ಲಾಯರ್ ಜಗದೀಶ್ ಹೊಸ ಅಧ್ಯಾಯ: ಬಿಗ್‌ಬಾಸ್‌ಗೆ ರೀ ಎಂಟ್ರಿ, ಟ್ವಿಸ್ಟ್ ಏನ್ ಗೊತ್ತಾ!
Lawyer Jagadish Controversy: ಬಿಗ್ ಬಾಸ್ ಕನ್ನಡ ಸೀಸನ್ 11ನಲ್ಲಿ ಮಿಂಚಿ ಅರ್ಧಕ್ಕೆ ನಿಲ್ಲಿಸಿದ್ದ ಲಾಯರ್ ಜಗದೀಶ್ ಅವರು ಹೊಸ ಅಧ್ಯಯ ಶುರು ಮಾಡ್ತಿದ್ದಾರೆ. ಲಾಯರ್ ಜಗದೀಶ್ ಅವರು ಹಲವು ಕಾರಣಕ್ಕೆ ಇದೀಗ ಕರ್ನಾಟಕದಲ್ಲಿ ಸುದ್ದಿಯಲ್ಲಿ ಇದ್ದಾರೆ. ಇದೀಗ ಅವರು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಮುಂದಾಗಿದ್ದಾರೆ. ಹೌದು ಈ ಬಗ್ಗೆ ಅವರೇ ವಿಡಿಯೋ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಹಿಂದಿ ಬಿಗ್‌ಬಾಸ್‌ಗೆ ಎಂಟ್ರಿ ಕೊಡುವ ಬಗ್ಗೆ ಲಾಯರ್ ಜಗದೀಶ್ ಅವರೇ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ನೋಡಿ..
ಲಾಯರ್ ಜಗದೀಶ್ ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಯಾವ ರೀತಿ ಅಂದ್ರೆ ಅವರಿಗೆ ಈಗ ಬಾಲಿವುಡ್‌ನಲ್ಲೂ ಜನ ಫಿದಾ ಆಗ್ತಿದ್ದಾರೆ. ಇದರ ಭಾಗವಾಗಿ ಲಾಯರ್ ಜಗದೀಶ್ ಅವರಿಗೆ ಹಿಂದಿಯ ಬಿಗ್‌ಬಾಸ್‌ನಿಂದ ಬಿಗ್ ಆಫರ್ ಬಂದಿದ್ದು, ನಾನು ಇಷ್ಟರಲ್ಲೇ ಹಿಂದಿ ಬಿಗ್‌ಬಾಸ್‌ಗೆ ಹೋಗ್ತಾ ಇದ್ದೀನಿ ಅಂತ ಲಾಯರ್ ಜಗದೀಶ್ ಅವರೇ ಹೇಳಿಕೊಂಡಿದ್ದಾರೆ. ಅವರು ಹಿಂದಿ ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

ಕರ್ನಾಟಕದ ಹಲವು ಗಣ್ಯರು ಬಾಲಿವುಡ್‌ಗೆ ಎಂಟ್ರಿಕೊಟ್ಟು ಮಿಂಚಿದ್ದಾರೆ. ಆ ಅದೃಷ್ಟ ಈಗ ನನ್ನನ್ನೂ ಹುಡುಕಿಕೊಂಡು ಬಂದಿದೆ. ಕರ್ನಾಟಕದಿಂದ ಪ್ರಕಾಶ್ ರಾಜ್, ಐಶ್ವರ್ಯಾರೈ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಈಗಾಗಲೇ ಹಲವರು ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ಇದೀಗ ನನಗೂ ಆ ಅವಕಾಶ ಸಿಕ್ಕಿದೆ. ನಾನೂ ಸಹ ಬಾಲಿವುಡ್‌ನಲ್ಲಿ ಮಿಂಚಲಿದ್ದೇನೆ. ಅಲ್ಲದೇ, ಬಾಲಿವುಡ್ / ಹಿಂದಿ ಬಿಗ್‌ಬಾಸ್‌ಗೆ ಬನ್ನಿ ಅಂತ ಆಫರ್ ಬಂದಿದೆ. ಅದರ ಬಗ್ಗೆ ಡಿಸ್ಕಷ್ನ್ ನಡಿತಿದೆ. ಸೋಮವಾರವೇ ಇದು ಅಂತಿಮವಾಗುವ ಸಾಧ್ಯತೆ ಇದೆ ಅಂತ ಲಾಯರ್ ಜಗದೀಶ್ ಅವರು ಹೇಳಿಕೊಂಡಿದ್ದಾರೆ.
ಹಿಂದಿಯಲ್ಲಿ ಸಲ್ಮಾನ್‌ಖಾನ್ ಅವರು ಬಿಗ್‌ಬಾಸ್ ಶೋ ನಡೆಸಿಕೊಡುತ್ತಿದ್ದಾರೆ. ಹಿಂದಿ ಬಿಗ್‌ಬಾಸ್ 18ನೇ ಸೀಸನ್ ನಡೆಯುತ್ತಿದೆ. ಈ ಸೀಸನ್‌ಗೆ ಲಾಯರ್ ಜಗದೀಶ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಾನು ಲಕ್ಷ ದುಡಿಯುವುದಕ್ಕೆ ಕಷ್ಟ ಪಡ್ತಿದ್ದೆ. ಆದರೆ, ಈಗ ಕೋಟಿ.. ಕೋಟಿ ಗಳಿಸುತ್ತಿದ್ದೇನೆ. ಇದೆಲ್ಲ ಕನ್ನಡಿಗರು ನನಗೆ ಕೊಟ್ಟಿರುವ ಆಶೀರ್ವಾದ. ಕರ್ನಾಟಕದಿಂದ ಈಗಾಗಲೇ ಸಾಕಷ್ಟು ಜನ ಹೋಗಿದ್ದಾರೆ. ನಾನೂ ಈಗ ಹೋಗ್ತಿದ್ದೇನೆ. ಈ ವಿಷಯ ನನಗೆ ತುಂಬಾನೇ ಸಂತೋಷವನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ ಬಿಗ್‌ಬಾಸ್ ಕಥೆ ಕಿಚ್ಚ ಸುದೀಪ್ ದಾದ & ಜಗ್ಗು ದಾದಾ ಜೊತೆ ಆಗಿತ್ತು. ಇನ್ಮೇಲೆ ಬಾಲಿವುಡ್ ಕಥೆ ಸಲ್ಮಾನ್‌ಖಾನ್ ವಿತ್ ಜಗ್ಗು ದಾದ ಜೊತೆ ಅಂತ ಆಗಲಿದೆ. ನಾನು ಈಗ ಕೋಟಿಗಳನ್ನು ಎಣಿಸುವಲ್ಲಿ ಬ್ಯೂಸಿಯಾಗಿದ್ದೇನೆ. ಸರ್ಕಾರಿ ನೌಕರರಿಗೂ ಕೈತುಂಬಾ ದುಡ್ಡು ಕೊಡ್ಬೇಕು ಅನ್ನೋದು ನನ್ನ ಆಸೆಯಾಗಿದೆ ಅಂತ ಅವರು ಹೇಳಿದ್ದಾರೆ.
ಇನ್ನು ಈ ಬಾರಿಯ ಕನ್ನಡ ಬಿಗ್‌ಬಾಸ್‌ನಲ್ಲಿ ಲಾಯರ್ ಜಗದೀಶ್ ಸಖತ್ ಮಿಂಚಿದ್ದರು. ಕನ್ನಡಿಗರನ್ನು ರಂಜಿಸಿದ್ದರು. ಅವರಿಗೆ ಹೊರಗಡೆ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋಯಿಂಗ್ ಸಹ ಸೃಷ್ಟಿಯಾಗಿತ್ತು. ಆದರೆ, ಎರಡನೇ ವಾರಕ್ಕೆ ಜಗಳ ಮಾಡಿಕೊಂಡು ಅವರು ಹೊರಗೆ ಬಂದಿದ್ದರು. ಹೀಗಾಗಿ, ಇದೀಗ ಅವರು ಬಿಗ್‌ಬಾಸ್ ಹಿಂದಿ ಸೀಸನ್‌ಗೆ ಹೋಗ್ತಾ ಇದ್ದಾರೆ ಎನ್ನುವ ಮಾತು ಕೇಳಿ ಜನ ಹಾಗೂ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.












Click it and Unblock the Notifications