Chandan Shetty: ಕೊನೆಗೂ ಆ ವಿಷಯದ ಬಗ್ಗೆ ಗುಡ್‌ನ್ಯೂಸ್ ಕೊಟ್ಟೇಬಿಟ್ರು ಚಂದನ್ ಶೆಟ್ಟಿ
ಕನ್ನಡದ ರ್‍ಯಾಪರ್, ಬಿಗ್‌ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಡಿವೋರ್ಸ್ ನೀಡಿ ತಮ್ಮ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೂ ಈ ವಿಚಾರದ ಬಗ್ಗೆ ಚರ್ಚೆಗಳು ನಿಲ್ಲಲೇ ಇಲ್ಲ. ವೈಯಕ್ತಿಕ ಕಾರಣಗಳಿಂದ ಇಬ್ಬರೂ ಪರಸ್ಪರ ಡಿವೋರ್ಸ್ ಪಡೆದ ಕಾರಣ ಚಂದನ್ ಶೆಟ್ಟಿ ಎರಡನೇ ಮದುವೆಯಾಗುವುದು ಒಳ್ಳೆಯದು ಎಂದು ಅವರ ಫ್ಯಾನ್ಸ್ ಆಸೆ ಬಿಚ್ಚಿಡುತ್ತಲೇ ಇದ್ದಾರೆ. ತಮ್ಮ ಎರಡನೇ ಮದುವೆ ಬಗ್ಗೆ ಚಂದನ್ ಇತ್ತೀಚೆಗಷ್ಟೇ ಕೆಲ ಸುಳಿವುಗಳನ್ನ ನೀಡಿದ್ದರು. ಇದರ ನಡುವೆ ಚಂದನ್ ಶೆಟ್ಟಿ ಕೊನೆಗೂ ಒಂದು ದೊಡ್ಡ ಗುಡ್‌ನ್ಯೂಸ್ ಕೊಟ್ಟೇಬಿಟ್ಟಿದ್ದಾರೆ. ಅದೇನು ಗೊತ್ತಾ?
ಡಿವೋರ್ಸ್ ಬಗ್ಗೆ ಮೌನ ಮುರಿದಿದ್ದ ಚಂದನ್ ಶೆಟ್ಟಿ ತನ್ನನ್ನು ತಾನು ಕಳೆದುಕೊಂಡಿದ್ದಾಗಿ ಹೇಳಿದ್ದರು. ಅಲ್ಲದೆ ಅವರ ಅಭಿಮಾನಿಗಳು ಕೂಡ ನಮಗೆ ಮೊದಲಿನ ಚಂದನ್ ಶೆಟ್ಟಿ ಬೇಕು ಎಂದು ಕಾಮೆಂಟ್ ಮಾಡುತ್ತಿದ್ದ ವಿಚಾರವನ್ನೂ ಅವರೇ ಹೇಳಿಕೊಂಡಿದ್ದರು. ನಾನು ಮದುವೆಯಾದ ಮೇಲೆ ಮೊದಲಿದ್ದ ಜೋಶ್ ಕಡಿಮೆಯಾಗಿತ್ತು. ಮದುವೆ ನಂತರವೂ ಕೆಲವೊಂದು ವಿಚಾರದಲ್ಲಿ ಹೊಂದಾಣಿಕೆಯಾಗದ ಕಾರಣ ಡಿವೋರ್ಸ್ ಪಡೆದೆವು. ಈಗ ನನ್ನ ಗುರಿ ಏನಿದ್ರೂ ನನ್ನ ಕೆಲಸ ಮೇಲಷ್ಟೇ. ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಏನಾದರೂ ಮಾಡಬೇಕು ಅನ್ನೋದೆ ನನ್ನ ಕನಸು ಎಂದಿದ್ದರು.

ಗೇಲ್ ಜೊತೆ ಕಾಣಿಸಿಕೊಂಡ ಚಂದನ್
ಇದೀಗ ಚಂದನ್ ಅವರ ಕನಸು ನನಸಾಗುವ ಸಮಯ ಸನಿಹಕ್ಕೆ ಬಂದಿದೆ. ಇಲ್ಲಿವರೆಗೆ ಕನ್ನಡದಲ್ಲಿ ರ್‍ಯಾಪ್ ಹಾಡುಗಳನ್ನು ಹಾಡುತ್ತಾ ರಂಜಿಸುತ್ತಿದ್ದ ಚಂದನ್ ಏಕಾಏಕಿ ಗ್ಲೋಬಲ್ ರೇಂಜ್‌ಗೆ ತಲುಪಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಯೂನಿವರ್ಸಲ್ ಬಾಸ್ ಎಂದೇ ಕರೆಸಿಕೊಂಡಿರುವ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ಕಾಣಿಸಿಕೊಳ್ಳುವ ಮೂಲಕ ಚಂದನ್ ಶೆಟ್ಟಿ ಸರ್‌ಪ್ರೈಸ್ ನೀಡಿದ್ದಾರೆ. ಇದರೊಂದಿಗೆ ಹೊಸ ವಿಚಾರವೊಂದನ್ನು ಕೂಡ ಹಂಚಿಕೊಂಡಿದ್ದಾರೆ.
ಚಂದನ್ ಶೆಟ್ಟಿ ಅವರು ಸದ್ಯ ವಿದೇಶಕ್ಕೆ ಹಾರಿದ್ದು, ಕ್ರಿಸ್ ಗೇಲ್ ಜೊತೆ ಕಾರಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಗೇಲ್ ಅವರೇ ಚಂದನ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಚಂದನ್ ಶೆಟ್ಟಿ ಜೊತೆ ಒಂದು ವಿಡಿಯೋ ಸಾಂಗ್ ಶೂಟ್ ಮಾಡುತ್ತಿರುವುದಾಗಿಯೂ ಗೇಲ್ ಹೇಳಿದ್ದಾರೆ. ಬೆಂಗಳೂರಿನ ನನ್ನ ಸ್ನೇಹಿತ, ರಾಕ್ ಸ್ಟಾರ್ ಚಂದನ್ ಶೆಟ್ಟಿ ಎಂದು ಗೇಲ್ ಕರೆದಿದ್ದಾರೆ.
ನಾವಿಬ್ಬರೂ ಸೇರಿ ಒಂದು ಹಾಡು ಮಾಡುತ್ತಿದ್ದೇವೆ. ಅದರ ಹೆಸರು ಲೈಫ್ ಈಸ್ ಕ್ಯಾಸಿನೋ, ನಾನು ತುಂಬಾ ಎಕ್ಸೈಟ್ ಆಗಿದ್ದೇನೆ. ನಾನು ಕೂಡ ಈ ಹಾಡಿಗೆ ಫ್ಯಾನ್ ಆಗಿದ್ದೇನೆ ಎಂದು ಚಂದನ್ ಶೆಟ್ಟಿ ಖುಷಿಯಿಂದ ಹೇಳಿಕೊಂಡಿದ್ದಾರೆ. ರಾಪ್ ಭಾಗವನ್ನು ನಮ್ಮ ಬಾಸ್ ಅದ್ಭುತವಾಗಿ ಮಾಡಿದ್ದು, ಅವರಿಗೆ ನಾನೇ ಫ್ಯಾನ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಈ ಹಾಡು ಇಷ್ಟವಾಗುತ್ತೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಚಂದನ್ ಜೊತೆಗೆ ಈ ಕೊಲ್ಯಾಬ್ ಖುಷಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ ಗೇಲ್.












Click it and Unblock the Notifications