ಒಂದೇ ವರ್ಷ ಸಾಯುತ್ತಾರಂತೆ ಬಾಲಿವುಡ್‌ನ ಈ ನಟರು: ಸ್ಫೋಟಕ ಭವಿಷ್ಯದಲ್ಲಿರುವುದೇನು?
ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ಭಯಾನಕ ಭವಿಷ್ಯ ನುಡಿದಿದ್ದಾರೆ. ಈವರೆಗೂ ಸ್ಟಾರ್ ನಟರ ಸಿನಿಮಾಗಳ ಯಶಸ್ಸು, ವೈಯಕ್ತಿಕ ಜೀವನ, ವೃತ್ತಿ ಜೀವನದ ಬಗ್ಗೆ ಭವಿಷ್ಯ ಹೇಳುತ್ತಿದ್ದ ಜ್ಯೋತಿಷಿಗಳು ಇದೀಗ ನೇರವಾಗಿ ಬಾಲಿವುಡ್ ನಟರ ಸಾವಿನ ಬಗ್ಗೆ ಭವಿಷ್ಯ ಹೇಳಿದ್ದಾರೆ.
ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಸಿನಿಮಾಗಳೆಂದರೆ ದಿನದ ಪ್ರತಿಯೊಂದು ಶೋ ಕೂಡ ಹೌಸ್ ಫುಲ್. ಆದರೆ ಈಗೀಗ ಆ ಮಟ್ಟದ ಸಿನಿಮಾ ಕ್ರೇಜ್ ಕಡಿಮೆಯಾಗಿದ್ದು, ಸ್ಟಾರ್ ನಟರ ಸಿನಿಮಾಗಳು ಮೊದಲಿನಂತೆ ಯಶಸ್ಸು ಕಾಣುತ್ತಿಲ್ಲ. ಹೀಗಾಗಿ 2025ರಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಸಿನಿಮಾಗಳು ತೆರೆ ಕಂಡರೆ ಯಶಸ್ಸು ಕಾಣಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವೇಳೆ ಸ್ಟಾರ್ ನಟರ ಜೀವಿತಾವಧಿ ಬಗ್ಗೆ ಕೂಡ ಕುತೂಹಲಕಾರಿಯಾದ ಮಾಹಿತಿ ಬಹಿರಂಗಗೊಂಡಿದೆ.

ಹೌದು, ಖ್ಯಾತ ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್, ಸಿದ್ಧಾರ್ಥ್ ಕಣ್ಣನ್ ಅವರ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ, ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಯಾವಾಗ ಸಾಯುತ್ತಾರೆ ಎನ್ನುವ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ 2025 ವರ್ಷದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್, 2025ರಲ್ಲಿ ನಟ ಶಾರುಖ್ ಖಾನ್ ಅವರ ಸಮಯ ಬಹಳ ಉತ್ತಮವಾಗಿದೆ. ಆದರೆ ಸಲ್ಮಾನ್ ಖಾನ್ ಅವರಿಗೆ ಸಮಯವು ಜಟಿಲವಾಗಿದೆ. ಕೆಲ ಸಮಯ ಅಂದರೆ 2025, 2026, 2027 ಸಲ್ಮಾನ್ ಖಾನ್‌ಗೆ ಸಂಕಷ್ಟದ ಸಮಯವಾಗಿದ್ದು, ಸಲ್ಮಾನ್ ಖಾನ್ ಅನಾರೋಗ್ಯದಿಂದ ಬಳಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಇನ್ನು ಮಾತು ಮುಂದುವರಿಸಿದ ಅವರು, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರಿಗೂ ಒಂದು ಸಾಮ್ಯತೆ ಇದ್ದು, ಇಬ್ಬರು ಕೂಡ ಒಂದೇ ವರ್ಷದಲ್ಲಿ ನಿಧನ ಹೊಂದುತ್ತಾರೆ. 67ನೇ ವಯಸ್ಸಿನಲ್ಲಿ ಇಬ್ಬರು ಕೂಡ ಇಹಲೋಕ ತ್ಯಜಿಸುತ್ತಾರೆ ಎಂದು ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್ ನೇರವಾಗಿ ಭವಿಷ್ಯ ನುಡಿದಿದ್ದಾರೆ ಎಂದು ವರದಿಯಾಗಿದೆ.
ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್ ನೀಡಿರುವ ಹೇಳಿಕೆ ವೈರಲ್ ಆಗಿದ್ದು, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಯಾವ ಜ್ಯೋತಿಷಿ ಸಹ ಯಾವ ವ್ಯಕ್ತಿಯ ಸಾವಿನ ಬಗ್ಗೆ ಭವಿಷ್ಯ ಹೇಳುವುದಿಲ್ಲ. ಬೇರೆಯವರ ಸಾವಿನ ಬಗ್ಗೆ ಮಾತನಾಡುವ ಜ್ಯೋತಿಷಿಗೆ ತನ್ನ ಸಾವು ಯಾವಾಗ? ತನ್ನ ಮುಂದಿನ ಭವಿಷ್ಯ ಏನೆಂದು ಗೊತ್ತಿದೆಯೇ?, ತಮ್ಮ ಬ್ಯುಸಿನೆಸ್‌ಗಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಾರೆ ಎಂದು ಕಮೆಂಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications