Bigg Boss Winner: ಬಿಗ್ ಬಾಸ್ ವಿನ್ನರ್ ವೋಟ್ಸ್ ರಿವೀಲ್: ಯಾರು ಆ ಸ್ಪರ್ಧಿ?
Bigg Boss Winner: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅತ್ಯಂತ ದೊಡ್ಡ ಶೋಗಳಲ್ಲಿ ಬಿಗ್ ಬಾಸ್ ಒಂದಾಗಿದೆ. 11ನೇ ಸೀಸನ್ ಇದೀಗ ಮುಕ್ತಾಯದ ಅಂತದಲ್ಲಿದ್ದು, ಈಗಾಗಲೇ ನಿನ್ನೆ ನಡೆದ ಎಪಿಸೋಡ್‌ನಲ್ಲಿ 6 ಸ್ಪರ್ಧಿಗಳ ಪೈಕಿ ಭವ್ಯಾ ಗೌಡ ಬಿಗ್ ಬಾಸ್ ಮನೆಯಿಂದ ಹೊರಗಡೆಬಂದಿದ್ದಾರೆ. ಇನ್ನು ಇಂದು ಕೊನೇ ದಿನವಾಗಿದ್ದು, ಫೈನಲ್ ಯಾರು ವಿನ್ ಆಗಲಿದ್ದಾರೆ ಎನ್ನುವ ಮಾಹಿತಿಯೊಂದು ಬಹಿರಂಗವಾಗಿದೆ.
ಬಾಣದಂತಹ ಮಾತು, ಯಾರಿಗೂ ಬಗ್ಗದ, ಸಿಡಿದ್ರೆ ಆಟಂ ಬಾಂಬ್, ತುಂಟಾಟದಲ್ಲಿ ಎತ್ತಿದ್ದ ಕೈ ಎಂಬ ಭವ್ಯಾ ಗೌಡ ಅವರು ನಿನ್ನೆ ನಡೆದ ಎಪಿಸೋಡ್‌ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಯಾಗಿದ್ದಾರೆ. ಇವರು ಪಡೆದಂತಹ ವೋಟ್‌ಗಳನ್ನು ಸಹ ಕಿಚ್ಚ ಸುದೀಪ್ ಅವರು ರೀವಿಲ್ ಮಾಡಿದ್ದಾರೆ. ಭವ್ಯಾ ಗೌಡ ಪಡೆದ ವೋಟ್‌ಗಳು 64,48,853 ಆಗಿವೆ. ಇದರ ನಡುವೆಯೇ ಫೈನಲಿಸ್ಟ್ ವೋಟ್‌ಗಳನ್ನು ರಿವೀಲ್ ಮಾಡಲಾಗಿದೆ.

ಇಂದು ಕನ್ನಡದ ಬಿಗ್‌ಬಾಸ್ ಸೀಸನ್ 11 ಮುಕ್ತಾಯವಾಗಲಿದೆ. ಇಷ್ಟು ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಜಿದ್ದಾಜಿದ್ದಿಗೆ ಬಿದ್ದು ಟಾಸ್ಕ್‌ಗಳನ್ನು ಆಡಿ ಜನರ ಮನ ಗೆದ್ದು ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಲ್ಲಿ ಇದೀಗ ಢವಢವ ಶುರುವಾಗಿದೆ. ಗ್ರ್ಯಾಂಡ್ ಫಿನಾಲೆ ಶನಿವಾರದ ಸಂಚಿಕೆಯಿಂದಲೇ ಆರಂಭ ಆಗಿದೆ. ಶನಿವಾರ ಸಂಜೆ 6 ಗಂಟೆಯಿಂದ ಆರಂಭವಾದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ವಿಶೇಷ ನೃತ್ಯಗಳನ್ನು ಸಹ ಏರ್ಪಡಿಸಲಾಯಿತು. ಕೊನೇ ದಿನವಾದ ಇಂದು (ಜನವರಿ 26) ಸಹ ಸಂಜೆ 6ರಿಂದ ರಾತ್ರಿ 11 ಗಂಟೆಯವರೆಗೆ ನಡೆಯಲಿದೆ.
ಇದೀಗ ಬಸ್ ಬಾಸ್ ಮನೆಯಲ್ಲಿ ಹನುಮಮಂತು, ತ್ರಿವಿಕ್ರಮ್, ಉಗ್ರಂ ಮಂಜು ಮತ್ತು ಮೋಕ್ಷಿತಾ ಪೈ ಉಳಿದುಕೊಂಡಿದ್ದಾರೆ. ಶನಿವಾರ ನಡೆದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಮನೆಯಿಂದ ಹೊರಗಡೆ ಬರುವ ಸ್ಪರ್ಧಿ ಯಾರೆಂದು ವೋಟಿಂಗ್ ಗ್ರಾಫ್ ಮೂಲಕ ತಿಳಿಸಿದ್ದರು. ಅಲ್ಲದೆ, ನಿನ್ನೆ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿಗೆ ಎಷ್ಟು ವೋಟ್ಸ್ ಬಂದಿದೆ ಅಂತಲೂ ತಿಳಿಸಿದ್ದರು.
ಇದೆಲ್ಲದಕ್ಕೂ ಮೊದಲು ನಂಬರ್ 1 ಸ್ಥಾನದಲ್ಲಿರುವ ಸ್ಪರ್ಧಿಗೆ ಎಷ್ಟು ವೋಟ್‌ಗಳು ಬಂದಿವೆ ಎಂದು ಬಹಿರಂಗಪಡಿಸಿದ್ದಾರೆ. ಮೊದಲ ಸ್ಥಾನದಲ್ಲಿ ಯಾವ ಸ್ಪರ್ಧಿ ಅತಿ ಹೆಚ್ಚು ವೋಟ್ಸ್ ಪಡೆದುಕೊಂಡಿದ್ದಾರೆ ಅಂತಾ ಮಾತ್ರ ರಿವೀಲ್ ಮಾಡಿಲ್ಲ. ಈ ಗ್ರಾಫ್ ನೋಡಿದ ತಕ್ಷಣ ಫೈನಲಿಸ್ಟ್‌ಗಳಲ್ಲದೆ, ವೀಕ್ಷಕರಾಗಿ ಬಂದಿದ್ದ ಸಹ ಸ್ಪರ್ಧಿಗಳು ಸಹ ಶಾಕ್‌ಗೆ ಒಳಗಾಗಿದ್ದಾರೆ.
ಕಿಚ್ಚ ಸುದೀಪ್ ಅವರು ನಿನ್ನೆ ನಡೆದ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಬೋರ್ಡ್‌ವೊಂದನ್ನು ಇಟ್ಟಿದ್ದರು. ಆ ಬೋರ್ಡ್‌ನಲ್ಲಿ ನಂಬರ್‌ಗಳ ವಿವರಗಳನ್ನು ಹಾಕಲಾಗಿದ್ದು, ಅದನ್ನು ಸ್ಪರ್ಧಿಗಳ ಮುಂದೆಯೇ ರಿವೀಲ್ ಮಾಡಿದರು. ಅತಿ ಹೆಚ್ಚು ವೋಟ್‌ಗಳನ್ನು ಪಡೆದು ವಿನ್ ಆಗಲಿರುವ ಸ್ಪರ್ಧಿ ಯಾರೆಂದು ಹಾಗೂ ಆ ಸ್ಪರ್ಧಿಗೆ ಎಷ್ಟು ಮತ ಬಂದಿವೆ ಅಂತಲೂ ತಿಳಿಸಿದ್ದಾರೆ. ವಿನ್ ಆಗಲಿರುವ ಮೊದಲ ಸ್ಪರ್ಧಿ 5,23,89,318 ವೋಟ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಘೋಷಿಸಿದರು. ಆದರೆ, ವಿನ್ನರ್ ಯಾರಾಗಿದ್ದಾರೆ ಎಂದು ಇಂದಿನ ಎಪಿಸೋಡ್‌ನಲ್ಲಿ ತಿಳಿದುಬರಲಿದೆ.
ಯಾರ ತಂಟೆಗೂ ಹೋಗಲ್ಲ, ಮುಚ್ಚುಮರೆ ಇಲ್ಲ, ಸಾದಾಸೀದಾ ಸಿಂಪಲ್, ಕೇಡು ಬಯಸಲ್ಲ ಎಂಬುದಕ್ಕೆ ಹನುಮಂತು ಅವರನ್ನು ಹೋಲಿಕೆ ಮಾಡಲಾಗಿದೆ. ಇನ್ನು ತ್ರಿವಕ್ರಮ್ ಅವರನ್ನು ಯಾರಿಗೂ ತಲೆಕೆಡಿಸಿಕೊಳ್ಳಲ, ಇಟ್ಟ ಹೆಜ್ಜೆ ತೆಗೆಯಲ್ಲ, ಸ್ಪಷ್ಟ ಗುರಿ, ಯಾವುದಕ್ಕೂ ಹೆದರುವುದಿಲ್ಲ ಎಬುದಕ್ಕೆ ಹೋಲಿಕೆ ಮಾಡಲಾಗಿದೆ.











Click it and Unblock the Notifications