Bigg Boss Kannada: ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಗದೀಶ್, ರಂಜಿತ್ ಎಲ್ಲಿದ್ದಾರೆ ಗೊತ್ತೇ?
ಕಳೆದ ಎರಡು ದಿನಗಳಿಂದ ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಎಪಿಸೋಡ್‌ಗಳಲ್ಲಿ ಪ್ರಸಾರವಾಗಿರಲಿಲ್ಲ. ಇದೀಗ ಬಿಗ್ ಬಾಸ್ ಶಾಕ್ ಕೊಟ್ಟಿದ್ದು, ರಂಜಿತ್ ಹಾಗೂ ಜಗದೀಶ್ ಅವರನ್ನು ಹೊರಕ್ಕೆ ಕಳಿಸಲು ಬಿಗ್ ಬಾಸ್ ಆದೇಶ ಕೊಟ್ಟ ಪ್ರೋಮೋ ವಿಡಿಯೋ ವೈರಲ್ ಆಗುತ್ತಿದೆ.
ಜಗದೀಶ್, ಮನೆಯಲ್ಲಿ ಮಹಿಳೆಯರಿಗೆ ಆದ ಅಪಮಾನವನ್ನು ಹಾಗೂ ನಿಂದನೆಯನ್ನು ಬಿಗ್ ಬಾಸ್ ಸಹಿಸುವುದಿಲ್ಲ. ರಂಜಿತ್ ದೈಹಿಕವಾಗಿ ಹಲ್ಲೆ ಮಾಡುವುದು ಅಕ್ಷಮ್ಯ, ಹಾಗಾಗಿ ಈ ಕೂಡಲೇ ಇಬ್ಬರು ಮುಖ್ಯ ದ್ವಾರದ ಮೂಲಕ ಹೊರಗೆ ಬನ್ನಿ ಎಂದು ಬಿಗ್ ಬಾಸ್ ನೇರವಾಗಿ ಆದೇಶಿಸಿದ್ದಾರೆ. ಅಲ್ಲದೇ ನ್ಯಾಯ ಎತ್ತಿ ಹಿಡಿಯಲು ನಡೆದಿದೆ ಡಬಲ್ ಎಲಿಮಿನೇಷನ್ ಎಂದು ಪ್ರೋಮೋದಲ್ಲಿ ತಿಳಿಸಲಾಗಿದೆ.

ಬಿಗ್ ಬಾಸ್ ಇಬ್ಬರನ್ನು ಹೊರ ಹಾಕುವ ಆದೇಶ ಮಾಡುತ್ತಿದ್ದಂತೆ ಇತರ ಸ್ಪರ್ಧಿಗಳು ಶಾಕ್ ಆಗಿದ್ದು, ಇಬ್ಬರನ್ನು ಕ್ಷಮಿಸುವಂತೆ ಬಿಗ್ ಬಾಸ್ ಬಳಿ ಮನವಿ ಮಾಡಿದ್ದಾರೆ. 'ಬೇಕಂತಲೇ ಈ ತಪ್ಪು ಆಗಿಲ್ಲ. ತಿಳಿಯದೇ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ, ಇದೊಂದು ಚಾನ್ಸ್ ಕೊಡಿ, ಪ್ಲೀಸ್ ಬಿಗ್ ಬಾಸ್' ಎಂದು ಬಿಗ್ ಬಾಸ್ ಬಳಿ ಎಲ್ಲರೂ ಮನವಿ ಮಾಡಿದ್ದಾರೆ.
ಅಲ್ಲದೇ ಮನೆಯಿಂದ ಹೊರ ಹೋಗುತ್ತಿರುವ ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿರುವುದನ್ನು ಪ್ರೋಮೋದಲ್ಲಿ ನೋಡಬಹುದಾಗಿದೆ.
ಇನ್ನು ಮಂಗಳವಾರ ಈ ಘಟನೆ ನಡೆದಿದ್ದು, ಅಂದೇ ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ಬಿಗ್ ಬಾಸ್ ಮನೆಯಿಂದ ಔಟ್ ಎನ್ನುವ ಸುದ್ದಿ ಹೊರಬಿದ್ದಿತ್ತು. ಆದರೆ ಇಂದಿನ ಎಪಿಸೋಡ್‌ನಲ್ಲಿ ಇದನ್ನು ತೋರಿಸಲಾಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಈ ಇಬ್ಬರು ಸ್ಪರ್ಧಿಗಳು ಈವರೆಗೆ ಮನೆಗೆ ಬಂದಿಲ್ಲ ಎನ್ನಲಾಗಿದೆ.
ಹೀಗಾಗಿ ಬಿಗ್ ಬಾಸ್ನಿಂದ ಬಂದವರು ಎಲ್ಲಿ ಹೋಗಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದ್ದು, ಕೆಲವು ಮಾಹಿತಿಗಳ ಪ್ರಕಾರ ಅವರನ್ನು ಸೀಕ್ರೆಟ್ ರೂಂನಲ್ಲಿ ಇರಿಸಿ ಆಟದ ಬಗ್ಗೆ ಮತ್ತೊಮ್ಮೆ ವಿವರಿಸುವ ಪ್ರಯತ್ನವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಮತ್ತೆ ಈ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್‌ಗೆ ರೀ-ಎಂಟ್ರಿ ಕೊಡುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇನ್ನು ಲಾಯರ್ ಜಗದೀಶ್ ಈ ಶೋ ಮೂಲಕ ಈಗಾಗಲೇ ತಮ್ಮ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಳುಹಿಸುವಂತೆ ಆಗ್ರಹ ಜೋರಾಗಿದೆ.












Click it and Unblock the Notifications