ನಟ ಜಗ್ಗೇಶ್ ಗೆ ನಿಜಕ್ಕೂ ಆರೋಗ್ಯ ಸರಿ ಇಲ್ವಾ? ಅನುಮಾನ ಹುಟ್ಟಿಸಿದ ನವರಸ ನಾಯಕನ ಪೋಸ್ಟ್
ರಾಜ್ಯಸಭೆ ಬಿಜೆಪಿ ಸಂಸದರಾಗಿ ಕನ್ನಡ ಚಿತ್ರರಂಗದ ಅದ್ಭುತ ನಟ ಜಗ್ಗೇಶ್ ಅವರು ತಮ್ಮ ವಿಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಾ ಬರುತ್ತಿದ್ದಾರೆ. ಚಿತ್ರರಂಗದಲ್ಲಿ ಮಾತ್ರವಲ್ಲದೇ ರಾಜಕೀಯದಲ್ಲಿ ಜಗ್ಗೇಶ್ ಅವರು ಹೆಸರು ಗಳಿಸಿದ್ದಾರೆ. ನಟ ಜಗ್ಗೇಶ್ ಅರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ.
ಇತ್ತೀಚೆಗೆ ನವರಸನಾಯಕ ಜಗ್ಗೇಶ್ ಅವರು ನಟಿಸಿದ 'ರಂಗನಾಯಕ' ಸಿನಿಮಾ ಹೀನಾಯವಾಗಿ ಸೋಲು ಕಂಡ ಬಳಿಕ ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಯಿತು. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಜಗ್ಗೇಶ್ ಅವರು ರಾಯರ ಧ್ಯಾನ ಹಾಗೂ ದೇಶದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಿರ್ದೇಶಕ ಗುರುಪ್ರಸಾದ್ ಕುರಿತು ನಟ ಜಗ್ಗೇಶ್ ಅವರು ಆಡಿದ್ದ ಕೆಲ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು ಅಲ್ಲದೇ ಚರ್ಚೆಗೆ ಕಾರಣವಾಗಿತ್ತು.

ಇದೀಗ ಜನ ಜಗ್ಗೇಶ್ ಅವರ ಒಂದು ಪೋಸ್ಟ್ ಹಾಕಿಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಇತ್ತೀಚೆಗೆ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ ಬಗ್ಗೆ ನವರಸ ನಾಯಕ ಕಳವಳ ವ್ಯಕ್ತಪಡಿಸಿದ್ರು. ಅಲ್ಲದೇ ವೀವ್ಸ್, ಲೈಕ್ಸ್, ಸಬ್‌ಸ್ಕ್ರೈಬ್‌ಗಾಗಿ ಕೆಲ ಯೂಟ್ಯುಬ್ ಚಾನಲ್ ಹಾಗೂ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಚೆನ್ನಾಗಿ ಇರುವವರ ಬಗ್ಗೆ ಆಸ್ಪತ್ರೆ ಸೇರಿದ್ದಾರೆ, ಗಂಭೀರ ಕಾಯಿಲೆಗೆ ತುತ್ತಾಗಿದ್ದಾರೆ, ಅಥವಾ ಸತ್ತೇ ಹೋದರು ಎಂದು ಫೇಕ್ ನ್ಯೂಸ್ ಹಾಕುತ್ತಿದ್ದಾರೆ. ತಮ್ಮ ಬಗ್ಗೆ ಯೂಟ್ಯೂಬ್‌ನಲ್ಲಿ ವೈರಲ್ ಆಗಿದ್ದ ಇಂತದ್ದೇ ಸುಳ್ಳು ಸುದ್ದಿ ಬಗ್ಗೆ ಜಗ್ಗೇಶ್ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಂಸದ ಹಾಗೂ ನಟ ಜಗ್ಗೇಶ್ ಅವರು, ವಿಚಿತ್ರ ಕಾಲದಲ್ಲಿ ಬಾಳುತ್ತಿದ್ದೇವೆ ನಾವೆಲ್ಲಾ. ಆರೋಗ್ಯ ಇದ್ದವರಿಗೆ ರೋಗ. ಬದುಕಿರುವವರು ಸತ್ತಿದ್ದಾರೆ. ಒಂದು ಮಾತಿಗೆ ನೂರರ್ಥ ಕಲ್ಪಿಸಿ ಅದರಿಂದ ಬದುಕು ಕಾಣುವುದು. ವಿಪರ್ಯಾಸ ದಿನಗಳು ಎಂದು ಬರೆದುಕೊಂಡಿದ್ದಾರೆ.
"ರಾಯರಕೃಪೆ ಇರುವವರೆಗೆ ನಾನು ಕ್ಷೇಮ ಹಾಗು ನನ್ನ ಕೇಡು ಬಯಸುವವರು ಸುಖವಾಗಿ ಬಾಳಿ. ನನ್ನ ಪಿಎಗೆ ನನ್ನ ಆರೋಗ್ಯ ವಿಚಾರಿಸಿದ ಮಾಧ್ಯಮಮಿತ್ರರಿಗೆ ಧನ್ಯವಾದ" ಎಂದು ಟ್ವೀಟ್ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಹರಿದಾಡಿದ ಒಂದು ಸುಳ್ಳು ಸುದ್ದಿಯಿಂದ ಇಷ್ಟೆಲ್ಲಾ ಆಯಿತು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಆ ಸುದ್ದಿ ನೋಡಿ ಸಾಕಷ್ಟು ಜನ ಫೋನ್ ಮಾಡಿ ಜಗ್ಗೇಶ್ ಅವರ ಬಗ್ಗೆ ವಿಚಾರಿಸಿದ್ದರು. ಹೀಗಾಗಿ ನಟ ಜಗ್ಗೇಶ್ ಅವರು ಪೋಸ್ಟ್ ಮೂಲಕ ಬೇಸರವನ್ನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ಕೆಲ ನಟ, ನಟಿಯರ ಬಗ್ಗೆ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಕೆಲವರು ನಿಜ ಎಂದು ನಂಬಿದ್ದು ಇದೆ. ಬಳಿಕ ಸುಳ್ಳು ಎಂದು ಗೊತ್ತಾಗಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು. ಇದೀಗ ನವರಸ ನಾಯಕನ ಬಗ್ಗೆಯೂ ಸುಳ್ಳು ಸುದ್ದಿ ಹರಿದಾಡಿ ಗೊಂದಲ ನಿರ್ಮಾಣವಾಗಿತ್ತು.












Click it and Unblock the Notifications