Bigg Boss: ಮತ್ತೆ ಬಂತು ಬಿಗ್ ಬಾಸ್ ಒಟಿಟಿ, ಆದರೆ ಈ ಬಾರಿ ಸಲ್ಮಾನ್ ಖಾನ್ ಕಾಣಿಸಲ್ಲ!

ಮುಂಬೈ, ಜೂನ್. 08: ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಜೂನ್ 21 ರಿಂದ ಮತ್ತೊಂದು ಸೀಸನ್‌ ಜೊತೆಗೆ ಪ್ರಸಾರವಾಗಲಿದೆ. ಈ ಹಿಂದಿನ ಸೀಸನ್ ಅನ್ನು ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದರು. ಈ ಬಾರಿ ಹೊಸ ಹೋಸ್ಟ್ ಆಗಿ ಹಿರಿಯ ನಟ ಅನಿಲ್ ಕಪೂರ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಜೂನ್ 21 ರಿಂದ JioCinema ನಲ್ಲಿ ಬಿಗ್ ಬಾಸ್ ಒಟಿಟಿ ಮೂರನೇ ಸೀಸನ್ ಸ್ಟ್ರೀಮ್ ಆಗಲು ಸಿದ್ಧವಾಗಿದೆ. ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಹಿಂದಿನ ಸೀಸನ್ ಅನ್ನು ಟಿವಿಯ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವ ನಟ ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದರು. ಈ ಬಾರಿ ಹೋಸ್ಟ್ ಬದಲಾಗಿದ್ದಾರೆ.

Bigg Boss OTT 3 to stream from June 21 with new host Anil Kapoor

ಹೋಸ್ಟ್‌ನ ಬದಲಾವಣೆಯ ಕುರಿತು ಸಾಕಷ್ಟು ಸುಳಿವು ನೀಡಿದ ನಂತರ, ಜಿಯೋ ಸಿನಿಮಾ ಅಂತಿಮವಾಗಿ ಅನಿಲ್ ಕಪೂರ್ ಬಿಗ್ ಬಾಸ್ OTT, ಸೀಸನ್ 3 ರ ಹೊಸ ಹೋಸ್ಟ್ ಎಂದು ಘೋಷಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್ ಅಧಿಕೃತ ಘೋಷಣೆ ಮಾಡಿದ್ದು, ಪೋಸ್ಟರ್ ಮತ್ತು ರಿಯಾಲಿಟಿ ಶೋ ಸ್ಟ್ರೀಮಿಂಗ್ ಪ್ರಾರಂಭವಾಗುವ ದಿನಾಂಕವನ್ನು ಹಂಚಿಕೊಂಡಿದೆ. ನಟ ಸಲ್ಮಾನ್ ಖಾನ್‌ನಿಂದ ಅನಿಲ್ ಕಪೂರ್ ಹೋಸ್ಟ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

"ಬಿಗ್ ಬಾಸ್ OTT 3 ಗಾಗಿ 'ಅನಿಲ್ ಕಪೂರ್' ಅವರನ್ನು ಹೊಸ ಹೋಸ್ಟ್ ಆಗಿ ಪ್ರಸ್ತುತಪಡಿಸುತ್ತಿದ್ದೆವೆ. ಜಿಯೋ ಸಿನಿಮಾ ಪ್ರೀಮಿಯಮ್‌ನಲ್ಲಿ ಜೂನ್ 21 ರಿಂದ ಪ್ರಾರಂಭವಾಗುವ ಬಿಗ್ ಬಾಸ್ ಒಟಿಟಿ 3ಯಲ್ಲಿ ಅವರ ಮ್ಯಾಜಿಕ್‌ಗೆ ಸಾಕ್ಷಿಯಾಗಿ" ಎಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ.

Bigg Boss OTT 3 to stream from June 21 with new host Anil Kapoor

ಅನಿಲ್ ಕಪೂರ್ ಕೂಡ ಬಿಗ್ ಬಾಸ್ OTT 3 ರ ನಿರೂಪಕರಾಗುವ ಬಗ್ಗೆ ಸುಳಿವು ನೀಡಿದ್ದಾರೆ. "ಬಿಗ್ ಬಾಸ್ ಒಟಿಟಿ ಹೋಸ್ಟ್ ಮಾಡುವವರು ತುಂಬಾ ಗುಡ್ ಲುಕ್ಕಿಂಗ್ ಅಂತ ಕೇಳಿ ಬರುತ್ತಿದೆ" ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಒಟಿಟಿ ಮೊದಲ ಸೀಸನ್ ಅನ್ನು ಕರಣ್ ಜೋಹರ್ ಮತ್ತು ಎರಡನೆಯ ಸೀಸನ್‌ ಅನ್ನು ಸಲ್ಮಾನ್ ಖಾನ್ ಹೋಸ್ಟ್ ಮಾಡಿದ್ದರು.

ರಿಯಾಲಿಟಿ ಶೋ ಬಿಗ್ ಬಾಸ್‌ನ ಡಿಜಿಟಲ್ ಬಿಗ್ ಬಾಸ್ ಒಟಿಟಿಯ ಉದ್ಘಾಟನಾ ಸೀಸನ್ Voot ನಲ್ಲಿ ಲಭ್ಯವಿದ್ದರೆ, ಎರಡನೇ ಸೀಸನ್ JioCinema ನಲ್ಲಿ ಸ್ಟ್ರೀಮ್ ಮಾಡಿತು. ದಿವ್ಯಾ ಅಗರ್ವಾಲ್ ಬಿಗ್ ಬಾಸ್ OTT ಯ ಮೊದಲ ಸೀಸನ್ ಗೆದ್ದರು, ಮತ್ತು ಯೂಟ್ಯೂಬರ್ ಎಲ್ವಿಶ್ ಯಾದವ್ ಎರಡನೇ ಸೀಸನ್‌ನಲ್ಲಿ ವಿಜಯ ಸಾಧಿಸಿದ್ದರು. ಮೂರನೇ ಸೀಸನ್‌ಗಾಗಿ ಒಟಿಟಿ ವೀಕ್ಷಕರು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+