Dharma: ಬಿಗ್ ಬಾಸ್‌ನಲ್ಲಿ ಧರ್ಮ ಕೀರ್ತಿರಾಜ್‌ಗೆ ಸಿಕ್ಕ ಸಂಭಾವನೆ ಎಷ್ಟು..?
ನಟ ಧರ್ಮ ಕೀರ್ತಿರಾಜ್‌ಗೆ ನವಗ್ರಹ ಸಿನಿಮಾ ಬಳಿಕ ಬಿಗ್ ಬಾಸ್ ಕನ್ನಡ ಸೀಜನ್ 11 ಬಿಗ್ ಹಿಟ್ ಕೊಟ್ಟಿದೆ. ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿ ಎಂಟು ವಾರಗಳನ್ನು ಪೂರೈಸಿದ್ದ ಧರ್ಮ ಕಳೆದ ವೀಕೆಂಡ್ ಸಂಚಿಕೆಯಲ್ಲಿ ಮನೆಯಿಂದ ಹೊರಬಂದರು. ಯಾರ ಮನಸ್ಸನ್ನೂ ನೋಯಿಸದ, ಹೆಣ್ಣು ಮಕ್ಕಳಿಗೆ ಗೌರವ ಕೊಡುವ, ಎಂತಹ ಸಮಯದಲ್ಲೂ ಸಂಯಮದಿಂದ ನಡೆದುಕೊಳ್ಳುವ, ಬೇರೆಯವರಿಗೆ ಸಹಾಯವಾಗುವ ಧರ್ಮ ಕೀರ್ತಿರಾಜ್ ಗುಣಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಕನ್ನಡದಲ್ಲಿ ಬಂಗಾರದಂತಹ ಮನಸ್ಸು ಹೊಂದಿರುವ, ಪ್ರಾಮಾಣಿಕವಾಗಿ, ನೈಜವಾಗಿದ್ದ ವ್ಯಕ್ತಿ ಎಂದರೆ ಅದು ಧರ್ಮ ಕೀರ್ತಿರಾಜ್. ಹೀಗಾಗಿ ಧರ್ಮ ಪ್ರೇಕ್ಷಕರಿಗೆ ಮಾತ್ರವಲ್ಲ ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳಲ್ಲಿಯೂ ಎಲ್ಲರಿಗೂ ಪ್ರಿಯವಾಗಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಧರ್ಮ, ತಮ್ಮ ಕುಟುಂಬದವರ ಜೊತೆ ಸಮಯ ಕಳೆಯುವುದು ಹಾಗೂ ಸಂದರ್ಶನಗಳಲ್ಲಿ ಬ್ಯೂಸಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಐವತೈದು ದಿನ ಪೂರೈಸಿರುವ ಧರ್ಮ ಕೀರ್ತಿರಾಜ್ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎನ್ನುವ ಕುತೂಹಲ ಎಲ್ಲರಿಗಿದೆ. ಈ ಬಗ್ಗೆ ಸ್ವತಃ ಧರ್ಮ ಕೀರ್ತಿರಾಜ್ ಮಾತನಾಡಿದ್ದಾರೆ. 'ಬಿಗ್ ಬಾಸ್ ಕನ್ನಡದವರು ನನಗೆ ಒಳ್ಳೆ ಸಂಭಾವನೆ ಕೊಟ್ಟಿದ್ದಾರೆ ಅದನ್ನು ಎಲ್ಲಿಯೂ ಹೇಳುವ ಹಾಗಿಲ್ಲ. ನಾನು ಎಲ್ಲವನ್ನೂ ದುಡ್ಡಿನಲ್ಲಿಯೇ ಅಳೆಯುವುದಿಲ್ಲ. ದುಡ್ಡಿನಲ್ಲಿ ಅಳೆಯಲು ಆಗುವುದಿಲ್ಲ. ನನಗೆ ದುಡ್ಡು ಕೂಡ ಮುಖ್ಯನೇ ಯಾಕೆಂದರೆ ನನ್ನ ಸಿನಿಮಾಗಳೆನೆಲ್ಲಾ ಬಿಟ್ಟು ಶೋಗೆ ಹೋಗಿದ್ದೆ. ಹೊರಗಡೆ ಇದ್ದಿದ್ರೆ ಒಂದು ಸಿನಿಮಾ ಮುಗಿಸುತ್ತಿದೆ. ಇಲ್ಲಾ ಒಟ್ಟೊಟ್ಟಿಗೆ ಎರಡು ಸಿನಿಮಾ ಮಾಡುತ್ತಿದೆ. ಆದರೆ ಈ ಬಿಗ್ ಬಾಸ್ ಅವಕಾಶವನ್ನು ನಾನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ' ಎಂದರು.
'ಬಿಗ್ ಬಾಸ್ ಮೂಲಕ ಜನ ನನ್ನನ್ನು ಇಷ್ಟಪಟ್ಟಿರುವುದು ನನಗೆ ದೊಡ್ಡ ಸಂಭಾವನೆ. ದೊಡ್ಡ ಬಹುಮಾನ ನನಗೆ. ಒಂದು ಸಿನಿಮಾ ಐವತ್ತು ದಿನ ಓಡಿದಷ್ಟೇ ಖುಷಿಯಾಗಿದೆ. ಇನ್ನು ಒಂದು ಐದು ಸಿನಿಮಾ ಬಂದಿರುಷ್ಟೇ ಖುಷಿಯಾಗಿದೆ. ಜೇಬಲ್ಲಿ ಸ್ವಲ್ಪ ಹಣ ಇದ್ದರೂ ಬದುಕಬಹುದು. ಆದರೆ ಜನರ ಮನಸ್ಸು ಗೆಲ್ಲಲಾಗದೇ ಇದ್ದರೆ ಎಷ್ಟು ಹಣ ಇದ್ದು ಏನು ಪ್ರಯೋಜನ. ನಾನು ಎಷ್ಟು ಮಾತನಾಡಿದ್ದೇನೆ ನ್ಯಾಯಯುತವಾಗಿ ಅಷ್ಟು ಕೊಟ್ಟಿದ್ದಾರೆ' ಎಂದು ಹೇಳಿದರು.

'ನಾನು ಬಿಗ್ ಬಾಸ್ ತಂಡಕ್ಕೆ ಅಭಾರಿಯಾಗಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ನಾನು ಐವತೈದು ದಿನ ಇದಿದ್ದು ನನಗೆ ಎಷ್ಟೋ ಸಿನಿಮಾಗಳು ಬಂದಷ್ಟು ಖುಷಿ. ಐದು ಸಿನಿಮಾ ಬಂದಷ್ಟು ಪ್ರೀತಿ ಜನರಿಂದ ನನಗೆ ಸಿಕ್ಕಿದೆ. ನಾನು ಅಂದುಕೊಂಡಿರುವುದಕ್ಕಿಂತ ಜಾಸ್ತಿನೇ ಸಿಕ್ಕಿರುವುದು ಇನ್ನೂ ಖುಷಿ ಇದೆ' ಎಂದು ಧರ್ಮ ಕೀರ್ತಿರಾಜ್ ಟಿವಿ ೯ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಬಹಳ ಖುಷಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications