Bigg Boss: ಸ್ನಾನ ಮಾಡೋ ತಮ್ಮ ಅಂತ ಹನುಮಂತಗೆ ಬೆಸ್ಟ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!
ಉತ್ತರ ಕರ್ನಾಟಕದ ಹುಲಿ ಅಂತಲೇ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹನುಮಂತ ಫೇಮಸ್ ಆಗ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರು ಹನುಮಂತಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದು, ಅದರೊಂದಿಗೆ ಚಂದದ ಪದ್ಯವೊಂದನ್ನು ಬರೆದು ಪತ್ರವನ್ನು ಕೊಟ್ಟಿದ್ದಾರೆ.
ಹನುಮಂತನ ಹಾಡು, ಮುಗ್ಧತೆ ಹಾಗೂ ಹಾಸ್ಯ ಬಿಗ್‌ಬಾಸ್‌ನಲ್ಲಿ ಹೊಸ ಖದರ್ ಸೃಷ್ಟಿ ಮಾಡಿದೆ. ಬಿಗ್‌ಬಾಸ್‌ನಲ್ಲಿ ಬರೀ ಜಗಳ ಹೊಡಿ ಬಡಿ ಅನ್ನುವ ವಾತಾವರಣ ಕಂಪ್ಲೀಟ್ ಆಗಿ ಬದಲಾಗಿ ಹೋಗಿದ್ದೇ ಹನುಮಂತ ಬಿಗ್‌ಬಾಸ್‌ಗೆ ಬಂದ ಮೇಲೆ ಅನ್ನುವಂತೆ ವಾತಾವರಣ ಈಗ ಬದಲಾಗಿದೆ. ಸುದೀಪ್ ಅವರು ಬೆಸ್ಟ್ ಗಿಫ್ಟ್ ಕೊಟ್ಟಿದ್ದು, ಆ ಗಿಫ್ಟ್‌ನಿಂದಲೇ ಸಂತೋಷದಲ್ಲಿ ತೆಲಾಡಿದ್ದಾರೆ.

ಕನ್ನಡ ಬಿಗ್‌ಬಾಸ್ ಸೀಸನ್ 11ರಲ್ಲಿ ಹನುಮಂತ ಅವರು ಬಂದ ಮೇಲೆ ವಾತಾವರಣ ತಿಳಿಯಾಗಿದೆ. ಹಾಸ್ಯದಿಂದಲೇ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಹನುಮಂತ ಯಶಸ್ವಿಯಾಗಿದ್ದಾರೆ. ಆದರೆ, ಬಿಗ್‌ಬಾಸ್‌ನಲ್ಲಿ ಹನುಮಂತ ಸ್ನಾನ ಮಾಡುವ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿರುತ್ತದೆ.
ಅವರು ದಿನಾ ಸ್ನಾನ ಮಾಡಲ್ಲ, ವಾರಕ್ಕೆ ಒಂದೇ ಸಲ ಸ್ನಾನ ಮಾಡೋದು ಇಲ್ಲ. ಅವರಿಗೆ ಅನಿಸಿದಾಗ ಸ್ನಾನ ಮಾಡ್ತಾರೆ ಅಂತ ಬಿಗ್‌ಬಾಸ್‌ನ ಸ್ಪರ್ಧಿಗಳು ಹಾಸ್ಯ ಮಾಡಿದ್ದು, ಹನುಮಂತ ಅವರ ಕಾಲೆಳೆದಿದ್ದು ಇದೆ. ಇದನ್ನು ಹನುಮಂತ ಅವರು ಹಾಸ್ಯ ಮನೋಭಾವದಿಂದಲೇ ಸ್ವೀಕರಿಸಿದ್ದಾರೆ.
ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡುವಾಗಲೂ ಈ ವಿಷಯ ಚರ್ಚೆಯಾಗಿತ್ತು. ಸತ್ಯಾ ಖ್ಯಾತಿಯ ಗೌತಮಿ ಅವರು ಸಹ ಈ ವಿಷಯದ ಬಗ್ಗೆ ನಗುತ್ತಲ್ಲೇ ಮಾತನಾಡಿದ್ದರು. ಹನುಮಂತ ಅವರು ಬಟ್ಟೆ ಹೊಗೆಯುವುದಕ್ಕೆ ಆಗಲ್ಲ ಅಂತ ಸ್ನಾನ ಮಾಡೋಕೆ ಆಗಲ್ಲ ಅಂತ ಹೇಳ್ತಿದ್ದಾರೆ. ನಾನೇ ನಿಮ್ಮ ಬಟ್ಟೆ ಹೊಗೆದುಕೊಡ್ತೀನಿ ಕೊಡಿ ಅಂತ ಹೇಳಿದ್ರೂ ಕೇಳ್ತಿಲ್ಲ. ಅವರಿಗೆ ಸ್ನಾನ ಮಾಡೋಕೆ ಇಷ್ಟ ಇಲ್ಲ ಎಂದಿದ್ದರು.
ಕಿಚ್ಚ ಸುದೀಪ್ ಅವರು ಯಾಕಪ್ಪ ಸ್ನಾನ ಮಾಡಲ್ಲ ಅಂತ ಹನುಮಂತ ಅವರನ್ನು ಕೇಳಿದಾಗ, ಸರಾ ಬಟ್ಟೆ ಕಡಿಮೆ ಅದಾವ್ ರೀ ಎಂದಿದ್ದರು. ನನ್ನ ಹತ್ರ ನಾಲ್ಕೈದು ಜೊತೆ ಬಟ್ಟೆಗಳಿವೆ ಅಷ್ಟೇ ಎಂದಿದ್ದರು. ಈ ಉತ್ತರ ಕೇಳಿದ ಸುದೀಪ್ ಅವರು ಕಿರುನಗೆ ಬೀರಿದ್ದರು.
ಅಲ್ಲದೇ ಹನುಮಂತು ಅವರೇ ನಿಮ್ಮ ಬಟ್ಟೆಯ ಅಳತೆ ಕೊಡಿ. ನಮ್ಮ ಡಿಸೈನರ್‌ಗೆ ಕಡೆಯಿಂದ ನಿಮಗೆ ಬಟ್ಟೆ ಕಳುಹಿಸ್ತೀವಿ ಎಂದಿದ್ದರು. ಆ ಮಾತನ್ನು ಕಿಚ್ಚ ಸುದೀಪ್ ಅವರು ಉಳಿಸಿಕೊಂಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಹನುಮಂತುಗೆ ಕಿಚ್ಚ ಸುದೀಪ್ ಅವರು ಭರ್ಜರಿ ಹಾಗೂ ಸ್ಪೆಷಲ್ ಗಿಫ್ಟ್‌ಗಳನ್ನು ಕೊಟ್ಟಿದ್ದಾರೆ.
ದುಬಾರಿ ಬೆಲೆಯ ಬಟ್ಟೆ: ಹನುಮಂತ ಅವರಿಗೆ ಕಿಚ್ಚ ಸುದೀಪ್ ದುಬಾರಿ (ಬ್ರಾಂಡೆಂಡ್) ಬಟ್ಟೆಗಳನ್ನು ಗಿಫ್ಟ್ ಮಾಡಿದ್ದಾರೆ. ಅದರಲ್ಲಿ ಹೊಸ ಶರ್ಟ್, ಫ್ಯಾಂಟ್, ಒಳ ಉಡುಪು (ಹೊಸ ಚೆಡ್ಡಿ) ಲುಂಗಿಯನ್ನು ಕೊಟ್ಟಿದ್ದಾರೆ. ಈ ಗಿಫ್ಟ್‌ಗಳನ್ನು ನೋಡಿ ಹನುಮಂತ ಖುಷಿಯಲ್ಲಿ ತೆಲಾಡಿದ್ದಾರೆ.
ಇದೆಲ್ಲ ನಿಜಾನ ನಂಗೆ ಏನು ಹೇಳ್ಬೇಕು ಅಂತಲೇ ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ದುಬಾರಿ ಚಡ್ಡಿಗಳನ್ನು ನೋಡಿ ಮಾವ ನೋಡ 3,000 ಸಾವಿರ ರೂಪಾಯಿ ಚಡ್ಡಿ ಅಂತ ಕುಣಿದಾಡಿದ್ದಾರೆ. ಈಚೆಗೆ ಹನುಮಂತ ನನ್ನ ಚಡ್ಡಿ ಕಳೆದೋಗಿದೆ ಬಿಗ್‌ಬಾಸ್ ಹುಡುಕಿ ಕೊಡ್ರಿ ಅಂತ ಹೇಳಿ ಕಾಮಿಡಿ ಮಾಡಿದ್ದರು.
ಚಂದದ ಕವನ
ಸುದೀಪ್ ಅವರು ಹನುಮಂತ ಅವರಿಗೆ ಗಿಫ್ಟ್ ಮಾತ್ರ ಕೊಟ್ಟಿಲ್ಲ ಅದರೊಂದಿಗೆ ಚಂದದ ಕವನವನ್ನೂ ಬರೆದು ಕಳುಹಿಸಿದ್ದಾರೆ. ಅದರಲ್ಲಿ ತಮ್ಮ ದಿನ ಜಳಕ (ಸ್ನಾನ) ಮಾಡೋ ಎನ್ನುವ ಸಾಲು ಸಹ ಇದೆ.
ಆ ಸಾಲುಗಳು ಈ ರೀತಿ ಇವೆ..
ಮೈಯ ಮುಚ್ಚೋ ಬಟ್ಟೆ ನೋಡಿ ಮಾನವ ಅಳೆಯಬ್ಯಾಡ್ರೀ..
ಮನಸ್ಸು ತೋರೋ ನಗುವ ನೋಡದೆ ಸುಮ್ಮನೆ ಇರಬ್ಯಾಡ್ರಿ
ಕುರಿಯ ಕಾಯೋ ಕುರಿಗಾಹಿ ಕೊಡುವನು ಕಂಬಳಿ
ಜಗವ ಕಾಯೋ ರೈತ ಸ್ನೇಹಿ ನೀಡುತಾನೋ ನಮಗೆ ಅಂಬಲಿ
ಲೋ.. ತಮ್ಮ ಹನುಮಂತ ದಿನ ಜಳಕ ಮಾಡೋ
ದಿನ.. ದಿನವೂ ಪದವ ಗಟ್ಟಿ ಹೊಸ ಹಾಡು ಹಾಡೋ
ಇಂತಿ ನಿಮ್ಮ ಬಾದ್ ಷಾ ಕಿಚ್ಚ ಸುದೀಪ್ ಎಂದು ಬರೆಯಲಾಗಿದೆ. ಈ ಸಾಲುಗಳನ್ನು ಚೈತ್ರಾ ಕುಂದಾಪುರ ಅವರು ಓದಿದ್ದಾರೆ. ಈ ಸಾಲುಗಳು ಹಾಗೂ ಗಿಫ್ಟ್‌ಗೆ ಬಿಗ್‌ಬಾಸ್ ಸ್ಪರ್ಧಿಗಳು ಹಾಗೂ ವೀಕ್ಷಕರು ಸಹ ಫಿದಾ ಆಗಿದ್ದಾರೆ.












Click it and Unblock the Notifications