Rajath: D-BOSS ಫ್ಯಾನ್ಸ್ ನಮ್ಮನ್ನ ಗೆಲ್ಲಿಸಿದ್ರು ಅಂದ್ರೆ ಖುಷಿನೇ- ರಜತ್
ಬಿಗ್ ಬಾಸ್ ಕನ್ನಡ ಸೀಜನ್ 11 ಮುಕ್ತಾಯಗೊಂಡಿದ್ದರೂ ಕೂಡ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿಯಾಗಿಲ್ಲ. ಸದ್ಯ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಗಳು ಎಲ್ಲೆಡೆ ಪ್ರಚಾರದಲ್ಲಿದ್ದಾರೆ. ಕೆಲವೊಬ್ಬರು ಹೊಸ ಶೋಗಳಲ್ಲಿ ಬ್ಯೂಸಿಯಾಗಿದ್ದರೆ, ಇನ್ನೂ ಕೆಲವರು ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ. ಒಟ್ಟಾರೆ ಈ ಬಾರಿಯ ಬಿಗ್ ಬಾಸ್ ಅನೇಕರಿಗೆ ಹೊಸ ಅಧ್ಯಾಯ ಆರಂಭಿಸಲು ಅವಕಾಶ ಮಾಡಿಕೊಟ್ಟಿದೆ.
ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿ ಹಾಡುಗಾರ ಹನುಮಂತ ವಿನ್ನರ್ ಆದರೆ, ನಟ ತ್ರಿವಿಕ್ರಮ್ ರನ್ನರ್ ಅಪ್ ಆದರು, ಇನ್ನು ಮೊದಲೇ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿದ್ದ ರಜತ್ ಈ ಬಾರಿಯ ಬಿಗ್ ಬಾಸ್‌ನ ಎರಡನೇ ರನ್ನರ್ ಅಪ್ ಆದರು. ಟಾಪ್ ತ್ರೀ ಬಂದ ಈ ಮೂವರಲ್ಲೂ ಒಂದು ವಿಶೇಷತೆಯಿದ್ದು, ಮೂರು ಜನ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು, ಇವರನ್ನು ಡಿ-ಬಾಸ್ ಫ್ಯಾನ್ಸ್ ಗೆಲ್ಲಿಸಿದರು ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಬಗ್ಗೆ ಈ ಹಿಂದೆಯೇ ನಾನು ನಟ ದರ್ಶನ್ ಅವರ ಅಭಿಮಾನಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ರಜತ್ ಮಾತನಾಡಿದ್ದಾರೆ. ಬಾಸ್ ಟಿವಿ ಕನ್ನಡದ ಸಂದರ್ಶನದಲ್ಲಿ ಮಾತನಾಡಿದ ರಜತ್, 'ಇದು ಅಂತ್ಯಂತ ಖುಷಿ ವಿಚಾರ. ನಮ್ಮ ಬಾಸ್ ಫ್ಯಾನ್ಸ್ ಗೆಲ್ಲಿಸಿದ್ದಾರೆ ಎಂದರೆ ಅದಕ್ಕಿಂತ ಖುಷಿ ಇನ್ನೇನಿದೆ. ಏನೂ ತೊಂದರೆ ಇಲ್ಲ' ಎಂದು ಖುಷಿಪಟ್ಟರು.
'ಆದರೆ ಹನುಮಂತು ದರ್ಶನ್ ಅವರ ಅಭಿಮಾನಿ ಅಲ್ಲ ಅನಿಸುತ್ತದೆ. ಆದರೆ ಖುಷಿನೇ. ಮೂರು ಜನ ಡಿ-ಬಾಸ್ ಅಭಿಮಾನಿಗಳು ಎಂದು ವೈರಲ್ ಮಾಡಲಿ. ನಮಗೂ ಖುಷಿ. ನಮ್ಮ ದೇವರು ಭಕ್ತಾಧಿಗಳು ನಮ್ಮನ್ನು ಗೆಲ್ಲಿಸಿದ್ದಾರೆ ಅಂದರೆ ಅದಕ್ಕಿಂತ ಸಂತೋಷ ಇನ್ನೇನಿದೆ. ಇದು ಒಳ್ಳೆಯದೇ' ಎಂದು ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿ ರಜತ್ ಕಿಶನ್ ಹೇಳಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಬುದ್ಧಿ ಉಪಯೋಗಿಸಿ ಆಟ ಆಡಿದ್ದು ಯಾರು ಎನ್ನುವ ಪ್ರಶ್ನೆಗೆ ರಜತ್, 'ತ್ರಿವಿಕ್ರಮ್, ಮಂಜು, ಹನುಮಂತು, ನಾನು ಬಿಟ್ಟರೆ ಮತ್ಯಾರು ಇಲ್ಲ ಅನಿಸುತ್ತದೆ' ಎಂದು ಉತ್ತರಿಸಿದ್ದಾರೆ. ಇನ್ನು 'ತ್ರಿವಿಕ್ರಮ್ ಕರಾಬ್ ಸ್ಟ್ರಾಟಜಿ ಕಿಂಗ್ ಅವನು ಎಲ್ಲೂ ಬೆಳಕಿಗೆ ಬಂದಿಲ್ಲ ಅಷ್ಟೇ. ಅವನು ತಿರುಗೇಟು ಕೊಡುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ತ್ರಿವಿಕ್ರಮ್ ನೆಕ್ಸ್ಟ್ ಲೆವೆಲ್ ಮಾಸ್ಟರ್ ಮೈಂಡ್' ಎಂದು ರಜತ್ ಹೇಳಿದ್ದಾರೆ.












Click it and Unblock the Notifications