ಅಯ್ಯೋ ತಗಡೇ.. ಅಂದ್ರು ‘ಡಿ-ಬಾಸ್’: ನಿರ್ಮಾಪಕ ಉಮಾಪತಿಗೆ ವಾರ್ನಿಂಗ್?
'ಡಿ-ಬಾಸ್' ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿಮಾಸ್ ಗೌಡ ನಡುವೆ ಕಿರಿಕ್ ಬಲು ಜೋರಾಗಿದೆ. ಅದ್ರಲ್ಲೂ ಇಂದು 'ಕಾಟೇರ' ಸಿನಿಮಾದ 50 ದಿನಗಳ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ನಿರ್ಮಾಪಕ ಉಮಾಪತಿಗೆ 'ಅಯ್ಯೋ ತಗಡೇ..' ಅಂತಾ ಹೇಳಿದ್ದಾರೆ. ಅಷ್ಟಕ್ಕೂ ನಟ ದರ್ಶನ್ ಅವರು ಇದೀಗ ಉಮಾಪತಿ ಅವರಿಗೆ ಕೊಟ್ಟ ವಾರ್ನಿಂಗ್ ಹೆಂಗಿತ್ತು ಗೊತ್ತಾ? ಮುಂದೆ ಓದಿ.
ಅಷ್ಟಕ್ಕೂ ಡಿ-ಬಾಸ್ ದರ್ಶನ್ ಅಭಿನಯ ಮಾಡಿರುವ ಸಿನಿಮಾ 'ಕಾಟೇರ' ಬರೋಬ್ಬರಿ 50 ದಿನಗಳನ್ನ ಯಶಸ್ವಿಯಾಗಿ ಪೂರೈಸಿದೆ. 'ಕಾಟೇರ' ಸಿನಿಮಾ 50 ದಿನ ಪೂರೈಸಿದ ಕಾರಣಕ್ಕೆ ಇಂದು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಪ್ರಸನ್ನ ಸಿನಿಮಾ ಮಂದಿರದಲ್ಲಿ ಕಾಟೇರ ಸಿನಿಮಾದ 50ನೇ ದಿನ ಸಂಭ್ರಮಾಚರಣೆ ನಡೆಯಿತು. ಇನ್ನು ಸಂಭ್ರಮ ನಡೆಯುವ ವೇಳೆ ದರ್ಶನ್ ಅವರು, ತಮ್ಮ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದರು. ಇದೇ ಸಮಯದಲ್ಲಿ ಉಮಾಪತಿ ಅವರು ಹೇಳಿದ್ದ ಮಾತಿಗೆ ಉತ್ತರ ನೀಡುತ್ತಾ ಎಚ್ಚರಿಕೆಯ ಕೂಡ ಕೊಟ್ಟಿದ್ದಾರೆ. ಹಾಗಾದರೆ ನಟ ದರ್ಶನ್ ಹೇಳಿದ್ದೇನು ಗೊತ್ತೆ? ವಿಡಿಯೋಗಾಗಿ ಈಗ ಮುಂದೆ ಓದಿ.

'ಅಯ್ಯೋ ತಗಡೇ, ರಾಬರ್ಟ್ ಕಥೆ..'
ಹೌದು, ನಿರ್ಮಾಪಕ ಉಮಾಪತಿ ವಿರುದ್ಧ ಫುಲ್ ಗರಂ ಆದ ನಟ ದರ್ಶನ್ ಅವರು ಈಗ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಅದು ಹೇಗೆ ಅಂದ್ರೆ, 'ಅಯ್ಯೋ ತಗಡೇ, ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದ್ರೆ ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?' ಅಂತಾನೆ ಡಿ-ಬಾಸ್ ದರ್ಶನ್ ಗುಡುಗಿದ್ದಾರೆ. ಈ ಮೂಲಕ ಕಾಟೇರ ಕಥೆ ಬಿಟ್ಟುಕೊಟ್ಟಿದ್ದು ಯಾಕೆ? ಅಂತಾ ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ದಾರೆ, ಡಿ-ಬಾಸ್ ದರ್ಶನ್. ಸಂಪೂರ್ಣ ವಿಡಿಯೋಗೆ ಮುಂದೆ ಓದಿ.
'ಕಾಟೇರ್ ಟೈಟಲ್ ಕೊಟ್ಟಿದ್ದೇ ನಾನು'
ತಮ್ಮ ಮಾತನ್ನು ಮುಂದುವರಿಸಿದ ನಟ ದರ್ಶನ್ 'ಕೊಟ್ಟಿದ್ದು, ಮಾಡಿದ್ದು ಹೇಳಬಾರದು. ಒಂದ್ಸಲ ಆಗಿರೋ ಘಟನೆಯಿಂದ ಬುದ್ದಿ ಕಲಿತಿಲ್ಲ. ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು? ನಿನ್ನ ಜಡ್ಜ್‌ಮೆಂಟ್ ಚೆನ್ನಾಗಿದೆ, ಬಟ್ ಯಾಕೆ ಈ ಕಥೆ ಬಿಟ್ಟಿದ್ದು? ಕಾಟೇರ ಟೈಟಲ್ ಕೊಟ್ಟಿದ್ದೇ ನಾನು' ಅಂತಾ ಇದೀಗ ನಟ ದರ್ಶನ್ ನೇರವಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹೀಗೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಅವರ ನಡುವೆ ದೊಡ್ಡ ಕದನ ಮತ್ತೊಮ್ಮೆ ಶುರುವಾದ ರೀತಿ ಕಾಣುತ್ತಿದೆ. ದರ್ಶನ್ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ.
#Kaatera 50th Day Celebration @dasadarshan About Umapathy Regarding #Kaatera Title Cridit #DBoss #DarshanThoogudeepa#Kaatera50days pic.twitter.com/6By9gMMPEA
— Nagabharana Gubbi (@nagabharangubbi) February 20, 2024
ಕಾಟೇರ ಓಟಿಟಿ ಅಬ್ಬರ ಹೇಗಿದೆ?
ಓಟಿಟಿ ಅಖಾಡದಲ್ಲಿ ಕೂಡ ಕಾಟೇರ ಸಿನಿಮಾ ನೋಡಿ ಕನ್ನಡಿಗರು ಒಳ್ಳೇ ರಿವ್ಯೂ ಕೊಟ್ಟಿದ್ದಾರೆ. ನಾವು ಈ ಸಿನಿಮಾ ಥಿಯೇಟರ್‌ನಲ್ಲೇ ನೋಡಬೇಕಿತ್ತು. ಮಿಸ್ ಮಾಡಿಕೊಂಡಿದ್ದೀವಿ ಅಂತಲೂ ಬೇಸರ ಕೂಡ ಹೊರಹಾಕುತ್ತಿದ್ದಾರೆ. ಹೀಗಿದ್ದಾಗ ಈಗಲಾದರೂ ಓಟಿಟಿ ಅಖಾಡದಲ್ಲಿ ಕಾಟೇರ ನೋಡಿದ್ದು ತುಂಬಾ ಖುಷಿಯಾಗುತ್ತಿದೆ ಅಂತ ಸಂಭ್ರಮಿಸಿದ್ದಾರೆ ಕನ್ನಡಿಗರು. ಕಾಟೇರ ಚಿತ್ರದ ಸಂಭ್ರಮ ಮತ್ತೊಮ್ಮೆ ಎಲ್ಲೆಲ್ಲೂ ಮೊಳಗಿದೆ. ಇದೇ ಸಮಯದಲ್ಲಿ 50 ದಿನಗಳನ್ನ ಕೂಡ ಈ ಸಿನಿಮಾ ಪೂರೈಸಿದೆ. ಹೀಗಿದ್ದಾಗ ನಟ ದರ್ಶನ್ ಅವರು ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾರೆ.

ಸಂಭ್ರಮದ ನಡುವೆಯೇ ಕಿರಿಕ್ ಶುರು?
ಕನ್ನಡಿಗರ ಸಿನಿಮಾ ಅಂದ್ರೆ ಒಂದು ಕಾಲದಲ್ಲಿ ಪರಭಾಷಿಗರು ಮೂಗು ಮುಯುತ್ತಿದ್ದರು. ಆದರೆ ಇದೀಗ ಕನ್ನಡ ಸಿನಿಮಾಗಳ ಖದರ್ ಬದಲಾಗಿ ಹೋಗಿದೆ. ಅದರಲ್ಲೂ ಕಾಟೇರ ಅಬ್ಬರ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಓಟಿಟಿ ಅಖಾಡದಲ್ಲೂ ಈ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇದು ಮುಂದಿನ ದಿನಗಳಲ್ಲೂ ಹೀಗೆ ಮುಂದುವರಿಯಲಿ, ಎನ್ನುವುದು ದರ್ಶನ್ ಅವರ ಫ್ಯಾನ್ಸ್ ಸೇರಿದಂತೆ ಕನ್ನಡಿಗರ ಆಶಯವಾಗಿದೆ. ಇಷ್ಟೆಲ್ಲದರ ಮಧ್ಯೆ ಮತ್ತೊಮ್ಮೆ ನಟ ದರ್ಶನ್ ಅವರು ಹಾಗೂ ನಿರ್ಮಾಪಕ ಉಮಾಪತಿ ಅವರ ನಡುವೆ ಕಿರಿಕ್ ಜೋರಾಗಿದೆ.












Click it and Unblock the Notifications