಕನ್ನಡ ಚಿತ್ರರಂಗದ ಹಲವು ಇನ್ನೂ ಮೌನವಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಯ ಲಾಭಕ್ಕಾಗಿ ದರ್ಶನ್ ಅವರ ಸ್ಟಾರ್ ಶಕ್ತಿಯನ್ನು ಬಳಸಿಕೊಂಡ ಸುಮಲತಾ ಅಂಬರೀಶ್ ಅವರನ್ನು ತಮ್ಮ ಹಿರಿಯ ಮಗ ಎಂದು ಕರೆದಿದ್ದರು. ತನ್ನ ಮಗನ ಘಟನೆಗಳ ಬಗ್ಗೆ ಸುಮಲತಾ ಏನು ಹೇಳುತ್ತಾರೆ? ಪಲಾಯನವಾದ ಆಯ್ಕೆಯಲ್ಲ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+