Bigg Boss 12: ಬಿಗ್ ಬಾಸ್ ಮನೆಗೆ ಹೋಗಲು ಸ್ಪರ್ಧಿಗಳಿಗೆ ಒಂಟಿ-ಜಂಟಿ ಟಾಸ್ಕ್; ಮೊದಲ ಐದು ಮಂದಿ ಯಾರು?
Bigg Boss Kannada Season 12: ಇಡೀ ಕರ್ನಾಟಕವೇ ಕಾದು ಕುಳಿತಿದ್ದ ಬಿಗ್‌ಬಾಸ್ ಕನ್ನಡ ಸೀಸನ್ ೧೨ ಕೊನೆಗೂ ಅದ್ಧೂರಿಯಾಗಿ ಶುರುವಾಗಿದೆ. ಮೊದಲೇ ಹೇಳಿದಂತೆ ಈ ಬಾರಿ ಎಲ್ಲವೂ ವಿಭಿನ್ನವಾಗಿರಲಿದೆ ಎಂದು ಬಿಗ್‌ಬಾಸ್ ಸುಳಿವು ನೀಡಿತ್ತು. ಅದರಂತೆ ಶೋ ಆರಂಭಕ್ಕೂ ಮುನ್ನವೇ ಮೊದಲ ನಾಲ್ಕು ಸ್ಪರ್ಧಿಗಳ ಹೆಸರು ಘೋಷಣೆ ಮಾಡಲಾಯಿತು. ಹಿಂದಿನ ಸೀಸನ್‌ಗಳಲ್ಲಿ ಸ್ಪರ್ಧಿಗಳನ್ನು ವೇದಿಕೆಗೆ ಕರೆಸಿ, ನೇರವಾಗಿ ಬಿಗ್‌ಬಾಸ್ ಮನೆಗೆ ಕಳಿಸಲಾಗುತ್ತಿತ್ತು. ಈ ಬಾರಿ ಸ್ಪರ್ಧಿಗಳಿಗೆ ಬಿಗ್‌ಬಾಸ್ ವೇದಿಕೆಯಲ್ಲೇ ಒಂಟಿ-ಜಂಟಿ ಟಾಸ್ಕ್ ಕೊಡಲಾಗಿದೆ.
ಬಿಗ್‌ಬಾಸ್ ಸ್ಪರ್ಧಿಗಳು ಈ ಸೀಸನ್‌ನಲ್ಲಿ ಒಂಟಿಯಾಗಿ ಆಟ ಶುರು ಮಾಡಬೇಕಾ? ಅಥವಾ ಜಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಡಬೇಕಾ? ಎಂದು ನಿರ್ಧಾರ ಮಾಡಲು ವೀಕ್ಷಕರಿಗೆ ಅವಕಾಶ ಕೊಡಲಾಗಿದೆ. ಸ್ಥಳದಲ್ಲೇ ವೋಟಿಂಗ್ ಮಾಡಲು ವೀಕ್ಷಕರಿಗೆ ಅವಕಾಶ ನೀಡಲಾಗಿದ್ದು, ಶೇ 75ಕ್ಕಿಂತ ಹೆಚ್ಚು ವೋಟ್ ಬಂದವರು ಜಂಟಿಯಾಗಿ ಆಟ ಆಡಬೇಕು. ಅದಕ್ಕಿಂತ ಕಡಿಮೆ ಬಂದವರು ಒಂಟಿಯಾಗಿ ಆಟ ಆಡಲು ಅವಕಾಶ ನೀಡಲಾಗಿದೆ.

ಮೊದಲ ಟಾಪ್ ಐದು ಸ್ಪರ್ಧಿಗಳು ಯಾರು?
1. ಕಾಕ್ರೋಚ್ ಸುಧಿ: ಕನ್ನಡ ಚಿತ್ರರಂಗದ ಖಡಕ್ ವಿಲನ್ ಎನಿಸಿಕೊಂಡಿರುವ ಕಾಕ್ರೋಚ್ ಸುಧಿ ಈ ಸೀಸನ್‌ನ ಮೊದಲ ಸ್ಪರ್ಧಿ. ಸಲಗ, ಟಗರು, ಭೀಮ ಸಿನಿಮಾ ಖ್ಯಾತಿಯ ಕಾಕ್ರೋಚ್ ಸುಧಿಗೆ ಈಗಾಗಲೇ ಒಂದೆರಡು ಬಾರಿ ಆಫರ್ ಬಂದಿದ್ದು, ಕಾರಣಾಂತರಗಳಿಂದ ಹೋಗಿರಲಿಲ್ಲ. ಈ ಬಾರಿ ಕರೆದರೆ ಪಕ್ಕಾ ಹೋಗ್ತೀನಿ ಎಂದಿದ್ದರು ಸುಧಿ ಕೊನೆಗೂ ಮೊದಲ ಕಂಟೆಸ್ಟಂಟ್ ಆಗಿದ್ದಾರೆ.
2. ನಟಿ ಕಾವ್ಯ ಶೈವ: ಕಿರುತೆರೆಯಿಂದ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿರುವ ನಟಿ ಕಾವ್ಯ ಶೈವ ಅವರು ಬಿಗ್‌ಬಾಸ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೆಂಡಸಂಪಿಗೆ ಸೀರಿಯಲ್‌ನಿಂದ ಗಮನ ಸೆಳೆದಿರುವ ಕಾವ್ಯ ಇತ್ತೀಚೆಗಷ್ಟೇ ತೆರೆಕಂಡ ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿದ್ದರು.
3. ಡಾಗ್ ಸತೀಶ್: ಶ್ವಾನಪ್ರೇಮಿಯಾಗಿ ಗುರುತಿಸಿಕೊಂಡಿರುವ ಡಾಗ್ ಸತೀಶ್ ಕೂಡ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ. 100 ಕೋಟಿ ಬೆಲೆ ಬಾಳೋ ಡಾಗ್ ಓನರ್ ನಾನು ಎಂದು ಸತೀಶ್ ಹೇಳಿಕೊಂಡಿದ್ದು, ಡಿವೋರ್ಸ್ ಬಳಿಕ ಮಗನೊಂದಿಗೆ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ.
4. ಗಿಲ್ಲಿ ನಟ: ಗಿಲ್ಲಿ ನಟ ಎಂದೇ ಫೇಮಸ್ ಆಗಿರುವ ಮಂಡ್ಯ ಮೂಲದ ನಟರಾಜ್ ಈ ಕಾಮಿಡಿ ಕಿಂಗ್ ಎನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಗಿಲ್ಲಿ ಡೈಲಾಗ್ ಹೇಳುತ್ತಾ ನಕ್ಕು ನಗಿಸುತ್ತಾರೆ. ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋಗಳಲ್ಲೂ ಗಿಲ್ಲಿ ಮಿಂಚಿದ್ದಾರೆ.
5. ಆಂಕರ್ ಜಾನ್ವಿ: ಕನ್ನಡ ಸುದ್ದಿವಾಹಿನಿಯ ನ್ಯೂಸ್ ಆಂಕರ್ ಆಗಿ ಗಮನ ಸೆಳೆದಿದ್ದ ಜಾನ್ವಿ ಈ ಸೀಸನ್‌ನ ಟಾಪ್ ಐದು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಗಿಚ್ಚಿಗಿಲಿಗಿಲಿ, ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗಳ ಮೂಲಕ ಜಾನ್ವಿ ಮಿಂಚಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಜಾಹ್ನವಿ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಡಿವೋರ್ಸ್ ಬಳಿಕ ಮಗನೊಂದಿಗೆ ಬದುಕು ನಡೆಸುತ್ತಿರುವ ಜಾನ್ವಿ ಈ ಸಲ ಬಿಗ್‌ಬಾಸ್ ಕಪ್ ಗೆದ್ದೇ ಗೆಲ್ತೀನಿ ಎನ್ನುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications