Bigg Boss: ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಕಾಲಿಡುವುದು ಇವರೇ...
ಬಿಗ್‌ಬಾಸ್ ಮನೆಯಲ್ಲಿ ಈ ವಾರ ಟಾಪ್ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ವಾರ ದೊಡ್ಮನೆಯಿಂದ ಹೊರಗಡೆ ಕಾಲಿಡುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಮೂಡಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ನಾಮಿನೇಷನ್ ಪ್ರಕ್ರಿಯೆ ಕೊಂಚ ವಿಭಿನ್ನವಾಗಿತ್ತು. ಇದರಿಂದಾಗಿ ಟಾಪ್ ಸ್ಪರ್ಧಿಗಳೇ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಹಾಗಾದರೆ ಆ ಸ್ಪರ್ಧಿಗಳು ಯಾರು? ಇದರಲ್ಲಿ ಯಾರು ಸ್ಟ್ರಾಂಗ್? ಯಾರು ವೀಕ್? ಯಾರು ಮನೆಯಿಂದ ಔಟ್ ಆಗ್ತಾರೆ? ಬಿಗ್‌ಬಾಸ್ ವೀಕ್ಷಕರ ಅಭಿಪ್ರಾಯ ಏನು? ಎಲ್ಲವನ್ನೂ ತಿಳಿಯೋಣ.
ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ಮಾತಿನಿಂದಲೇ ಫೇವಸ್ ಆಗಿರುವ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಯಿಂದ ಪದೇ ಪದೇ ಹೊರಗಡೆ ಹೋಗ್ತಾರೆ ಒಳಗಡೆ ಬರುತ್ತಾರೆ. ಹೊರಗಡೆ ಹೋದಾಗ ಇಲ್ಲಿ ಯಾರು ಸ್ಟ್ರಾಂಗ್? ಯಾರು ವೀಕ್? ಯಾರನ್ನು ಟಾರ್ಗೇಟ್ ಮಾಡಬೇಕು? ಈ ಎಲ್ಲಾ ವಿಚಾರಗಳನ್ನು ತಿಳಿದುಕೊಂಡು ಬಂದು ಚೈತ್ರಾ ತಮ್ಮ ಆಟವನ್ನು ಬದಲಾಯಿಸುವ ಸಾಧ್ಯತೆ ಇದೆ. ಇದರಿಂದ ಬೇರೆಯವರ ಆಟ ವೀಕ್ ಆಗುವ ಸಾಧ್ಯತೆ ಕೂಡ ಹೆಚ್ಚು. ಹೀಗಾಗಿ ಈ ವಾರ ಬಿಗ್‌ಬಾಸ್ ಮನೆಯಿಂದ ಚೈತ್ರಾ ಹೊರ ಹೋಗಬಹುದು ಎನ್ನಲಾಗುತ್ತಿದೆ.

ಇನ್ನೂ ಈ ವಾರ ನಾಮಿನೇಷನ್ ಪ್ರಕ್ರಿಯೆಯನ್ನು ಹೊಸ ಟಾಸ್ಕ್ ರೀತಿ ನೀಡಲಾಗಿತ್ತು. ಸ್ಪರ್ಧಿಗಳಿಗೆ ಬೆನ್ನಿಗೆ ಸ್ಪಾಂಜ್ ಅನ್ನು ಕಟ್ಟಿ ಅದಕ್ಕೆ ಚೂರಿಯನ್ನು ಚುಚ್ಚುವುದು ಈ ವಾರದ ನಾಮಿನೇಷನ್ ಪ್ರಕ್ರಿಯೆಯಾಗಿತ್ತು. ಅವರಲ್ಲಿ ಚೈತ್ರಾ, ಮೋಕ್ಷಿತಾ, ಭವ್ಯಾ, ಮಂಜು, ಗೌತಮಿ ಇವರುಗಳ ಬೆನ್ನಲ್ಲಿ ಚೂರಿಗಳು ಜಾಸ್ತಿ ಇರುತ್ತವೆ. ಅತಿ ಕಡಿಮೆ ಚೂರಿಗಳು ಇದ್ದಿದ್ದು ರಜತ್, ತ್ರಿವಿಕ್ರಮ್ ಹಾಗೂ ಹನುಮಂತ ಅವರಿಗೆ.
ಚೂರಿ ಹಾಕುವಾಗ ಕೆಲವು ಸ್ಪರ್ಧಿಗಳು ಉತ್ತಮ ಕಾರಣಗಳನ್ನು ನೀಡುತ್ತಾರೆ. ಇನ್ನೂ ಕೆಲವರಿಗೆ ಕಾರಣಗಳೇ ಇರುವುದಿಲ್ಲ. ಇದೇ ವೇಳೆ ಐಶ್ವರ್ಯ ಹಾಗೂ ಉಗ್ರಂ ಮಂಜು ನಡುವೆ ವಾಗ್ವಾದವಾಗುತ್ತದೆ. ಬಿಗ್‌ಬಾಸ್ ಮನೆಯಲ್ಲಿ ಎರಡು ಗುಂಪುಗಳಿವೆ. ಶಿಶಿರ್, ಮೋಕ್ಷಿತಾ, ಐಶ್ವರ್ಯ ಒಂದು ಗುಂಪಾದರೆ, ಮಂಜು ಹಾಗೂ ಗೌತಮಿ ಮತ್ತೊಂದು ತಂಡ. ಶಿಶಿರ್, ಮೋಕ್ಷಿತಾ, ಐಶ್ವರ್ಯ ಈ ಮೂರು ಜನ ಗೌತಮಿ ಹಾಗೂ ಮಂಜು ಅವರ ಬೆನ್ನಿಗೆ ಚೂರಿಯನ್ನು ಇಡುತ್ತಾರೆ.
ಬಿಗ್‌ಬಾಸ್ ಮನೆಯಲ್ಲಿ ಎರಡು ಗುಂಪು
ಶಿಶಿರ್, ಮೋಕ್ಷಿತಾ, ಐಶ್ವರ್ಯ ಬಾಯಿ ತೆಗೆದು ಯಾರನ್ನು ಟಾರ್ಗೆಟ್ ಮಾಡಬೇಕು ಎಂದು ಹೇಳುವುದಿಲ್ಲ. ಆದರೆ ಕಣ್ಣ ಸನ್ನೆಯಲ್ಲಿ ಮಾತನಾಡಿಕೊಂಡು ಮಂಜು ಹಾಗೂ ಗೌತಮಿಯವರನ್ನು ಟಾರ್ಗೇಟ್ ಮಾಡುತ್ತಿದ್ದಾರೆ. ಅವರ ಆಟದ ವೈಖರಿ ಬಗ್ಗೆ ಮಾತನಾಡಿ ಅವರವರಲ್ಲೇ ಯಾರನ್ನು ನಾಮಿನೇಟ್ ಮಾಡಬೇಕು ಅಂತ ಕಣ್ಣ ಸನ್ನೆಯಲ್ಲಿ ಮಾತನಾಡಿಕೊಂಡು ನಿರ್ಧಾರ ಮಾಡುವುದು ಕಂಡು ಬಂದಿದೆ. ಈ ವಾರ ಕಿಚ್ಚಾ ಸುದೀಪ್ ಈ ಮೂರು ಜನಕ್ಕೂ ಕ್ಲಾಸ್ ತೆಗೆದುಕೊಳ್ಳಬೇಕಿದೆ. ಮಂಜು ಹಾಗೂ ಗೌತಮಿ ಜೊತೆಗೆಇದ್ದ ಮೋಕ್ಷಿತಾ ದೂರವಾಗಿ ಈಗ ಶಿಶಿರ್ ಹಾಗೂ ಐಶ್ವರ್ಯ ಜೊತೆ ಸೇರಿಕೊಂಡಿದ್ದಾರೆ. ಇತ್ತ ಗೌತಮಿ ತಮ್ಮ ಹಾಗೂ ಮಂಜು ಟೀಮ್‌ಗೆ ಹನುಮಂತ ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಗುಂಪುಗಾರಿಕೆಗೆ ಆಟ ಆಡದವರಿಗೂ ನಾಮಿನೇಟ್‌ನಿಂದ ಪಾರು
ಗೌತಮಿ ಹಾಗೂ ಮಂಜು ಬಿಟ್ಟರೆ ಇನ್ನುಳಿದ ಜನ ಉತ್ತಮವಾಗಿ ಆಟ ಆಡಿದ್ದಾರಾ ಎಂದು ಪ್ರಶ್ನೆ ಮಾಡಿದರೆ ಇಲ್ಲ. ಬೇರೆ ಸ್ಪರ್ಧಿಗಳು ಕೂಡ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲದೇ ಯಶ್ವರ್ಯ ಅವರು ಈ ವಾರ ಹೇಳಿಕೊಳ್ಳುವ ಮಟ್ಟಿಗೆ ಪ್ರದರ್ಶನ ನೀಡಿಲ್ಲ. ಕಳೆದ ವಾರ ಕೂಡ ಅವರು ಬಾಟಮ್ ಅಲ್ಲಿ ಹೋಗಿದ್ದರು.
ಇನ್ನೂ ಚೈತ್ರಾ ಅವರದ್ದೂ ಕೂಡ ಬರಿ ಬಾಯಿ ಮಾತು ಬಿಟ್ಟರೆ ಬೇರೆ ಯಾವುದೇ ಆಟದಲ್ಲಿ ಇಲ್ಲ. ಇನ್ನೂ ಕೆಲವರಂತೂ ಟಾಸ್ಕ್‌ಗಳನ್ನೇ ಆಡದೇ ಇಷ್ಟು ದಿನ ಮನೆಯಲ್ಲಿ ಉಳಿದುಕೊಮಡಿದ್ದಾರೆ. ಈ ವಾರ ಚೈತ್ರಾ, ಮೋಕ್ಷಿತಾ, ಮಂಜು, ಭವ್ಯ, ಗೌತಮಿ ಅವರು ನಾಮಿನೇಟ್ ಆಗಿದ್ದಾರೆ.
ಈ ವಾರ ಐಶ್ವರ್ಯ ಅವರು ನಾಮಿನೇಟ್ ಆಗಿದ್ದರೆ ಈ ವಾರ ಅವರು ಮನೆಗೆ ಹೋಗುವ ಸಾಧ್ಯತೆಗಳು ಹೆಚ್ಚಾಗಿತ್ತು. ಯಾಕೆಂದರೆ ಅವರು ಡೇ ಒನ್‌ಯಿಂದಲೂ ಅವರು ಆಟವನ್ನು ಬದಲಾಯಿಸಿಕೊಳ್ಳಬೇಕಿತ್ತು. ಆದರೆ ಅವರು ಈಗ ಆಟವನ್ನು ಬದಲಾಯಿಸಲು ಪ್ರಯತ್ನಪಡುತ್ತಿದ್ದಾರೆ. ಹೀಗಾಗಿ ಕಳೆದ ದಿನ ಹೇಳಿಕೊಳ್ಳುವ ಮಟ್ಟಿಗೆ ಆಟವನ್ನು ಬಿಗ್‌ಬಾಸ್ ಸ್ಪರ್ಧಿಗಳು ಆಡಿಲ್ಲ. ಇಂತವರನ್ನು ನಾಮಿನೇಟ್ ಮಾಡುವುದನ್ನು ಬಿಟ್ಟು ಗ್ರೂಪ್ ಮಾಡಿಕೊಂಡು ಪರಸ್ಪರ ನಾಮಿನೇಟ್ ಮಾಡುತ್ತಿರುವುದು ಬಿಗ್‌ಬಾಸ್ ಆಟದ ವೈಖರಿಯನ್ನೇ ಬದಲಾಯಿಸಿಬಿಟ್ಟಿದೆ. ಹೀಗಾಗಿ ಈ ವಾರ ಬಿಗ್‌ಬಾಸ್ ಮನೆಯಿಂದ ಯಾರು ಔಟ್ ಆಗ್ತಾರೆ ಅನ್ನೋ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ.












Click it and Unblock the Notifications