Gauthami Jadav: ಮಂಜು ಫ್ಯಾಮಿಲಿ ಬಗ್ಗೆ ಸಿಕ್ಕಾಪಟ್ಟೆ ಬಿಲ್ಡಪ್ ಕೊಟ್ಟಿದ್ರು, ಹೊರಗೆ ಬದ್ಮೇಲೆ ಗೊತ್ತಾಗಿದ್ದು- ಗೌತಮಿ
ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಗೌತಮಿ ಜಾದವ್ ಸಿಕ್ಕಪಟ್ಟೆ ಸುದ್ದಿಯಲ್ಲಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಯಾರು ಹೇಗೆ ಎನ್ನುವ ಬಗ್ಗೆ ಗೌತಮಿ ಮಾತನಾಡಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ಮಾತನಾಡಿದ ಗೌತಮಿ ಬಿಗ್‌ಬಾಸ್ ಮನೆಯಲ್ಲಿ ನಡೆದ ಕೆಲ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ವೇಳೆ ಮಂಜು ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆ ಕೂಡ ಅವರು ಪ್ರಸ್ತಾಪ ಮಾಡಿದ್ದಾರೆ. ಗೌತಮಿ ಸಂದರ್ಶನವೊಂದರಲ್ಲಿ ಮಂಜು ಅವರು ತಮಗೆ ಸುಳ್ಳು ಹೇಳಿದ್ದರು ಎಂದು ಹೇಳಿದ್ದಾರೆ. ಹಾಗಾದರೆ ಮಂಜು ಗೌತಮಿಗೆ ಹೇಳಿದ್ದೇನು? ಅದು ಸುಳ್ಳು ಅಂತ ಗೊತ್ತಾಗಿದ್ದು ಯಾವಾಗ?
ಗೌತಮಿ ಜಾದವ್ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಸಂದರ್ಶನವೊಂದರಲ್ಲಿ ಮಂಜು ಅವರು ತಮ್ಮ ಫ್ಯಾಮಿಲಿ ಬಗ್ಗೆ ಸಿಕ್ಕಾಪಟ್ಟೆ ಬಿಲ್ಡಪ್ ಕೊಟ್ಟಿದ್ದರು. ಆದರೆ ಅವರ ಫ್ಯಾಮಿಲಿ ಅವರು ಹೇಳಿದಂತೆ ಇಲ್ಲ. ನನಗೆ ಅದು ಹೊರಗಡೆ ಬಂದ ಮೇಲೆ ಗೊತ್ತಾಯಿತು ಎಂದು ಹೇಳಿದ್ದಾರೆ. ಮನೆಯಲ್ಲಿ ಮಾತನಾಡುವಾಗ ಮಂಜು ಅವರು ನನಗೆ ತಮ್ಮ ಫ್ಯಾಮಿಲಿ ಹೀಗೆ ಹಾಗೇ ಎಂದು ಹೇಳಿದ್ದರು. ಆದರೆ ಅದೆಲ್ಲಾ ಸುಳ್ಳು ಅಂತ ನನಗೆ ಹೊರಗಡೆ ಬಂದ ಬಳಿಕ ಗೊತ್ತಾಗಿದೆ ಎಂದಿದ್ದಾರೆ.

ಬಿಗ್‌ಬಾಸ್ ಮನೆ ಒಳಗೆ ಸಮಯ ಕಳೆದಿದ್ದು ಹೇಗೆ?
ಬಿಗ್‌ಬಾಸ್ ಮನೆಯಲ್ಲಿ 24 ಗಂಟೆ ಏನಾಯ್ತು ಎಂದು ತೋರಿಸಲು ಆಗಲ್ಲ. ಹೀಗಾಗಿ ಮನೆಯಲ್ಲಿ ಏನಾಯ್ತು? ಏನ್ ಮಾತನಾಡಿದ್ವಿ? ಅನ್ನೋದು ನಮಗೆ ಮಾತ್ರ ಗೊತ್ತಿರುತ್ತದೆ. ಬೆಳಗ್ಗೆ ಎದ್ದ್ ತಕ್ಷಣ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು. ನಂತರ ಮಧ್ಯಾಹ್ನ ಟಾಸ್ಕ್‌ಗಳನ್ನು ಕೊಡ್ತಾರೆ. ಅದನ್ನು ಆಡಿ ಸುಸ್ತಾಗಿ ಅಡುಗೆ ಮಾಡಿಕೊಂಡು ತಿಂದು ಮಲಗುವ ಹೊತ್ತಿಗೆ ರಾತ್ರಿ ಆಗಿರುತ್ತಿತ್ತು. ಹೀಗಾಗಿ ನಮಗೆ ಬಿಗ್‌ಬಾಸ್ ಮನೆಯಲ್ಲಿ ಬೇಸರ ಆಗಿದ್ದು ತುಂಬಾ ಕಡಿಮೆ ಎಂದು ಗೌತಮಿ ಹೇಳಿಕೊಂಡಿದ್ದಾರೆ.
ನಾನು ಅತ್ತಿದ್ದು, ಬೇಜಾರು ಮಾಡಿಕೊಂಡಿದ್ದು ಮೋಕ್ಷಿತಾ ಹಾಗೂ ಮಂಜು ವಿಚಾರಕ್ಕೆ ಮಾತ್ರ. ಯಾಕೆಂದರೆ ನಾನು ಅಳೋದು ನನ್ನ ಹತ್ತಿರದವರು ಬೇಸರ ಮಾಡಿದಾಗ ಮಾತ್ರ. ನನ್ನನ್ನು ಅಳಿಸೋದು ನನ್ನ ಹತ್ತಿರದವರಿಂದ ಮಾತ್ರ ಸಾಧ್ಯ. ಬೇರೆಯವರ ವಿಚಾರಕ್ಕೆ ನಾನು ಯಾವತ್ತೂ ಕೂಡ ತಲೆಯನ್ನು ಕೆಡಿಸಿಕೊಂಡಿಲ್ಲ ಎಂದು ಗೌತಮಿ ಹೇಳಿದ್ದಾರೆ.
ರಜತ್ ಬಂದ ಮೇಲೆ ತ್ರಿವಿಕ್ರಮ್ ಬದಲಾದ್ರಾ?
ಇನ್ನೂ ರಜತ್ ಹಾಗೂ ತ್ರಿವಿಕ್ರಮ್ ಸ್ನೇಹದ ಬಗ್ಗೆ ಕೂಡ ಗೌತಮಿ ಮಾತನಾಡಿದ್ದಾರೆ. 'ರಜತ್ ಬಂದ ಮೇಲೆ ತ್ರಿವಿಕ್ರಮ್ ಬದಲಾದ್ರು ಎಂದು ನನಗೂ ಅನಿಸುತ್ತೆ. ಯಾಕೆಂದರೆ ತ್ರಿವಿಕ್ರಮ್ ಅವರು ರಜತ್ ಜೊತೆ ಸೇರಿಕೊಂಡು ಆಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಹೀಗಾಗಿ ಅವರು ಸೇಫ್ ಗೇಮ್ ಆಡ್ತಾಯಿದ್ದಾರೆ ಅನಿಸುತ್ತಿದೆ. ಹೀಗಾಗಿ ಮಂಜು ಅವರು ವಿನ್ ಆದ್ರೆ ಒಳ್ಳೆಯದು' ಎಂದಿದ್ದಾರೆ ಗೌತಮಿ.
ಮಂಜು ಒಬ್ಬ ಡಿಫ್ರೆಂಟ್ ವ್ಯಕ್ತಿ..
ಮಂಜು ಹಾಗೂ ನನ್ನ ನಡುವಿನ ಸ್ನೇಹದ ಬಗ್ಗೆ ಬಿಗ್‌ಬಾಸ್ ಮನೆಯಲ್ಲೂ ಮಾತನಾಡುತ್ತಿದ್ದರು. ಅಲ್ಲಿ ಕೂಡ ನಾನು ಫೇಸ್ ಮಾಡಿದ್ದೆ. ಮನೆ ಹೊರಗೂ ಮಾತನಾಡುತ್ತಿದ್ದಾರೆ ನಾನು ಇಲ್ಲೂ ಕೂಡ ಫೇಸ್ ಮಾಡ್ತಾಯಿದ್ದೇನೆ. ಒಂದು ಒಳ್ಳೆಯ ಸ್ನೇಹ ಇದೆ ಅಂದರೆ ಅದಕ್ಕೆ ನೆಗಿಟಿವ್ ಆಂಡ್ ಪಾಸಿಟಿವ್ ಕಮೆಂಟ್ ಪಾಸ್ ಆಗುತ್ತದೆ. ನಾವು ಎರಡನ್ನೂ ಸಮಾನವಾಗಿ ಸ್ವೀಕಾರ ಮಾಡಬೇಕು. ಅದನ್ನು ನಾನು ಮಾಡ್ತೀನಿ, ಮಾಡಿದಿ ಎಂದು ಗೌತಮಿ ಹೇಳಿದ್ದಾರೆ.
ಒಟ್ಟಿನಲ್ಲಿ ಗೌತಮಿ ಹಾಗೂ ಮಂಜು ಅವರ ನಡುವಿನ ಸ್ನೇಹಕ್ಕೆ ಸದ್ಯ ಬ್ರೆಕ್ ಬಿದ್ದಿದಿಯಂತೆ. 'ಮನೆಯಿಂದ ಮಂಜು ಅವರು ಹೊರ ಬಂದ ಮೇಲೆ ಆ ಸ್ನೇಹ ಹಾಗೇ ಇರುತ್ತದೆ. ಆದರೆ ಮಂಜು ನಾನು ಇಬ್ಬರೂ ಮಾತನಾಡುತ್ತೀವಾ? ಇಲ್ವಾ? ಗೊತ್ತಿಲ್ಲ' ಎಂದು ಗೌತಮಿ ಹೇಳಿದ್ದಾರೆ.












Click it and Unblock the Notifications