ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬಗ್ಗೆ ಹೇಳುವುದು ಕೇಳಿದರೆ ತುಂಬಾ ಬೇಜಾರಾಗುತ್ತೆ- ನಿವೇದಿತಾ ಗೌಡ!
ಬೆಂಗಳೂರು ಜೂನ್ 10: 'ನಿವೇದಿತಾ ಜೊತೆ ನಾನು ಡಿವೋರ್ಸ್ ತೆಗೆದುಕೊಳ್ಳಲು ವೈಯಕ್ತಿಕ ಕಾರಣಗಳಿವೆ. ಅದನ್ನು ಬಹಿರಂಗಪಡಿಸುವ ಮನಸ್ಸು ನನಗಿಲ್ಲ. ಆದರೆ ನಮ್ಮಿಬ್ಬರ ವಿಚ್ಚೇದನದ ಬಗ್ಗೆ ಸಾಕಷ್ಟು ವದಂತಿಗಳನ್ನು ಹಬ್ಬಿಸಿದ್ದಾರೆ. ಇದು ನಮ್ಮಿಬ್ಬರಿಗೂ ತುಂಬಾ ನೋವನ್ನು ತಂದಿದೆ' ಎಂದು ಚಂದನ್ ಶೆಟ್ಟಿ ನೋವಿನಿಂದ ಹೇಳಿಕೊಂಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ತಮ್ಮ ಹಾಗೂ ನಿವೇದಿತಾ ಗೌಡ ನಡುವೆ ಯಾವುದೇ ವೈಮನಸ್ಸು ಇಲ್ಲ. ನಾವಿಬ್ಬರು ಪರಸ್ಪರ ಒಮ್ಮತದಿಂದ ವಿಚ್ಚೇದನ ಪಡೆದುಕೊಂಡಿದ್ದೇವೆ. ಅದನ್ನು ನಾವಿಬ್ಬರು ಗೌರವಿಸಿದ್ದೇವೆ ಎಂದು ಹೇಳಿದರು.

'ನಮ್ಮಿಬ್ಬರ ನಡುವೆ ಪ್ರತಿದಿನ ಮನಸ್ತಾಪಗಳು ಬರುತ್ತಿತ್ತು. ನಾನು ರಾತ್ರಿ ಬೇಗ ಎಳುತ್ತಿದ್ದೆ, ನಿವೇದಿತಾ ರಾತ್ರಿ ಲೇಟಾಗಿ ಮಲಗಿ ಲೇಟಾಗಿ ಏಳ್ತಾಯಿದ್ದರು. ಒಬ್ಬರಿಗೊಬ್ಬರೂ ಟೈಮ್ ಕೊಡಲು ಆಗಲಿಲ್ಲ. ಅದನ್ನು ನಾನು ತಪ್ಪು ಅಂತನೂ ಹೇಳ್ತಾಯಿಲ್ಲ. ಅವರ ಜೀವನ ಶೈಲಿ ಯೋಚನೆ ಹಾಗೂ ನನ್ನ ಜೀವನ ಶೈಲಿ ಯೋಚನೆ ಬೇರೆಯಾಗಿತ್ತು. ಅದನ್ನು ಅರ್ಥ ಮಾಡಿಕೊಂಡು ಹೋಗುವ ಪ್ರಯತ್ನ ಮಾಡಿದ್ವಿ. ಆದರೆ ಅದು ಆಗಲಿಲ್ಲ. ಹೀಗಾಗಿ ನಾವಿಬ್ಬರೂ ಪರಸ್ಪರ ಒಪ್ಪಿ ವಿಚ್ಚೇದನ ಪಡೆದುಕೊಂಡೆವು' ಎಂದು ಚಂದನ್ ವಿಚ್ಚೇದನಕ್ಕೆ ಕಾರಣ ಹೇಳಿಕೊಂಡರು.
'ಭೂಮಿ ಮೇಲೆ ಸ್ವಾತಂತ್ರ್ಯವಾಗಿ ಇರುವುದು ಪ್ರತಿಯೊಬ್ಬರ ಹಕ್ಕು. ಹೀಗಾಗಿ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ನಾವು ವಿಚ್ಚೇದನ ಪಡೆದಿದ್ದೇವೆ. ನಮ್ಮ ಖಾಸಗಿ ವಿಚಾರ ನಮ್ಮಲ್ಲೇ ಇರಲು ಬಿಡಿ. ನನ್ನ ಜೀವನ ಶೈಲಿ, ಯೋಚನೆ ನನ್ನದು. ಅವರ ಜೀವನ ಶೈಲಿ ಯೋಚನೆ ಅವರದ್ದು. ಅದು ಹೊಂದಾಣಿಕೆ ಆಗುತ್ತಿರಲಿಲ್ಲ'.
'ಹೀಗಾಗಿ ನಾವಿಬ್ಬರಿ ವಿಚ್ಚೇದನಕ್ಕೆ ಮುಂದಾದ್ವಿ. ಇದಕ್ಕೆ ಅನೇಕರು ಅನೇಕ ರೀತಿಯ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಿವೇದಿತಾಗೆ ಬೇರೆಯವರೊಂದಿಗೆ ಸಂಪರ್ಕ, ಮಗು ಮಾಡಿಕೊಳ್ಳಲು ಒಪ್ಪುತ್ತಿಲ್ಲ, ಹಾಗೆ ಹಣದ ವಿಚಾರದಿಂದ ವಿಚ್ಚೇದನ ಪಡೆದುಕೊಂಡಿದ್ದೇವೆ ಅನ್ನೋದು ಸುಳ್ಳು. ಸಣ್ಣ ವಿಚಾರಗಳಿಂದಾಗಿ ನಮ್ಮಿಬ್ಬರ ನಡುವೆ ಹೊಂದಾಣಿಕೆಯಾಗದೇ ನಾವಿಬ್ಬರು ವಿಚ್ಚೇದನ ಪಡೆದಿದ್ದೇವೆ' ಎಂದು ಚಂದನ್ ಸ್ಪಷ್ಣನೆ ನೀಡಿದರು.
'ಹಾಗಂತ ದೊಡ್ಡದಾಗಿ ಜಗಳ ಮಾಡಿ. ಇನ್ನೊಂದು ಮಗದೊಂದು ಏನೂ ಆಗಿಲ್ಲ. ನಾವು ವಿಚ್ಚೇದನ ಪಡೆದುಕೊಂಡಿದ್ದೇವೆ ಅಷ್ಟೆ. ಮುಂದಿನ ದಿನಗಳಲ್ಲಿ ಒಬ್ಬರಿಗೊಬ್ಬರು ಸಪೋರ್ಟಿವ್ ಆಗಿ ಇರುತ್ತೇವೆ. ಒಳ್ಳೆ ಸ್ನೇಹಿತರಾಗಿ, ಖುಷಿಯಾಗಿ ಇರುತ್ತೇವೆ. ನಾವು ಮದುವೆ ಆಗುವಾಗ ಹೇಗೆ ಖುಷಿಯಿಂದ ಇದ್ವೋ ಹಾಗೇ ಈಗಲೂ ಪರಸ್ಪರ ಒಪ್ಪಿ ವಿಚ್ಚೇದನ ಪಡೆದಿದ್ದೇವೆ' ಎಂದು ನಿವೇದಿತಾ ಗೌಡ ವದಂತಿಗಳಿಗೆ ತೆರೆ ಎಳೆದರು.











Click it and Unblock the Notifications