ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಕಿಚ್ಚ ಸುದೀಪ್ ವೈಯಕ್ತಿಕ ನಗದು ಬಹುಮಾನ ಘೋಷಣೆ
Sudeep Gifts Gilli Nata: ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಆಗುವ ಬಿಗ್‌ಬಾಸ್ ಅತ್ಯಂತ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಇದೀಗ ಜನವರಿ 18ರ ಭಾನುವಾರ 12ನೇ ಸೀಸನ್ ಮುಕ್ತಾಯ ಆಗಿದ್ದು, ಗಿಲ್ಲಿ ನಟ ಟ್ರೋಫಿ ವಿನ್ನರ್ ಆಗಿದ್ದಾರೆ. ಇವರಿಗೆ ಕಿಚ್ಚ ಸುದೀಪ್ ಅವರು ಕೂಡ ವೈಯಕ್ತಿಕವಾಗಿ ಹಣ ಕೊಡುವುದಾಗಿ ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.
ಹೌದು.. ಬಿಗ್‌ಬಾಸ್ ಕನ್ನಡ 12 ಫಿನಾಲೆ ನಡೆದಿದ್ದು, ಈ ವೇಳೆ ಜನರು ನುಡಿದ ಭವಿಷ್ಯದಂತೆ ಗಿಲ್ಲಿ ನಟ ಅವರು ವಿನ್ನರ್ ಆಗಿದ್ದಾರೆ. ಇದಕ್ಕೂ ಒಂದು ದಿನ ಮುಂಚೆಯೇ ಕಿಚ್ಚ ಸುದೀಪ್ ಅವರು ವಿನ್ನರ್ ವೋಟ್ ಅನ್ನು ಘೋಷಣೆ ಮಾಡಿದ್ದರು. ಆದರೆ, ಯಾರು ಎನ್ನುವ ಮಾಹಿತಿ ಭಾನುವಾರ ಘೋಷಣೆ ಮಾಡಲಾಗಿದೆ.

ಕಿಚ್ಚ ಸುದೀಪ್ ನಗದು ಬಹುಮಾನ ಘೋಷಣೆ: ಬಿಗ್‌ಬಾಸ್ ಟ್ರೋಫಿ ಗೆದ್ದ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಅವರು ಕೂಡ ವೇದಿಕೆಯಲ್ಲೇ ವೈಯಕ್ತಿಕವಾಗಿ ನಗದು ಬಹುಮಾನವನ್ನು ಘೋಷಣೆ ಮಾಡಿದರು. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯಂತೆ ಗೆದ್ದ ಗಿಲ್ಲಿ ನಟನಿಗೆ ಟ್ರೋಫಿ ಜೊತೆಗೆ ಲಕ್ಷ ಲಕ್ಷ ರೂಪಾಯಿ ಬಹುಮಾನ ಸಹ ಸಿಕ್ಕಿದೆ.
ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಪ್ರಾಯೋಜಕರಿಂದ 50,00,000 ರೂಪಾಯಿ ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಪ್ರಾಯೋಜಕರಿಂದ ಒಂದು ಕಾರನ್ನು ನೀಡಲಾಗಿದೆ. ಅಲ್ಲದೇ ವಿಶೇಷವಾಗಿ ನಟ, ನಿರೂಪಕ ಕಿಚ್ಚ ಸುದೀಪ್ ವೈಯಕ್ತಿಕವಾಗಿ 10,00,000 ರೂಪಾಯಿ ಬಹುಮಾನವನ್ನು ಕೂಡ ವೇದಿಕೆಯಲ್ಲೇ ಘೋಷಣೆ ಮಾಡಿದ್ದಾರೆ.
ಫಿನಾಲೆ ತಲುಪಿದ್ದ ಆರು ಮಂದಿ: ಇನ್ನೂ ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಅದ್ದೂರಿಯಾಗಿ ನಡೆಯಿತು. ಈ ಸೀಸನ್ನಲ್ಲಿ 24 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಂತಿಮವಾಗಿ 6 ಸ್ಪರ್ಧಿಗಳು ಫಿನಾಲೆಗೆ ಬಂದರು. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ ಅವರು ಫಿನಾಲೆ ತಲುಪಿದ್ದರು.
ಜನರ ಭವಿಷ್ಯದಂತೆ ಗಿಲ್ಲಿ ವಿನ್: ಆದರೆ, ಯಾರು ವಿನ್ನರ್ ಎಂಬುದನ್ನು ಕಿಚ್ಚ ಸುದೀಪ್ ಹೇಳುವುದಕ್ಕೂ ಮುನ್ನವೇ ವೀಕ್ಷಕರು ಭವಿಷ್ಯ ನುಡಿದಿದ್ದರು. ಅದರಂತೆಯೇ ಗಿಲ್ಲಿ ನಟ ವಿನ್ನರ್ ಆಗುವ ಮೂಲಕ ಟ್ರೋಫಿ ಗೆದ್ದು ಗಮನ ಸೆಳೆದರು. ಈಗಾಗಲೇ ಅವರು ಕೊಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಫಿನಾಲೆಗೂ ಮುನ್ನ ಗಿಲ್ಲಿ ನಟ ಈಗಾಗಲೇ ಗೆದ್ದಾಯಿತು ಎಂದು ಹಲವಾರು ಜನರು ಕಮೆಂಟ್ ಮಾಡಿದ್ದರು. ಅದರಂತೆಯೇ ಅವರು ಗೆದ್ದಿದ್ದಾರೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಅವರಿಗೆ ಹೊರಗಡೆ ಕೊಟ್ಯಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಗಿಲ್ಲಿ ಅವರಿಗೇ ಗೊತ್ತಿರಲಿಲ್ಲ. ಸುದೀಪ್ ಅವರು ಹೇಳಿದ ಮೇಲೆ ಅವರಿಗೆ ಗೊತ್ತಾಯಿತು.
ಬಿಗ್‌ಬಾಸ್ ಫಿನಾಲೆ ಮುಗಿಯುವ ಸಮಯದಲ್ಲಿ ಬಿಡದಿಯ ಬಿಗ್‌ಬಾಸ್ ಹೌಸ್ ಬಳಿ ದೊಡ್ಡ ಹೈಡ್ರಾಮಾನೇ ನಡೆಯಿತು. ಒಳಗಡೆ ವಿನ್ನರ್ ಘೋಷಣೆಗೆ ಕ್ಷಣಗಣನೆ ಇದ್ದಾಗಲೇ ಹೊರಗಡೆ ಅಭಿಮಾನಿಗಳ ದಂಡು ನೆರೆದಿತ್ತು. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸಪಟ್ಟರು.ಯಾವುದೇ ಅಹಿತಕರ ಘಟನೆ ನರೆಯಬಾರದು ಎಂದು ರಾಮನಗರ ಎಸ್‌ಪಿ ಫುಲ್ ಅಲರ್ಟ್ ಸೂಚನೆ ನೀಡಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕುಣಿದು ಕುಪ್ಪಳಿಸಿದ ಗಿಲ್ಲಿ ಫ್ಯಾನ್ಸ್: ಬಿಗ್‌ಬಾಸ್ ಮನೆ ಬಳಿ ಸಾವಿರಾರು ಜನ ಜಮಾವಣೆಗೊಂಡಿದ್ದರು. ಹೊರಗಡೆ ಎಲ್ಲಿ ನೋಡಿದರೂ ಗಿಲ್ಲಿ ಬ್ಯಾನರ್‌ಗಳೇ ಕಂಡುಬಂದವು. ಬಿಗ್‌ಬಾಸ್ ಮನೆ ಹೊರಗಡೆ ನೆರೆದವರಲ್ಲಿ ಮಂಡ್ಯ ಮತ್ತು ರಾಮನಗರ ಭಾಗದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಕಂಡುಬಂದಿತು.ಅವರು ತಮ್ಮ ನೆಚ್ಚಿನ ಸ್ಪರ್ಧಿ ಗಿಲ್ಲಿ ನಟರಾಜ್ ಅವರೇ ಗೆಲ್ಲುವುದು ಅಂತಾ ಫಿಕ್ಸ್ ಆಗಿದ್ದರು. ಅದರಂತೆಯೇ ಗಿಲ್ಲಿ ನಟ ಬಿಗ್ ಬಾಸ್ ವಿನ್ನರ್ ಆಗುತ್ತಿದ್ದಂತೆ ಅಭಿಮಾನಿಗಳು ಬಿಗ್ ಬಾಸ್ ಮನೆ ಹೊರಗಡೆ ಕುಣಿದು ಕುಪ್ಪಳಿಸಿದರು.












Click it and Unblock the Notifications