ಗಲ್ಲಾಪೆಟ್ಟಿಗೆ ಶೇಕ್ ಮಾಡಿದ ಕಾಟೇರ: ದರ್ಶನ್‌ರ ಸಿನಿಮಾ ಶತಕ ಬಾರಿಸಲು 5 ಕೋಟಿ ಬಾಕಿ!

ಕನ್ನಡಿಗರ 'ಕಾಟೇರ' ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಕಾಟೇರ ಸಿನಿಮಾ ರಿಲೀಸ್ ಆಗಿ ನಾಳೆ 1 ವಾರ ಕಂಪ್ಲೀಟ್ ಆಗುತ್ತಿದ್ದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಸಿನಿಮಾ ಅಬ್ಬರಿಸುತ್ತಲೇ ಇದೆ. ಹೀಗಿದ್ದಾಗ ಇನ್ನೇನು ಸೆಂಚ್ಯುರಿ ಅಂದ್ರೆ ಶತಕ ಬಾರಿಸಲು ತುಂಬಾ ಹತ್ತಿರದಲ್ಲೇ ಇದೆ ಕಾಟೇರ. ಹಾಗಾದ್ರೆ ಕನ್ನಡಿಗರ ಕಾಟೇರ ಇಲ್ಲಿಯವರೆಗೆ ಗಳಿಸಿದ ಹಣ ಎಷ್ಟು ಕೋಟಿ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

'ಕಾಟೇರ' ಮೊದಲ ದಿನವೆ 19.79 ಕೋಟಿ ರೂಪಾಯಿ ಬಾಚಿತ್ತು, 2ನೇ ದಿನ ಅಬ್ಬರಿಸಿ 17.35 ಕೋಟಿ ಕಲೆಕ್ಷನ್ ಮಾಡಿತ್ತು. 3ನೇ ದಿನ ಕಾಟೇರ ಸಿನಿಮಾ, ಬರೋಬ್ಬರಿ 20.94 ರೂಪಾಯಿನ ಗಳಿಸಿತ್ತು. 4ನೇ ದಿನ 18.26 ಕೋಟಿ, 5ನೇ ದಿನ 9 ಕೋಟಿ ಕಲೆಕ್ಷನ್ ಮಾಡಿತ್ತು. ಈಗ 6ನೇ ದಿನಕ್ಕೆ 9.78 ಕೋಟಿ ಗಳಿಸುವ ಮೂಲಕ ಈವರೆಗೂ 95.36 ಕೋಟಿ ರೂಪಾಯಿ ಗಳಿಸಿರುವ ಕಾಟೇರ ಇನ್ನೇನು 100 ಕೋಟಿ ರೂ. ಕ್ಲಬ್ ಸೇರಲು ಅತ್ಯಂತ ಸಮೀಪ ಇದೆ. ಹಾಗೇ ಕಾಟೇರ ಸಿನಿಮಾ ಅಬ್ಬರ ಈಗಲೂ ಮುಂದುವರಿದಿದೆ.

Challenging Star Darshan Movie Collected 95 Crore In Box Office

ಚಿತ್ರಮಂದಿರ ಎಲ್ಲೆಲ್ಲೂ ಹೌಸ್ ಫುಲ್

ಇಷ್ಟೆಲ್ಲದರ ನಡುವೆ ಕನ್ನಡ ಸಿನಿಮಾ ರಂಗದಲ್ಲಿ ಈಗ ಕಾಟೇರ ತಲ್ಲಣ ಸೃಷ್ಟಿ ಮಾಡಿದೆ. ಹಾಗೇ ದಿನದಿಂದ ದಿನಕ್ಕೆ ತನ್ನ ಥಿಯೇಟರ್ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಿದೆ. ಅದರಲ್ಲೂ ಸಿಂಗಲ್ ಸ್ಕ್ರೀನ್ ಕಾಟೇರ ಸಿನಿಮಾಗೆ ಮೀಸಲಾಗಿ ನಿಂತಿವೆ ಎನ್ನುವಷ್ಟರ ಮಟ್ಟಿಗೆ ಕಾಟೇರ ಚಿತ್ರ ಈಗ ಅಬ್ಬರಿಸುತ್ತಿದೆ. ಈಗಾಗಲೇ 100 ಕೋಟಿ ರೂ. ಗಳಿಸುವುದಕ್ಕೂ, ಈ ಸಿನಿಮಾ ತುಂಬಾನೆ ಹತ್ತಿರದಲ್ಲಿದೆ. ಹಾಗೇ ಈಗಲೂ ಸಿನಿಮಾ ಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣ್ತಿವೆ.

ಕಾಟೇರ ವೀಕ್ಷಿಸಿದ ನಟ ದರ್ಶನ್?

ಕಾಟೇರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಾಕ್ಸ್ ಆಫಿಸ್‌ನ ಧೂಳ್ ಧೂಳ್ ಮಾಡುತ್ತಿದೆ. ಹೀಗಾಗಿ ಕನ್ನಡ ಚಿತ್ರರಂಗದ ನಟ & ನಟಿಯರಿಗೆ ಸೆಲೆಬ್ರಿಟಿ ಶೋ ಆಯೋಜಿಸಿತ್ತು ಸಿನಿಮಾ ತಂಡ. ಬೆಂಗಳೂರಿನ ಒರಿಯಾನ್‌ ಮಾಲ್‌ನಲ್ಲಿ 'ಕಾಟೇರ' ಸಿನಿಮಾ, ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಚಂದನ ವನದಿಂದ, ಹಿರಿಯ ನಟ & ನಟಿಯರ ದಂಡೇ ಕಾಟೇರ ಚಿತ್ರ ನೋಡಲು ಬಂದಿತ್ತು. ಆಗ ನಟ ದರ್ಶನ್ ವಿಶೇಷವಾಗಿ ತಮ್ಮ ಸಿನಿಮಾವನ್ನೇ ನೋಡಿದ್ದಾರೆ!

Challenging Star Darshan Movie Collected 95 Crore In Box Office

ಮೆಟ್ಟಿಲು ಮೇಲೆ ಕೂತ ದರ್ಶನ್

ಹಿರಿಯ ನಟಿ ಬಿ.ಸರೋಜಾ ದೇವಿ, ರಮೇಶ್‌ ಅರವಿಂದ್‌, ಯೋಗರಾಜ್‌ ಭಟ್‌, ಅಮೂಲ್ಯ, ಶ್ರೀಮುರಳಿ, ನಟ ಡಾಲಿ ಧನಂಜಯ್, ನಿನಾಸಂ ಸತೀಶ್, ರಿಯಲ್ ಸ್ಟಾರ್ ಉಪೇಂದ್ರ ಸೇರಿ, ಹಲವು ನಟರು ಬಂದಿದ್ದರು. ಸ್ವತಃ ದರ್ಶನ್‌ ಅವರಿಗೆ & ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಅವರಿಗೂ ಕುಳಿತುಕೊಳ್ಳಲು ಸೀಟ್‌ ಇರಲಿಲ್ಲ. ಈ ಹಿನ್ನೆಲೆ ಸಿನಿಮಾವನ್ನ ನೋಡಲು ಸಿನಿಮಾ ಮಂದಿರದ ಮೆಟ್ಟಿಲು ಮೇಲೆ ಕುಳಿತುಕೊಂಡೇ ಸಿನಿಮಾ ವೀಕ್ಷಿಸಿದ್ದಾರೆ ನಟ ದರ್ಶನ್ ಅವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+