Bigg Boss Kannada 12: ಬಿಗ್ ಬಾಸ್ ಮನೆಯಿಂದ ಪೊಲೀಸರ ಜೊತೆ ಹೊರಬಂದ ಸ್ಪರ್ಧಿಗಳು
Bigg Boss Kannada 12: ಬಿಗ್‌ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇನ್ನೂ ಎರಡು ವಾರಗಳು ಕಳೆದಿಲ್ಲ. ಆಗಲೇ ಬಿಗ್‌ಬಾಸ್ ಮನೆಗೆ ಬೀಗ ಜಡಿದು ಸ್ಪರ್ಧಿಗಳನ್ನೆಲ್ಲ ಪೊಲೀಸರು ಹೊರಗಡೆ ಕರೆತಂದಿದ್ದಾರೆ. ಹಾಗಾದ್ರೆ, ಇದಕ್ಕೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಎಲ್ಲಾ ಸ್ಪರ್ಧಿಗಳನ್ನು ದಿಢೀರ್ ಖಾಲಿ ಮಾಡಿಸಿ ರೆಸಾರ್ಟ್ ಕಡೆಗೆ ಕಳುಹಿಸಲಾಗಿದೆ. ಹಾಗಾದ್ರೆ, ಮುಂದಿನ ನಡೆ ಏನು ಎನ್ನುವ ಪ್ರಶ್ನೆ ಬಹುತೇಕ ಮಂದಿಯಲ್ಲಿರುತ್ತದೆ. ಅದಕ್ಕೆಲ್ಲಾ ಉತ್ತರವನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

ಕಾನೂನಿನ ತೊಡಕು ಪರಿಹಾರ ಆಗುವವರೆಗೂ ಶೋ ಸ್ಥಗಿತ ಆಗಲಿದ್ದು, ಇದರಿಂದ ವೀಕ್ಷಕರಿಗೆ ಬಿಗ್ ಶಾಕ್ ಎದುರಾದಂತಾಗಿದೆ. ಇದೇ ರೀತಿಯಲ್ಲಿ ಈ ಹಿಂದೆ 2021ರಲ್ಲಿ ಕೊರೊನಾ ಹಿನ್ನೆಲೆ ಬಿಗ್ ಬಾಸ್ ಶೋ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಥಗಿತಗೊಳಿಸಲಾಗಿದೆ.
ಆರಂಭ ಆಗಿದ್ದ ಕೆಲವೇ ದಿನಗಳಲ್ಲಿ ಈ ಕಾರ್ಯಕ್ರಮಕ್ಕೆ ಕಾನೂನಿನ ತೊಡಕು ಉಂಟಾಗಿದೆ. ಅಕ್ಟೋಬರ್ 7ರ ಮಂಗಳವಾರ ಬಿಗ್ ಬಾಸ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ಗೆ ರಾಮನಗರ ಜಿಲ್ಲಾಡಳಿತ ಅಧಿಕಾರಿಗಳು ಬೀಗ ಹಾಕಿದ್ದಾರೆ. ಈ ಹಿನ್ನೆಲೆ ಶೋ ಅರ್ಧಕ್ಕೆ ಸ್ಥಗಿತಗೊಂಡಿದೆ. ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿದ್ದು, ಮುಂದಿನ ನಡೆ ಬಗ್ಗೆ ಆಯೋಜಕರು ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
2021ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಅನ್ನು ಸ್ಥಗತಗೊಳಿಸಲಾಗಿತ್ತು. ಇನ್ನೇನು ಸೀಸನ್ ಮುಗಿಯುವ ಹಂತದಲ್ಲೇ ಶೋ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. 70 ದಿನಗಳ ಕಾಲ ನಡೆದುಕೊಂಡು ಬಂದಿತ್ತು. ಆದರೆ ಆ ವೇಳೆ ಕೊರೊನಾ ಎಲ್ಲೆಡೆ ಹರಡತೊಡಗಿತು. ಆದ್ದರಿಂದ ಬಿಗ್ ಬಾಸ್ ಶೋ ನಿಲ್ಲಿಲ್ಲಿ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿತ್ತು.
ಕೊರನಾ ನಿಯಂತ್ರಣಕ್ಕೆ ಬಂದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿತ್ತು. ಒಂದೂವರೆ ತಿಂಗಳ ನಂತರ ಮತ್ತೆ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭಿಸಲಾಗಿತ್ತು. ಹಾಗೆಯೇ ಇದೀಗ ಉಂಟಾಗಿರುವ ಕಾನೂನಿನ ತೊಡಕುಗಳೆಲ್ಲವೂ ಸರಿಯಾದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 12 ಪುನಃ ಆರಂಭ ಆಗಲಿದೆ. ಆದರೆ, ಈ ಇದು ಎಷ್ಟು ದಿನಗಳಲ್ಲಿ ಸರಿಹೋಗಲದೆಯೋ ಎಂಬ ಅಂದಾಜಿಲ್ಲ.
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಕ್ರೋಜ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ ಶೆಟ್ಟಿ, ರಾಶಿಕಾ, ಧ್ರುವಂತ್ ಸ್ಪರ್ಧಿಗಳಾಗಿದ್ದರು. ಇದೀಗ ಕಾನೂನು ತೊಡಕು ಹಿನ್ನೆಲೆ ಅವರೆಲ್ಲರನ್ನೂ ಮನೆಯಿಂದ ಹೊರಗೆ ಕಳಿಸಲಾಗಿದ್ದು, ಅವರನ್ನು ರಾಮನಗರ ತಾಲೂಕಿನ ಬಿಡಿದಿಯಲ್ಲಿರುವ ಈಗಲ್ಟನ್ ರೆಸಾರ್ಟ್ಗೆ ಸ್ಥಳಾಂತರಿಸಲಾಗಿದೆ. ಈ ರೆಸಾರ್ಟ್ಬಲ್ಲಿ 12 ರೂಂ ಬುಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಇದೀಗ ಬಿಗ್ ಬಾಸ್ ಮನೆ ಖಾಲಿಯಾಗಿದ್ದು, ಮುಂದಿನ ನಿಲುವಿಗಾಗಿ ಕಾದುನೋಡಬೇಕಿದೆ.












Click it and Unblock the Notifications