Akshay Kumar: ಡೆಂಗ್ಯೂ ಹೆಚ್ಚಾಗುತ್ತಿರುವ ಸಮಯದಲ್ಲಿ ಕೊರೊನಾ ಸೋಂಕಿಗೆ ಒಳಗಾದ ನಟ ಅಕ್ಷಯ್ ಕುಮಾರ್

ಮುಂಬೈ, ಜುಲೈ. 12: ದೇಶದಲ್ಲಿ ಡೆಂಗ್ಯೂ ಫೀವರ್ ಹೆಚ್ಚಾಗುತ್ತಲೆ ಇದೆ. ಮಳೆ ಹೆಚ್ಚಾಗುತ್ತಿರುವಂತೆಯೇ ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಮುಖೇಶ್ ಅಂಬಾನಿ ಮಗನ ಅದ್ಧೂರಿ ಮದುವೆಗೆ ಗೈರು ಹಾಜರಾಗಲಿದ್ದಾರೆ.

ನಟ ಅಕ್ಷಯ್ ಕುಮಾರ್ ಅವರ ಚಿತ್ರ 'ಸರ್ಫಿರಾ' ಜುಲೈ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಟ ಅಕ್ಷಯ್ ಕುಮಾರ್ ಅವರು ತಮ್ಮ ಪ್ರಾಜೆಕ್ಟ್‌ಗಳನ್ನು ಬ್ಯಾಕ್-ಟು-ಬ್ಯಾಕ್ ಶೂಟಿಂಗ್ ಮಾಡುತ್ತಿದ್ದು, ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಸಮಾರಂಭವನ್ನು ತಪ್ಪಿಸಿಕೊಳ್ಳಲಿದ್ದಾರೆ.

Bollywood actor Akshay Kumar tests positive for Covid-19

ಕಳೆದ ಎರಡು ದಿನಗಳಿಂದ ಅಕ್ಷಯ್ ಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ತಮ್ಮ ಇತ್ತೀಚಿನ ಬಿಡುಗಡೆಯಾದ 'ಸರ್ಫಿರಾ' ಪ್ರಚಾರಕ್ಕಾಗಿ ದೂರ ದೂರಕ್ಕೆ ಪ್ರಯಾಣಿಸುತ್ತಿದ್ದಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.

ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಅವರು ಕ್ವಾರಂಟೈನ್‌ನಲ್ಲಿದ್ದು, ವೈದ್ಯರು ಶಿಫಾರಸು ಮಾಡಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವರದಿಯ ಪ್ರಕಾರ, ಜುಲೈ 12 ರಂದು ಶುಕ್ರವಾರ ಬೆಳಗ್ಗೆ ನಟ ಕೊರೊನಾ ಪಾಸಿಟಿವ್ ಆಗಿದ್ದಾರೆ. ಚಿಕಿತ್ಸೆ ಒಡೆಯುತ್ತಿದ್ದಾರೆ.

Bollywood actor Akshay Kumar tests positive for Covid-19

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆ

ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಮೂರು ದಿನಗಳವರೆಗೆ ನಡೆಯುತ್ತದೆ. ಜುಲೈ 12 ರಂದು 'ಶುಭ ವಿವಾಹ', ಜುಲೈ 13 ರಂದು 'ಶುಭ್ ಆಶೀರ್ವಾದ್' ಮತ್ತು ಜುಲೈ 14 ರಂದು ಭವ್ಯವಾದ ಆರತಕ್ಷತೆ, ನಂತರ ಜುಲೈ 15 ರಂದು ಮತ್ತೊಂದು ಆರತಕ್ಷತೆ ಕಾರ್ಯಕ್ರಮಗಳು ನಡೆಯಲಿವೆ.

ಅಂಬಾನಿ ಕುಟುಂಬಕ್ಕೆ ಜಾನ್ ಸೆನಾ, ಮೈಕ್ ಟೈಸನ್, ಜೀನ್-ಕ್ಲಾಡ್ ವ್ಯಾನ್ ಡ್ಯಾಮ್ ಮತ್ತು ಜೇ ಶೆಟ್ಟಿ, ಬೋರಿಸ್ ಜಾನ್ಸನ್, ಟೋನಿ ಬ್ಲೇರ್, ಜಾನ್ ಕೆರ್ರಿ ಮತ್ತು ಸ್ಟೀಫನ್ ಹಾರ್ಪರ್ ಅವರಂತಹ ಗಣ್ಯರು ಸೇರಿದಂತೆ ಇತರ ಜಾಗತಿಕ ಸೆಲೆಬ್ರಿಟಿಗಳು ಹಾಜರಾಗಲಿದ್ದಾರೆ. ಇಡೀ ಬಾಲಿವುಡ್ ಚಿತ್ರರಂಗ ಮದುವೆಗೆ ಹಾಜರಾಗಲಿದೆ.

ಇನ್ನು, ನಟ ಅಕ್ಷಯ್ ಕುಮಾರ್ ಅವರ ಇತ್ತೀಚಿನ ಚಿತ್ರ 'ಸರ್ಫಿರಾ' ಇಂದು ಜುಲೈ 12 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಚಲನಚಿತ್ರವು 2020 ರ ತಮಿಳು ಚಲನಚಿತ್ರ 'ಸೂರರೈ ಪೊಟ್ರು' ನ ಅಧಿಕೃತ ರಿಮೇಕ್ ಆಗಿದೆ. ಸುಧಾ ಕೊಂಗರ ನಿರ್ದೇಶಿಸಿದ ಈ ಚಿತ್ರದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್ ಮತ್ತು ಸೂರ್ಯ ಅವರ ಅತಿಥಿ ಪಾತ್ರವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+