Chaithra Kundapura: ಮದ್ವೆ ಫಿಕ್ಸ್ ಆಗಿದೆ ಕೆಣಕ್ಬೇಡಿ; ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಕುಂದಾಪುರ ಪ್ರಸ್ತಾಪ

Chaithra Kundapura: ಚೈತ್ರಾ ಕುಂದಾಪುರ ವೇದಿಕೆ ಕಾರ್ಯಕ್ರಮಗಳಲ್ಲಿ ದೊಡ್ಡ ದೊಡ್ಡ ಭಾಷಣಗಳನ್ನು ಬಿಗಿಯುತ್ತಾ ವಾಗ್ಮಿ ಅಂತಲೇ ಗುರುತಿಸಿಕೊಂಡಿದ್ದರು. ಆದರೆ, ಕೇಸ್‌ವೊಂದ ಮೇಲೆ ಜೈಲಿಗೆ ಹೋಗುತ್ತಿದ್ದಂತೆ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಮತ್ತೆ ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಅವರು ಬಳಸುವ ಅವಾಚ್ಯ ಶಬ್ಧಗಳು ನೆಟ್ಟಿಗರನ್ನು ಕೆರಳುವಂತೆ ಮಾಡುತ್ತಿವೆ. ಈ ನಡುವೆಯೂ ಚೈತ್ರಾ ತಮ್ಮ ಮದುವೆ ಬಗ್ಗೆ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.

ಬಿಗ್‌ ಬಾಸ್‌ ಕನ್ನಡ 11 ಸೀಸನ್‌ನಲ್ಲಿ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದ್ದಾರೆ ಎನ್ನುವ ಕಾರಣಣಕ್ಕೆ ಈಗಾಗಲೇ ಲಾಯರ್‌ ಕೆ.ಎನ್‌.ಜಗದೀಶ್‌ ಅವರನ್ನು ಹೊರಹಾಕಲಾಗಿದೆ. ಮತ್ತೊಂದೆಡೆ ಜಗದೀಶ್ ಅವರನ್ನು ತಳ್ಳಿದ್ದಾರೆ ಎನ್ನುವ ಆರೋಪದ ಮೇಲೆ ರಂಜಿತ್‌ ಕೂಡ ಹೊರಬಿದ್ದಿದ್ದಾರೆ. ಇಲ್ಲಿನ ಸ್ಪರ್ಧಿಗಳ ಮಾತುಗಳನ್ನು ಇಡೀ ನಾಡಿನ ಜನತೆ ಕೇಳುತ್ತಲೇ ಇರುತ್ತಾರೆ. ಹಾಗೆಯೇ ಸ್ಪರ್ಧಿಗಳಲ್ಲೊಬ್ಬರಾದ ಚೈತ್ರಾ ಕುಂದಾಪುರ ಅವರ ಪ್ರತಿಯೊಂದು ಮಾತುಗಳನ್ನು ಕೂಡ ಗಮನಿಸುತ್ತಲೇ ಇದ್ದಾರೆ.

Chaithra Kundapura talk about Marriage in Bigg Boss House know details

ಗೋಲ್ಡ್‌ ಸುರೇಶ್ ಅವರು ಹಂಸ ಅವರ ಪ್ರೀತಿಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇದರಿಂದ ಬೇಸರಗೊಂಡ ಹಂಸ ಅವರು ಇದೇ ವಿಚಾರವನ್ನು ಚೈತ್ರಾ ಕುಂದಾಪುರ ಬಳಿ ಪ್ರಸ್ತಾಪ ಮಾಡುತ್ತಾರೆ. ಆಗ ಚೈತ್ರಾ ಕುಂದಾಪುರ, "ನಾನು ವಿಕ್ಕಿ ಜೊತೆ ಕ್ಲೋಸ್ ಆಗಿದ್ದೇನೆ ಎಂದು ಸುರೇಶ್​ ಅಣ್ಣ ಹೆಳುತ್ತಲೇ ಇದ್ದಾರೆ. ನನ್ನ ವಿಚಾರದಲ್ಲಿ ಯಾರಾದರೂ ಪ್ರೀತಿ ವಿಚಾರ ತಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ," ಎಂದು ಹೇಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

"ಹೊರಗೆ ಹೋದರೂ ತೊಂದರೆಯಿಲ್ಲ. ನನ್ನ ಕ್ಯಾರೆಕ್ಟರ್‌​​ ಬಗ್ಗೆ ಮಾತನಾಡಿರೆ ಸರಿ ಇರುವುದಿಲ್ಲ. ಈಗಾಗಲೇ ನನ್ನ ಮದುವೆ ಫಿಕ್ಸ್​ ಮಾಡಿಕೊಂಡು ಬಂದಿದ್ದೇನೆ. ಯಾರ ಜೊತೆಯೂ ಸಂಬಂಧ ಕಟ್ಟಿಕೊಳ್ಳೋದನ್ನ ಇಷ್ಟಪಡುವುದಿಲ್ಲ," ಎಂದರು ಚೈತ್ರಾ ಕುಂದಾಪುರ ಅವರು ಹಂಸಾ ಬಳಿ ಹೇಳಿಕೊಂಡಿದ್ದರು. ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲೊ ಭಾರೀ ವೈರಲ್‌ ಆಗುತ್ತಿದೆ.

ಚೈತ್ರಾ, ಹಂಸಾ ಹಾಗೂ ಮಾನಸಾ ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ಆಗ ನಂದು, ರಂಜಿತ್ ಹಾಗೂ ತ್ರಿವಿಕ್ರಂ ಅವರದ್ದು ಲವ್​ಸ್ಟೋರಿ ಎಂದು ಸುರೇಶ್ ಹೇಳಿಕೆ ಕೊಟ್ಟರು. ಹೀಗೆಲ್ಲ ಹೇಳಿದರೆ ಕಷ್ಟ ಆಗುತ್ತದೆ. ಅವರ ಜೊತೆ ಯಾಕೆ ಕ್ಲೋಸ್ ಆದೆ ಎಂದರೆ ಅವರು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಆದರೆ, ಸುರೇಶ್ ಜೊತೆ ಕುಳಿತರೆ ನೆಗೆಟಿವ್ ವೈಬ್ಸ್ ಜಾಸ್ತಿ. ಈ ಕಾರಣಕ್ಕೆ ರಂಜಿತ್ ಹಾಗೂ ತ್ರಿವಿಕ್ರಂ ಜೊತೆ ಕ್ಲೋಸ್ ಆಗಿದ್ದೇನೆ, ಎಂದು ಹಂಸಾ ಸ್ಪಷ್ಟನೆ ಹೇಳಿದ್ದರು. ಆಗ ಈ ಘಣನೆ ನಡೆಯುತ್ತದೆ.

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಚೈತ್ರಾ ಕುಂದಾಪುರ ಅವರು ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷಯೊಡ್ಡಿ 5,00,00,000 ರೂಪಾಯಿ ಹಣ ಪಡೆದ ಆರೋಪವನ್ನು ಹೊತ್ತಿದ್ದು, ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದು, ಪ್ರಕರಣದಲ್ಲಿ ಅವರು ಜೈಲು ಸೇರಿ ಬಂದಿದ್ದಾರೆ. ಆದರೆ ಇದೀಗ ಅವರೇ ಹೇಳುವ ಪ್ರಕಾರ, ಬಿಗ್ ಬಾಸ್ ಮನೆಯೂ ಜೈಲಿನ ಅನುಭವ ಸಿಕ್ಕಿತೇ ಎನ್ನುವ ಪ್ರಶ್ನೆಗಳು ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+