Chandan Shetty - Niveditha Gowda: ಅಳುತ್ತಿದ್ದ ನಿವೇದಿತಾ ಗೌಡರನ್ನು ತಬ್ಬಿಕೊಂಡು ಸಂತೈಸಿದ ಚಂದನ್ ಶೆಟ್ಟಿ!
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ವರ್ಷ ಖುಷಿಯಾಗಿ ಸಂಸಾರ ನಡೆಸಿದ್ದ ಈ ಜೋಡಿ ಬಳಿಕ ವಿಚ್ಛೇದನ ಪಡೆದು ಬೇರೆಯಾಗಿತ್ತು. ಇಬ್ಬರ ನಡುವೆ ಹೊಂದಾಣಿಕೆ ಆಗದ ಕಾರಣ ವಿಚ್ಛೇದನ ಪಡೆದಿರುವುದಾಗಿ ಇಬ್ಬರೂ ಸ್ಪಷ್ಟಪಡಿಸಿದ್ದರು. ವಿಚ್ಛೇದನ ಪಡೆದ ಒಂಬತ್ತು ತಿಂಗಳ ಬಳಿಕ ಈ ಜೋಡಿ ಮಂಗಳವಾರ ಮತ್ತೆ ಜೊತೆಯಾಗಿ ಪ್ರೆಸ್‌ಮೀಟ್ ನಡೆಸಿದೆ.
ಚಂದನ್ ಶೆಟ್ಟಿ ಅಳುತ್ತಿದ್ದ ನಿವೇದಿತಾ ಗೌಡರನ್ನು ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ಮಂಗಳವಾರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರು ಮತ್ತೆ ಒಂದಾದ್ರಾ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ ಇದಕ್ಕೆ ಬಳಿಕ ಉತ್ತರ ಸಿಕ್ಕಿದೆ.

ಡಿವೋರ್ಸ್ ಪಡೆದರೂ ಈ ಜೋಡಿ ಈಗ ತೆರೆ ಮೇಲೆ ಒಂದಾಗಿದೆ. ಮುದ್ದು ರಾಕ್ಷಸಿ ಎನ್ನುವ ಸಿನಿಮಾದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿಯಾಗಿ ನಟಿಸಿದ್ದಾರೆ. ಮಂಗಳವಾರ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಶೂಟಿಂಗ್ ವೇಳೆ ನಿವೇದಿತಾ ಗೌಡ ಅಳುತ್ತಿದ್ದು ಚಂದನ್ ಶೆಟ್ಟಿ ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ.
ಮುದ್ದು ರಾಕ್ಷಸಿ ಸಿನಿಮಾದ ಕೊನೆಯ ದೃಶ್ಯ ಇದಾಗಿದೆ ಎಂದು ಹೇಳಲಾಗಿದೆ. ಈ ದೃಶ್ಯದಲ್ಲಿ ನಿವೇದಿತಾ ಗೌಡ ಚಂದನ್ ಶೆಟ್ಟಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನೀವಿಬ್ಬರು ಮತ್ತೆ ಒಂದಾಗಿ ಎಂದು ಕಮೆಂಟ್ ಮಾಡಿದ್ದಾರೆ. ಈ ಜೋಡಿ ಜೊತೆಯಾಗಿದ್ದಾಗಲೇ ಈ ಸಿನಿಮಾವನ್ನು ಒಪ್ಪಿಕೊಂಡಿದ್ದರು. ತಮ್ಮ ಖಾಸಗಿ ಭಿನ್ನಾಭಿಪ್ರಾಯ ಏನೇ ಇದ್ದರೂ ಅದು ವೃತ್ತಿ ಜೀವನಕ್ಕೆ ಅಡ್ಡಿಯಾಗಬಾರದು ಎಂದು ಜೊತೆಯಾಗಿ ನಟಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಕೊನೆಯ ದಿನದ ಚಿತ್ರೀಕರಣದ ಬಳಿಕ ಜಂಟಿಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಹಲವು ವಿಚಾರಗಳನ್ನು ಮಾತನಾಡಿದರು. ಮನುಷ್ಯ ಎಂದಮೇಲೆ ಭಾವನೆಗಳಿರುತ್ತವೆ, ನಾವು ನಾಲ್ಕು ವರ್ಷ ಜೊತೆಯಾಗಿದ್ದವರು. ಈಗ ದೂರವಾಗಿದ್ದೇವೆ, ಶೂಟಿಂಗ್ ಕೊನೆಯ ದಿನವಾಗಿದ್ದರಿಂದ ಹಿಂದಿನ ದಿನವೇ ಮನಸ್ಸು ಗಟ್ಟಿಯಾಗಿಟ್ಟುಕೊಳ್ಳಬೇಕು ಎಂದುಕೊಂಡಿದ್ದೆ. ವೈಯಕ್ತಿಕ ಜೀವನವನ್ನು ವೃತ್ತಿ ಜೀವನದ ಜೊತೆ ಸೇರಿಸುವುದು ಒಳ್ಳೆಯದಲ್ಲ, ಆದರೂ ಇಬ್ಬರು ವೃತ್ತಿಜೀವನದಲ್ಲಿ ಮುಂದುವರೆಯಬೇಕು ಎಂದರು. ಸಿನಿಮಾದಲ್ಲಿ ನಿವೇದಿತಾ ಗೌಡ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ನಾನು ಬಾಯ್‌ಫ್ರೆಂಡ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು.
ನಿವೇದಿತಾ ಗೌಡ ಮಾತನಾಡಿ, ನಾಲ್ಕು ವರ್ಷ ನಾವು ಉತ್ತಮ ಬಾಂಧವ್ಯ ಹೊಂದಿದ್ದೇನೆ, ಇದು ತುಂಬಾ ಎಮೋಶನಲ್ ಆಗಿತ್ತು. ಯಾವುದೇ ಸಿನಿಮಾ ಆದರೂ ಶೂಟಿಂಗ್ ಕೊನೆಯ ದಿನ ಬೇಸರ ಆಗುತ್ತದೆ. ಇಂದು ಈ ಸಿನಿಮಾ ಶೂಟಿಂಗ್ ಮುಗಿದಿದ್ದು ನನಗೆ ತುಂಬಾ ಅಳು ಬಂತು, ಸಿನಿಮಾದ ಕಥೆ ನನಗೆ ತುಂಬಾ ಇಷ್ಟ ಆಗಿದೆ ಎಂದು ಹೇಳಿದರು.












Click it and Unblock the Notifications