Bigg Boss: ಬಿಗ್‌ಬಾಸ್ ಮನೆಯಲ್ಲಿ ಮಣ್ಣಿಗಾಗಿ ಮಾತಿಗೆ ಮಾತು: ಎದೆಗೆ ಎದೆ ಕೊಟ್ಟ ಮಂಜು ರಜತ್!
ಬಿಗ್‌ಬಾಸ್ ಕನ್ನಡ ಸೀಸನ್ 11 ಸೆಪ್ಟೆಂಬರ್ 29ರಿಂದ ಆರಂಭವಾಗಿದೆ. ನಾಳೆಗೆ (ನವೆಂಬರ್ 29) ಬಿಗ್‌ಬಾಸ್ ಆರಂಭವಾಗಿ ಬರೋಬ್ಬರಿ ಎರಡು ತಿಂಗಳು ಪೂರ್ಣಗೊಳ್ಳುತ್ತವೆ. ನೂರು ದಿನದ ಈ ಆಟ ಮುಗಿಯಲು ಇನ್ನೂ ಕೇವಲ 40 ದಿನಗಳು ಮಾತ್ರ ಬಾಕಿ ಇವೆ. ಅಷ್ಟರೊಳಗೆ ಅಂದರೆ ಒಂದು ತಿಂಗಳಲ್ಲಿ ಟಾಪ್ 5 ಸ್ಪರ್ಧಿಗಳು ಯಾರು ಎನ್ನುವುದು ಸ್ಪಷ್ಟವಾಗಲಿದೆ. ಹೀಗಾಗಿ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಭಾರೀ ಜೋರಾಗಿದೆ. ವಿಶೇಷವಾಗಿ ಮಂಜು, ರಜತ್, ಚೈತ್ರಾ, ಮೋಕ್ಷತಾ, ಶಿಶಿರ್, ಭವ್ಯ, ತ್ರಿವಿಕ್ರಮ್ ನಡುವೆ ಭಾರೀ ಜಿದ್ದಾಜಿದ್ದಿನ ಆಟ ನಡೆಯುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಪ್ರಸ್ತುತ ಮಣ್ಣಿನ ಟಾಸ್ಕ್ ನೀಡಲಾಗಿದ್ದು ಮಂಜು ಹಾಗೂ ರಜತ್ ನಡುವೆ ಮತ್ತೆ ಗಲಾಟೆ ನಡೆದಿರುವುದು ಕಂಡು ಬಂದಿದೆ.
ಹೌದು... ಬಿಗ್‌ಬಾಸ್ ಮನೆಯಲ್ಲಿ ಮಹಾರಾಜ ಹಾಗೂ ಮಹಾರಾಣಿ ತಂಡವನ್ನು ರಚನೆ ಮಾಡಲಾಗಿದೆ. ಮಹಾರಾಜನಾಗಿ ಉಗ್ರಂ ಮಂಜು ಟಾಸ್ಕ್ ಆಡುತ್ತಿದ್ದರೆ ಮೋಕ್ಷಿತಾ ಮಹಾರಾಣಿಯಾಗಿದ್ದಾರೆ. ಇವರಿಬ್ಬರೂ ಕೂಡ ಟಾಸ್ಕ್‌ನಲ್ಲಿ ಸೋದರ ಸಹೋದರಿಯಾಗಿದ್ದು ಸೋಹದರ ಮಂಜು ಸಹೋದರಿಯನ್ನು ಆಸ್ತಾನದಿಂದ ಹೊರಗೆ ಕಳುಹಿಸಿ ತಾನೇ ರಾಜ ಎಂದು ಮೆರೆಯುತ್ತಿರುತ್ತಾನೆ. ಇದರಿಂದಾಗಿ ಸಹೋದರಿ ಮಹಾರಾಣಿ ಮೋಕ್ಷಿತಾ ಆಸ್ತಾನಕ್ಕೆ ಮರಳಿ ಬಂದು ತನ್ನ ಅಧಿಕಾರವನ್ನು ಪುನ: ಪಡೆಯಲು ಪ್ರಯತ್ನಿಸುತ್ತಾಳೆ. ಹೀಗಾಗಿ ಮಹಾರಾಣಿ ಮೋಕ್ಷಿತಾ ತಂಡದ ಸೈನಿಕರು ಹಾಗೂ ಮಹಾರಾಜ ಮಂಜು ತಂಡದ ಸೈನಿಕರು ಬೇರೆ ಬೇರೆಯಾಗಿರುತ್ತಾರೆ.

ಈ ಎರಡೂ ತಂಡಗಳಿಗೆ ಮಣ್ಣಿನ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ್ದಾರೆ. ಕೊಳವೆಯಿಂದ ಮಣ್ಣಿನ ಚಂಡುಗಳು ಹೊರ ಬರುತ್ತವೆ. ಆ ಮಣ್ಣಿನ ಚಂಡುಗಳನ್ನು ಸಂಗ್ರಹಿಸುವುದು ತಂಡಗಳಿಗೆ ನೀಡಿರುವ ಟಾಸ್ಕ್. ಮಣ್ಣಿನ ಚಂಡನ್ನು ಸಂಗ್ರಹಿಸಿ ಅದರಿಂದ ಅಸ್ತ್ರ ತಯಾರಿಸಬೇಕು. ಯಾವ ತಂಡ ಅತೀ ಹೆಚ್ಚು ಮಣ್ಣಿನ ಚಂಡನ್ನು ಸಂಗ್ರಹಿಸಿ ಅದರಿಂದ ಅಸ್ತ್ರವನ್ನು ತಯಾರಿಸುತ್ತೋ ಆ ತಂಡ ಗೆಲುವು ಸಾಧಿಸಲಿದೆ. ಈ ಆಟದಲ್ಲಿ ಮಂಜು ಹಾಗೂ ರಜತ್ ನಡುವೆ ಎದೆಗೆ ಎದೆ ಒಡ್ಡಿ ನಿಲ್ಲುವ ಮಟ್ಟಿಗೆ ಜಗಳವಾಗಿದೆ.
ಮಂಜು ಹಾಗೂ ರಜತ್ ನಡುವೆ ದೊಡ್ಡ ಗಲಾಟೆ ದೊಡ್ಮನೆಯಲ್ಲಿ ನಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. '54 ದಿನ ಬಿಗ್‌ಬಾಸ್ ಮನೆಯಲ್ಲಿ ಇರೋದು ಭಯ ಪಟ್ಟುಕೊಂಡು ಅಲ್ಲ' ಎಂದು ರಜತ್‌ಗೆ ಮಂಜು ಹೇಳುತ್ತಾರೆ. ಆಗ ರಜತ್ 'ಯಾರಿಗೆ ನೀನು ರೌಡಿ ಅಂದಿದ್ದು' ಎಂದು ಮಂಜುಗೆ ಕೇಳ್ತಾರೆ. 'ನಿನ್ನ ಆಟ ನೀನು ತೋರ್ಸು ನನ್ನ ಆಟ ನಾನು ತೋರಿಸುತ್ತೇನೆ' ಎಂದು ಮಂಜು ಸವಾಲ್ ಹಾಕಿದ್ದಾರೆ. ರಜತ್ ಹಾಗೂ ಮಂಜು ನಡುವಿನ ವಾಗ್ವಾದದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ರಜತ್ ಟಾಸ್ಕ್ ವಿಚಾರ ಬಂದಾಗ ಎಲ್ಲಾ ಸ್ಪರ್ಧಿಗಳಿಗೂ ತೀವ್ರ ಪೈಪೋಟಿ ನೀಡುವುದು ಗೊತ್ತೇ ಇದೆ. ಟಾಸ್ಕ್ ವೇಳೆ ತ್ರಿವಿಕ್ರಮ್ ಹಾಗೂ ರಜತ್ ನಡುವೆ ತಳ್ಳಾಟ ನೂಕಾಟ ಭರ್ಜರಿಯಾಗಿ ನಡೆದಿದೆ. ಮಣ್ಣಿನ ಚಂಡು ಸಂಗ್ರಹ ಮಾಡುವ ಭರದಲ್ಲಿ ಎರಡೂ ತಂಡದ ಸೈನಿಕರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇದೇ ವೇಳೆ ಮೈಮೇಲೆ ಬಿದ್ದು ಮಣ್ಣನ್ನು ಕಿತ್ತುಕೊಂಡಿದ್ದಾರೆ ಅಂತ ಚೈತ್ರಾ ಕೂಡ ಗಲಾಟೆ ಮಾಡುತ್ತಾರೆ.

ಈ ವೇಳೆ ಮಹಾರಾಜ ಮಂಜು ಹಾಗೂ ಸೈನಿಕ ರಜತ್ ನಡುವೆ ಜೋರು ಗಲಾಟೆ ನಡೆದಿದೆ. ತಮಗೆ ರೌಡಿ ಎನ್ನುವ ಶಬ್ದವನ್ನು ಮಂಜು ಬಳಕೆ ಮಾಡಿದ್ದಾರೆ ಎಂದು ರಜತ್ ಆರೋಪಿಸಿದ್ದಾರೆ. ಅಲ್ಲದೆ ರಜತ್ ಕೂಡ ಈ ಮಾತಿಗೆ ಖಡಕ್ ಆಗಿ ಮಂಜುಗೆ ಉತ್ತರ ಕೊಟ್ಟಿದ್ದಾರೆ. ಈ ಟಾಸ್ಕ್‌ನಿಂದಾಗಿ ಮನೆ ರಣರಂಗವಾಗಿ ಹೋಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಸಾಕಷ್ಟು ವೈರಲ್ ಆಗುತ್ತಿದೆ.
ಅಷ್ಟಕ್ಕೂ ಮಂಜು ಹಾಗೂ ರಜತ್ ನಡುವಿನ ಜಗಳಕ್ಕೆ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. ಅದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಮಂಜು ರಜತ್‌ಗೆ ರೌಡಿ ಎನ್ನಲು ಕಾರಣ ಏನು ಎಂದು ತಿಳಿಯಲು ಇಂದಿನ ಸಂಚಿಕೆಯವರೆಗೂ ಕಾಯಲೇಬೇಕು.












Click it and Unblock the Notifications