'ಮಿಲನ ಕ್ಲೈಮಾಕ್ಸ್ ತೋರಿಸಿ ಚಂದನ್-ನಿವೇದಿತಾನ ಮತ್ತೆ ಒಂದು ಮಾಡ್ತೇವೆ'
ಕನ್ನಡ ಕಿರುತೆರೆಯ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಚಂದನ್ ಹಾಗೂ ನಿವೇದಿತಾ ವಿಚ್ಛೇದನಕ್ಕಾಗಿ ಗುರುವಾರ ಶಾಂತಿನಗರದ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಶುಕ್ರವಾರ ಇಬ್ಬರೂ ಮತ್ತೆ ಕೋರ್ಟ್‌ಗೆ ಹಾಜರಾಗಿದ್ದು, ಕೋರ್ಟ್ ವಿಚ್ಛೇದನವನ್ನು ಕೂಡ ಮಂಜೂರು ಮಾಡಿದೆ.
ಈ ಬಗ್ಗೆ ಚಂದನ್ ಶೆಟ್ಟಿ ಆಪ್ತ ಬಿಗ್‌ಬಾಸ್ ವಿನ್ನರ್ ಪ್ರಥಮ್ ಮಾತನಾಡಿದ್ದು, ' ಮೊದಲು ನನ್ನ ಮತ್ತು ಚಂದನ್ ಶೆಟ್ಟಿ ನಡುವೆ ಭಿನ್ನಾಭಿಪ್ರಾಯಗಳಿತ್ತು. ಅದನ್ನು ಬಗೆಹರಿಸಿಕೊಂಡು ನಾವಿಬ್ಬರು ಕ್ಲೋಸ್ ಫ್ರೆಂಡ್ಸ್ ಆದೆವು. ನಾವು ಮೊದಲು ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಬಗೆಹರಿಸಿಕೊಂಡ ಮೇಲೆ ನಾನು ಅವನ ಪರವಾಗಿ ಎಲ್ಲಾ ಕಡೆ ನಿಂತಿದ್ದೇನೆ. ನನ್ನ ಸಿನಿಮಾಗಳೆಲ್ಲಾ ರಿಲೀಸ್ ಆದಾಗ ಚಂದನ್‌ನ ಕರೆಸುತ್ತಿದ್ದೆ. ನೀನೇ ಪ್ರಮೋಟು ಮಾಡು ಅನ್ನುತ್ತಿದೆ ಎಂದರು.

ಇಷ್ಟು ಆತ್ಮೀಯನಾದ ಚಂದನ್ ಇವತ್ತು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಮಧ್ಯದಲ್ಲಿ ಯಾರು ಕೈ ಆಡಿಸಿದ್ದಾರೋ ಗೊತ್ತಿಲ್ಲ. ಆದರೆ ಅಕಸ್ಮಾತ್ ಶೋಗೋಸ್ಕರ ದೂರ ಆದರೂ ಅಂದರೆ ನಾನೊಂದು ಪ್ರಶ್ನೆ ಕೇಳುತ್ತೇನೆ. ಶೋ ದೊಡ್ಡದಾ..? ಜೀವನಾ ದೊಡ್ಡದಾ ಎಂದು ಪ್ರಥಮ್ ಪ್ರಶ್ನಿಸಿದ್ದಾರೆ.
ಜೀವನಾ ದೊಡ್ಡದು ಎಂದಾದ ಮೇಲೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತಾ ನಿವೇದಿತಾ ತುಂಬಾ ಒಳ್ಳೆ ಹುಡುಗಿ. ಆಕೆ ಇನ್ನೂ ಮುಗ್ಧೆ. ಅವಳದೇ ಶೈಲಿಯಲ್ಲಿ ಎಲ್ಲರನ್ನೂ ರಂಜಿಸಿಕೊಂಡು ಬಂದಿದ್ದಾಳೆ. ಅವಳು ನಮ್ಮೂರು ಹುಡುಗಿ, ಚಂದನ್ ನಮ್ಮ ಹುಡುಗ ಹೀಗಾಗಿ ಅವರಿಬ್ಬರನ್ನು ಸರಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದರು.

ಕೋರ್ಟ್ ಡಿವೋರ್ಸ್ ನೀಡಿದ ತಕ್ಷಣ ಫೈನಲಾ ಅದು? ಮಿಲನ ಸಿನಿಮಾದಲ್ಲಿ ಅಪ್ಪು ತಬ್ಬಿಕೊಂಡು ಸಂಸಾರ ನಡೆಸಲ್ವಾ..? ಮಿಲನ ಸಿನಿಮಾ ಕ್ಲೈಮಾಕ್ಸ್ ಅನ್ನು ಚಂದನ್‌ಗೆ ಕಳುಹಿಸುತ್ತೇನೆ. ನೋಡಪ್ಪ ನೀನು ಹಂಗೆ ಆಗಬೇಕು ಎಂದು ಹೇಳುತ್ತೇನೆ. ಅವರಿಬ್ಬರನ್ನು ಒಂದಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಚಂದನ್ ಶೆಟ್ಟಿ-ನಿವೇದಿತಾ ಗೌಡ ಮಧ್ಯ ಹುಳಿ ಹಿಂಡಿದ್ಯಾರು?
ಚಂದನ್ ಶೆಟ್ಟಿ-ನಿವೇದಿತಾ ಗೌಡ ಜೋಡಿ ದೂರಾಗುವ ನಿರ್ಧಾರ ಯಾಕೆ ಮಾಡಿದರು. ಇಬ್ಬರ ಮಧ್ಯ ಬಿರುಕು ತಂದವರ್ಯಾರು ಎನ್ನುವುದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಚಂದನ್ ಶೆಟ್ಟಿ ಆಪ್ತ ಬಿಗ್‌ಬಾಸ್ ವಿನ್ನರ್ ಪ್ರಥಮ್ ಮಾತನಾಡಿದ್ದಾರೆ. 'ಈಗಿನ ಕಾಲದಲ್ಲಿ ಬದುಕೋದು ತುಂಬಾ ಕಷ್ಟ. ಲೈಫ್ ಸರಿ ಇಲ್ಲ. ಹೋದ ವಾರ ಸರಿ ಇದ್ದವರು ಈಗ ಹೀಗಾಗಿದೆ ಅಂದರೆ ಮಧ್ಯ ಯಾರೋ ಕೈ ಆಡಿಸಿರುತ್ತಾರೆ. ಯಾರೋ ಮಧ್ಯ ಬರದೇ ಹೀಗೆ ಆಗಿಲ್ಲ. ಯಾರೋ ಕಿವಿ ಚುಚ್ಚುವವರು ಇರುತ್ತಾರೆ. ಅವನು ಹಂಗೆ..ಇವಳು ಹಿಂಗೆ ಎನ್ನುವವರು ಇರುತ್ತಾರೆ. ಈ ರೀತಿ ಮಾತನಾಡಿ ಅವರಿಬ್ಬರ ಮಧ್ಯ ಬಿರುಕು ತಂದಿದ್ದಾರೆ ಎನ್ನುವುದು ಪ್ರಥಮ್ ಅವರ ಅಭಿಪ್ರಾಯವಾಗಿದೆ.












Click it and Unblock the Notifications