Bigg Boss Kannada: ಬಿಗ್‌ ಬಾಸ್‌ ರಂಜಿತ್‌ ಇನ್ನೂ ಮದುವೆಯಾಗಿಲ್ಲ ಯಾಕೆ..?

ನೂರಾರು ಕನಸು ಹೊತ್ತು ಕನ್ನಡ ಬಿಗ್ ಬಾಸ್ ಮನೆಗೆ ಕಾಲಿಟ್ಟ ನಟ ರಂಜಿತ್‌ ದುಡುಕಿನ ನಿರ್ಧಾರದಿಂದ ಸ್ಪರ್ಧೆಯಿಂದ ಹೊರಬಂದಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವುದು ಅಕ್ಷಮ್ಯ ಎಂದು ಬಿಗ್‌ ಬಾಸ್‌ ರಂಜಿತ್‌ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಆದರೆ ಕಡಿಮೆ ಅವಧಿಯಲ್ಲೇ ರಂಜಿತ್‌ ಬಿಗ್‌ ಬಾಸ್‌ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಬಳಿಕ ರಂಜಿತ್ ಸಂದರ್ಶನಗಳಲ್ಲಿ ಬ್ಯೂಸಿಯಾಗಿದ್ದು, ಈ ವೇಳೆ ಈವರೆಗೂ ಯಾಕೆ ಮದುವೆಯಾಗಿಲ್ಲ ಎನ್ನುವ ಸತ್ಯವನ್ನು ಬಿಟ್ಟುಕೊಟ್ಟಿದ್ದಾರೆ. ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ ಅವರು, 'ನನ್ನ ತಾಯಿ ದೇವರು ಕೊಟ್ಟ ವರ, ತಾಯಿ ಅಂತಾ ಬಂದಾಗ ಪ್ರತಿಯೊಬ್ಬರಿಗೂ ಸೆಂಟಿಮೆಂಟ್ ಇದ್ದೇ ಇರುತ್ತದೆ. ನಾನು ನನ್ನ ಭಾವನೆಗಳನ್ನು ತೋರಿಸಿಕೊಳ್ಳುವುದು ತೀರಾ ಕಮ್ಮಿ. ನನ್ನ ಶಕ್ತಿನೂ ಅವರೇ, ನನ್ನ ವೀಕನೆಸ್‌ ಕೂಡ ಅವರೇ. ಅವರ ಹೆಸರು ಎಲ್ಲೇ ಕೆಳಿದರೂ ಕೂಡ ಕುಗ್ಗಿ ಬಿಡುತ್ತೇನೆ. ಆ ಮಟ್ಟಿಗೆ ನನ್ನ ತಾಯಿ ಜೊತೆ ನನ್ನ ಅಟ್ಯಾಚ್‌ಮೆಂಟ್.

Bigg Boss Kannada Why Is Bigg Boss Ranjith Not Get Married Yet

ಮನುಷ್ಯ ಜೀವನದಲ್ಲಿ ಏನೋ ಒಂದು ಮಾಡಬೇಕು ಮಾಡು ಮಾಡು ಅಂತಾ ನನ್ನಲ್ಲಿ ಕ್ರೀಡಾ ಸ್ಪೂರ್ತಿ ತುಂಬಿದ್ದು ಅವರೇ. ನನಗೆ ಕರಾಟೆ ಕಲಿಸಿದ್ದಾಗಲೀ, ಅಥ್ಲೇಟಿಕ್‌ ಕಲಿಸಿದ್ದಾಗಲೀ, ಈ ತರ ಇರಬೇಕು ಅಂತಾ ಕಲಿಸಿದ್ದು ಅವರು. ಇವತ್ತು ರಂಜಿತ್‌ ಒಂದು ಪರ್ಸನಾಲಿಟಿ ಪಡೆದುಕೊಂಡಿದ್ದಾನೆ ಅಂದರೆ ಅದಕ್ಕೆ ಕಾರಣ ಅವರೇ. ಜೊತೆಗೆ ನಮ್ಮ ತಂದೆನೂ ಇದ್ದಾರೆ.

ತಾಯಂದಿರು ಮಗನ ಬಗ್ಗೆ ಯೋಚನೆ ಮಾಡುವುದು ಜಾಸ್ತಿ, ಎಲ್ಲಿ ಹೋಗುತ್ತಾನೆ? ಏನು ಮಾಡುತ್ತಾನೆ? ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ. ನನಗೆ ಗರ್ಲ್‌ಫ್ರೆಂಡ್‌ ಯಾಕಿಲ್ಲ ಅಂದರೆ. ಅದೊಂದು ವಿಚಾರದಲ್ಲಿ ನಾನು ನನ್ನ ತಾಯಿ ಆಯ್ಕೆಗೆ ಬಿಟ್ಟಿದೆ. ನಮ್ಮ ಅಮ್ಮ ನೋಡಿದ ತಕ್ಷಣ ಹೇಳಿ ಬಿಡುತ್ತಿದ್ದರು. ಇದು ಸರಿಯಿಲ್ಲ. ಇದು ಬೇಡ ಎನ್ನುತ್ತಿದ್ದರು. ಒಂದು ಹುಡುಗಿಗೋಸ್ಕರ ಹೀಗೆಲ್ಲಾ ಮಾಡಿಕೊಳ್ಳುತ್ತೀಯಾ? ಹೀಗೆ ಪ್ರತಿಯೊಂದು ಕೂಡ ಹೇಳುತ್ತಿದ್ದರು. ಅದೆನೆಲ್ಲಾ ನಾನು ಕಲಿತುಕೊಳ್ಳುತ್ತಿದೆ.

Bigg Boss Kannada Why Is Bigg Boss Ranjith Not Get Married Yet

ಇಷ್ಟು ವರ್ಷ ಆದರೂ ನಾನ್ಯಾಕೆ ಮದುವೆ ಆಗಿಲ್ಲ ಅಂದರೆ ಬರುವ ಹುಡುಗಿಯಲ್ಲಿ ನನ್ನ ತಾಯಿ ಗುಣಗಳನ್ನು ಹುಡುಕುತ್ತಿದ್ದೇನೆ. ಆದರೆ ಅದು ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಾನಿನ್ನೂ ಮದುವೆಯಾಗಿಲ್ಲ. ಆ ಜಾಗ ತುಂಬಲು ಬರುವವರಿಂದಲೇ ಸಾಧ್ಯ. ನನ್ನ ತಾಯಾಗಿ, ನನ್ನ ಹೆಂಡತಿಯಾಗಿ ಪ್ರತಿಯೊಂದು ಸಂಬಂಧವನ್ನು ತುಂಬಿ ಬರಬೇಕು.

ಈ ಮನೆಗೆ ಯಾರೇ ಬಂದರೂ ಊಟ ಕೊಡದೇ, ನೀರು ಕೊಡದೇ ನನ್ನ ಅಮ್ಮ ಕಳುಹಿಸುತ್ತಿರಲಿಲ್ಲ. ಹೀಗಾಗಿ ಅವಳಲ್ಲೂ ಇದೇ ಗುಣ ಇರಬೇಕು. ಅದೇ ಗುಣಗಳನ್ನು ಹುಡುಕುತ್ತಿದ್ದೇನೆ ಅಂದರೆ ನನ್ನ ತಾಯನ್ನು ನಾನು ಯಾವ ಮಟ್ಟಿಗೆ ಇಟ್ಟುಕೊಂಡಿದ್ದೇನೆ ಎನ್ನುವುದನ್ನು ಯೋಚನೆ ಮಾಡಿ. ಹೋಗುವ ಬರುವ ಎಲ್ಲಾ ವಿಚಾರಗಳಲ್ಲಿಯೂ ನಾನು ನನ್ನ ತಾಯಿಯನ್ನು ನೆನಪಿಸಿಕೊಳ್ಳುತ್ತೇನೆ ಎಂದು ರಂಜಿತ್‌ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+