ದರ್ಶನ್‌ ಅವರ ಅಭಿಮಾನಿಗಳಿಂದ ಶತ್ರುಗಳಿಗೆ ಖಡಕ್ ವಾರ್ನಿಂಗ್!

ನಟ ದರ್ಶನ್ ಅವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನ ಎದುರಿಸಿ ಮೇಲೆ ಬಂದಿದ್ದು, ಹೀಗಾಗಿ ಇಡೀ ಕರ್ನಾಟಕದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ನಟ ದರ್ಶನ್ ಅವ್ರು ಗಳಿಸಿದ್ದಾರೆ. ಈ ರೀತಿ ಕೋಟಿ ಕೋಟಿ ಅಭಿಮಾನಿಗಳಿಗೆ, ದರ್ಶನ್ ಅವರ ವಿರುದ್ಧ ಶತ್ರುಗಳು ನಡೆಸುತ್ತಿರುವ ಕುತಂತ್ರಕ್ಕೆ ಆಕ್ರೋಶ ಸ್ಫೋಟವಾಗಿದೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಪಬ್‌‍ನಲ್ಲಿ ತಡ ರಾತ್ರಿವರೆಗೆ ಪಾರ್ಟಿ ಮಾಡಿದ್ದಾರೆ, ಎನ್ನುವ ಆರೋಪ ಹಿನ್ನೆಲೆ ನಟ ದರ್ಶನ್ ಅವರಿಗೆ ಸಮಸ್ಯೆ ಎದುರಾಗಿದೆ. ಹೀಗಿದ್ದಾಗ ಅವರು ಪೊಲೀಸ್ ಠಾಣೆಗೂ ಹೋಗಿದ್ರು. ಸುಬ್ರಹ್ಮಣ್ಯ ನಗರ ಠಾಣೆಗೆ ಹಾಜರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಅಲ್ಲದೆ, ನಟ ದರ್ಶನ್ ಅವರ ಜೊತೆಗೆ ಕನ್ನಡ ಸಿನಿ ರಂಗದ ಮತ್ತಷ್ಟು ನಟರು ಕೂಡ ಪೊಲೀಸ್ ಠಾಣೆಗೆ ತೆರಳಿದ್ದರು. ಈ ಎಲ್ಲಾ ಬೆಳವಣಿಗೆ ಹಿಂದೆ ದರ್ಶನ್ ಅವರ ಶತ್ರುಗಳ ಕೈವಾಡ ಇದೆಯೆಂಬ ಆಕ್ರೋಶ ಮೊಳಗಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾನ್ಸ್ ಈಗ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

Challenging Star Darshan Fans Supporting To Their Favorite Actor

200 ಕೋಟಿ ರೂಪಾಯಿ ದಾಖಲೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರ ಸಿನಿಮಾ ಕಾಟೇರ ತುಂಬಾ ನಿರೀಕ್ಷೆಗಳ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆ ಮೀರಿಸಿದ್ದ ಈ ಸಿನಿಮಾ ಗುರಿ ಮುಟ್ಟಿದೆ. 150 ಕೋಟಿ ರೂಪಾಯಿ ಕ್ಲಬ್ ಸೇರಿದ್ದು, 200 ಕೋಟಿ ರೂಪಾಯಿ ಕಡೆಗೆ ನುಗ್ಗುತ್ತಿದೆ. ಆದರೆ ಈ ವೇಳೆ ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿರುವುದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಅದ್ರಲ್ಲೂ ಈ ಘಟನೆ ಹಿಂದೆ ನಟ ದರ್ಶನ್ ಅವರ ಶತ್ರುಗಳ ಕೈವಾಡ ಇದೆ ಅನ್ನೋ ಸುದ್ದಿ ಮತ್ತಷ್ಟು ಆಕ್ರೋಶ ಮೊಳಗಿಸಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

ಇದೀಗ ಫ್ಯಾನ್ಸ್ ಈ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲು ಪೋಸ್ಟ್ ಹಾಕಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದು. ಹಾಗೆ ತಮ್ಮ ನೆಚ್ಚಿನ ನಟನಿಗೆ ಸಪೋರ್ಟ್ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯದಲ್ಲಿ ಕೂಡ ನಟ ದರ್ಶನ್ ಅವರಿಗೆ ದೊಡ್ಡ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಹೀಗಿದ್ದಾಗಲೇ ನಟ ದರ್ಶನ್ ಅವರ 'ಕಾಟೇರ' ಸಿನಿಮಾ ದೊಡ್ಡ ಮಟ್ಟಿಗಿನ ಸಕ್ಸಸ್ ಕಂಡು ಅಬ್ಬರಿಸುತ್ತಿದೆ. ಆದ್ರೆ ಈ ಸಕ್ಸಸ್ ನೋಡಿ ಶತ್ರುಗಳು ಹಿಂಗೆ ಮಾಡ್ತಿದ್ದಾರಾ? ಎಂಬ ಪ್ರಶ್ನೆ ಕೂಡ ಆವರಿಸಿದೆ. ಹೀಗಾಗಿ ಖಡಕ್ ವಾರ್ನಿಂಗ್ ಕೊಡ್ತಿದ್ದಾರೆ, ನಟ ದರ್ಶನ್ ಅವರ ಫ್ಯಾನ್ಸ್.

ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತಾ?

ಕೆಲ ದಿನಗಳ ಹಿಂದೆ ನಟ ದರ್ಶನ್ ಅವರು ದುಬೈಗೆ ಹೊಗಿದ್ದರು ಅವ್ರು ದುಬೈಗೆ ಹೋಗಿದ್ದಾಗ ಅಲ್ಲಿಂದ ಒಂದು ಫೋಟೋ ಸಹಿತ ಶತ್ರುಗಳಿಗೆ ಮೆಸೇಜ್ ಕೊಟ್ಟಿದ್ದರು. ಈಗ ಆ ಮೆಸೇಜ್ ಪರ ಫ್ಯಾನ್ಸ್ ಕೂಡ ನಿಂತಿದ್ದಾರೆ. ಹಾಗಾದರೆ ನಟ ದರ್ಶನ್ ಅವರು ತಮ್ಮ ಶತ್ರುಗಳಿಗೆ ಕಳುಹಿಸಿದ್ದ ಮೆಸೇಜ್ ಏನು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಶತ್ರುಗಳಿಗೆ ದರ್ಶನ್ ಅವರ ಮೆಸೇಜ್

'ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ' ಎಂದು ಟ್ವೀಟ್ ಮಾಡಿದ್ದರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಈಗ ಅವರ ಫ್ಯಾನ್ಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಬೆಂಬಲ ವ್ಯಕ್ತಪಡಿಸಿ, ಶತ್ರುಗಳಿಗೆ ವಾರ್ನ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+