ನಟ ದರ್ಶನ್ ಅವರ ಕೈಗೆ ಸರ್ಜರಿ ಸಕ್ಸಸ್, ಈಗ ಹೇಗಿದ್ದಾರೆ?
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೈಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ಸೇರಿ, ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ವಿಚಾರ ನಟ ದರ್ಶನ್ ಅವರ ಅಭಿಮಾನಿಗಳಿಗೆ ತುಂಬಾ ಟೆನ್ಷನ್ ಕೊಟ್ಟಿತ್ತು. ಅಲ್ಲದೆ ಈ ಬಗ್ಗೆ ಅಭಿಮಾನಿಗಳು ಚಿಂತಿತರಾಗಿದ್ದರು. ಇದೀಗ ನಟ ದರ್ಶನ್ ಅವರ ಕೈಗೆ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮುಗಿಸಿದ್ದಾರೆ. ಹಾಗಾದರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆರೋಗ್ಯ ಈಗ ಹೇಗಿದೆ? ಬನ್ನಿ ತಿಳಿಯೋಣ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಗಾಯಗೊಂಡಿದ್ದರು 'ಡೆವಿಲ್' ಚಿತ್ರದ, ಚಿತ್ರೀಕರಣದ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಎಡಗೈ ನೋವಿನ ನಡುವೆ ಕೂಡ, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈಗ ದರ್ಶನ್ ಅವರ ಕೈಗೆ ಶಸ್ತ್ರ ಚಿಕಿತ್ಸೆ ಆಗಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳು ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಆದಷ್ಟು ಬೇಗ ತಮ್ಮ ನೆಚ್ಚಿನ ನಟ ದರ್ಶನ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಹಾಗಾದ್ರೆ ನಟ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಆಗಿದ್ದು ಎಲ್ಲಿ? ಬನ್ನಿ ತಿಳಿಯೋಣ.

ನಟ ದರ್ಶನ್ ಅವರಿಗೆ ಆಪರೇಷನ್ ಆಗಿದ್ದೆಲ್ಲಿ?
ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಈ ಘಟನೆಯಿಂದ ಬೆಚ್ಚಿಬಿದ್ದರು. ಆ ನಂತರ ಕೈ ನೋವು ಇದ್ದರೂ, ನಟ ದರ್ಶನ್ ಅವರು ಶೂಟಿಂಗ್‌ಗೆ ಹಾಜರ್ ಆಗಿದ್ದರು. ಇನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದರ್ಶನ್ ಅವರ ಕೈಗೆ ಸರ್ಜರಿ ಮಾಡಲಾಗಿದ್ದು. ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ದರ್ಶನ್ ಅವರು ತಮ್ಮ ಅಭಿಮಾನಿ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೊ ವೈರಲ್ ಆಗುತ್ತಿದೆ. ಫೋಟೋ ನೋಡಿದ ಫ್ಯಾನ್ಸ್ ಈಗ ಆದಷ್ಟು ಬೇಗ ಗುಣಮುಖರಾಗಿ ಬಾಸ್ ಎಂದು ಪ್ರಾರ್ಥಿನೆ ಮಾಡುತ್ತಿದ್ದಾರೆ.
'ಆಗ ಎಡಗೈ.. ಈಗ ಬಲಗೈ..' ಎಂದಿದ್ದರು
ಮಂಡ್ಯದಲ್ಲಿ ನಡೆದ ಸುಮಲತಾ ಅಂಬರೀಶ್ ಬೆಂಬಲಿಗರ ಸಭೆಗೆ ಕೂಡ, ಬೆಲ್ಟ್ ಧರಿಸಿ ದರ್ಶನ್ ಬಂದಿದ್ದರು. ನೋವು ಹೆಚ್ಚಾದ ಕಾರಣ ಕೈಗೆ ಬೆಲ್ಟ್ ಧರಿಸಿ ಓಡಾಡಿದ್ದರು. ವೇದಿಕೆಯಲ್ಲೇ ತಮ್ಮ ಕೈಗೆ ನೋವು ಆಗಿರುವ ಬಗ್ಗೆ & ಶಸ್ತ್ರ ಚಿಕಿತ್ಸೆ ಬಗ್ಗೆ ತಿಳಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಬೇಕು ಎಂಬ ಕಾರಣಕ್ಕೆ ಸರ್ಜರಿ 2 ದಿನ ಮುಂದೂಡಿಕೆ ಮಾಡಿದ್ದರು ಎಂಬ ಮಾಹಿತಿ ಹೊರ ಬಿದ್ದಿತ್ತು. ಹಾಗೇ, ನಾನು ಕಳೆದ ಬಾರಿ ಬಂದಾಗ ಬಲಗೈ ಮುರಿದಿತ್ತು, ಇದೀಗ ಎಡಗೈ ಎಂದಿದ್ದರು. ಈಗ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣ್ತಿದ್ದಾರೆ ನಟ ದರ್ಶನ್ ಅವರು.
'ಡೆವಿಲ್' ಅಬ್ಬರಕ್ಕೆ ವೇದಿಕೆ ರೆಡಿ
ಮತ್ತೊಂದು ಕಡೆ ಮಿಲನಾ ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ನಿರೀಕ್ಷೆನ ಮೂಡಿಸಿದೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಈ ಸಿನಿಮಾಗೆ ದೊಡ್ಡ ಸೆಟ್ ಹಾಕಿ ಫೈಟ್ ಸನ್ನಿವೇಶ ಸೆರೆ ಹಿಡಿಯಲಾಗಿದ್ದು. ಚಿತ್ರೀಕರಣದ ವೇಳೆ ದರ್ಶನ್ ಅವರ ಕೈಗೆ ಪೆಟ್ಟಾಗಿತ್ತು ಎನ್ನಲಾಗಿದೆ. ಕೈ ನೋವಿಗೆ ಪಟ್ಟಿ ಧರಿಸಿ ಮ್ಯಾಟ್ನಿ ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ದರ್ಶನ್ ಅವರು ಬಂದಿದ್ದರು. ಈಗ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದ್ದು, ನಟ ದರ್ಶನ್ ಅವರು ಆಸ್ಪತ್ರೆಯಲ್ಲಿ ಇದ್ದಾರೆ.












Click it and Unblock the Notifications