BBK-12: ಕಾಕ್ರೋಚ್‌ ಸುಧಿಗೆ ಬಿಗ್‌ಬಾಸ್‌ ಮನೆಯಿಂದ ಗೇಟ್‌ಪಾಸ್‌? ಸುದೀಪ್‌ ಸಿಟ್ಟಾಗಿದ್ದೇಕೆ?

ಬಿಗ್‌ಬಾಸ್‌ ಕನ್ನಡ ಸೀಸನ್‌-12 ಕಾರ್ಯಕ್ರಮಕ್ಕೆ ಆರಂಭದಲ್ಲೇ ಎದುರಾಗಿದ್ದ ವಿಘ್ನ ದೂರಾಗಿದೆ. ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್‌ ಮನೆಗೆ ವಾಪಸ್‌ ಆಗಿ ಎಂದಿನಂತೆ ಆಟ ಮುಂದುವರಿಸಿದ್ದಾರೆ. ಇದರ ನಡುವೆ ವಾರದ ಕತೆ ಕಿಚ್ಚನ ಜೊತೆ ಕೂಡ ಬಂದೇಬಿಟ್ಟಿದೆ. ಕಳೆದ ವಾರ ಇಬ್ಬರು ಸ್ಪರ್ಧಿಗಳು ಜಂಟಿಯಾಗಿ ಎಲಿಮಿನೇಟ್‌ ಆಗಿದ್ದರು. ಈ ವಾರವೂ ಎಲಿಮಿನೇಷನ್‌ ಎದುರಾಗಿದೆ. ಅಸುರಾಧಿಪತಿಯಾಗಿದ್ದ ಕಾಕ್ರೋಚ್‌ ಸುಧಿಗೆ ಮನೆಯಿಂದ ಹೊರಗೆ ಕಳಿಸಿಕೊಡುವುದಾಗಿ ಕಿಚ್ಚ ಸುದೀಪ್‌ ಗರಂ ಆಗಿ ಹೇಳಿದ್ದಾರೆ.

ಕಲರ್ಸ್‌ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಬಿಗ್‌ಬಾಸ್‌ ಒಂದು ಶೋ ಮಾತ್ರ ಅಲ್ಲ, ಇದು ಕನ್ನಡಿಗರ ಹೆಮ್ಮೆ ಎಂದು ಸುದೀಪ್‌ ಮತ್ತೆ ರಿಸ್ಟಾರ್ಟ್‌ ಮಾತುಗಳನ್ನಾಡಿದ್ದಾರೆ. ಇಡೀ ಕನ್ನಡಿಗರು ಹಚ್ಚಿ ಸಂಭ್ರಮಿಸುತ್ತಿರೋ ಒಂದು ಜ್ಯೋತಿ. ಆ ಜ್ಯೋತಿಯನ್ನ ಆರದಂತೆ ಕಾಪಾಡಿದಂತಹ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ನಿಮ್ಮ ಪ್ರೀತಿ ನಮ್ಮ ಜೊತೆ ಇರೋತನಕ ಬಿಗ್‌ಬಾಸ್‌ ಮುಂದೆ ಹೋಗ್ತಾನೇ ಇರುತ್ತೆ, ನುಗ್ತಾನೇ ಇರುತ್ತೆ ಎಂದು ಸುದೀಪ್‌ ಹೇಳಿದ್ದಾರೆ.

Bigg Boss Kannada Season 12 Kichcha Sudeep Warns Cockroach Sudhi Elimination Twist Tonight

ಕಾಕ್ರೋಚ್‌ ಜೋಕರ್‌ ಎಂದ ಮನೆಮಂದಿ

ವಾರದ ಕತೆ ಕಿಚ್ಚನ ಜೊತೆಯ ಪ್ರೋಮೋದಲ್ಲಿ ಕಾಕ್ರೋಚ್‌ಗೆ ಕೊಟ್ಟ ಅಸುರ ಟಾಸ್ಕ್‌ ಹೇಗಿತ್ತು? ಅವರ ಪರ್ಫಾರ್ಮೆನ್ಸ್‌ ಹೇಗಿತ್ತು? ಎಂಬ ಬಗ್ಗೆ ಸುದೀಪ್‌ ಕೇಳಿದ್ದಾರೆ. ಅವರ ಕ್ರೌರ್ಯ ಹಾಗೂ ಅಟ್ಟಹಾಸ ಮೇಕಪ್‌ಗೆ ಮಾತ್ರ ಸೀಮಿತವಾಗಿತ್ತು ಎಂದು ಜಾಹ್ನವಿ ಹೇಳಿದ್ದಾರೆ. ಅಸುರ ಅನ್ನೋದಕ್ಕಿಂತ ಜೋಕರ್‌ ತರ ಇತ್ತು ಎಂದು ಉಳಿದವರು ಅಭಿಪ್ರಾಯ ತಿಳಿಸಿದ್ದಾರೆ.

ಇದರಿಂದ ಬೇಸರಗೊಂಡ ಕಾಕ್ರೋಚ್‌ ಸುಧಿ, ನಾನು ಅವರ ಕಾಲಿಗೆ ಬಿದ್ದಿಲ್ಲ ಅಷ್ಟೇ, ಇನ್ನೇಗೆ ಬದುಕುಬೇಕು ಅಣ್ಣಾ? ಇವರತ್ರ ಆಗಲ್ಲಣ್ಣ ಎಂದಿದ್ದಾರೆ. ಶೋನ ಸೀರಿಯಸ್‌ನೆಸ್‌ ಅರ್ಥ ಆಗ್ತಿಲ್ಲ ಅಂದ್ರೆ, ಕಂಟ್ರೋಲ್‌ ಮಾಡೋಕೆ ಆಗ್ತಿಲ್ಲ ಅಂದ್ರೆ ಈಗಲೇ ಕಳಿಸಿಕೊಡ್ತೀನಿ, ಬಾಗಿಲು ಓಪನ್‌ ಮಾಡಿ ಎಂದು ಸುದೀಪ್‌ ಶಾಕ್‌ ಕೊಟ್ಟಿದ್ದಾರೆ. ಇದರಿಂದ ಕಾಕ್ರೋಚ್‌ ಸುಧಿ ಗಲಿಬಿಲಿಗೊಂಡಿದ್ದಾರೆ. ಸುಧಿ ಮನೆಯಲ್ಲೇ ಉಳಿದುಕೊಳ್ತಾರಾ? ಅಥವಾ ಮನೆಯಿಂದ ಹೊರಬರ್ತಾರಾ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಬಿಗ್‌ಬಾಸ್‌ ಮನೆ ರೀಓಪನ್‌

ಬಿಗ್‌ಬಾಸ್‌ ಕಾರ್ಯಕ್ರಮ ನಡೆಸುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ ಇತ್ತೀಚೆಗೆ ಬೀಗ ಹಾಕಲಾಗಿತ್ತು. ನಿಯಮ ಉಲ್ಲಂಘನೆ ಮಾಡಿದಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೋಟಿಸ್‌ ನೀಡಿ, ಬಿಗ್‌ಬಾಸ್‌ ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಿದ್ದರು. ಸ್ಪರ್ಧಿಗಳನ್ನು ರಾತ್ರೋರಾತ್ರಿ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿತ್ತು. ಬಳಿಕ ವಿವಾದ ಇತ್ಯರ್ಥಗೊಂಡ ಹಿನ್ನೆಲೆ ಬಿಗ್‌ಬಾಸ್‌ ಮನೆ ಮತ್ತೆ ತೆರೆದು, ಸ್ಪರ್ಧಿಗಳನ್ನು ವಾಪಸ್‌ ಕರೆತರಲಾಗಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+