Get Updates
Get notified of breaking news, exclusive insights, and must-see stories!

Malu Nipanal: ಬಿಗ್‌ ಬಾಸ್‌ ಕನ್ನಡ ಸೀಸನ್ 12ರ ಸ್ಪರ್ಧಿ ಮಾಳು ನಿಪನಾಳ ಕಿಚ್ಚ ಸುದೀಪ್‌ ಮುಂದೆ ಕ್ಷಮೆಯಾಚನೆ

Malu Nipanal: ಬಿಗ್‌ ಬಾಸ್‌ ಕನ್ನಡ ಸೀಸನ್ 12 ಇನ್ನೇನು ಕೊನೇ ಘಟ್ಟಕ್ಕೆ ಬಂದು ತಲುಪಿದೆ. ಇತ್ತೀಚೆಗಷ್ಟೇ ಮನೆಯಿಂದ ಹೊರಬಂದತಹ ಉತ್ತರ ಕರ್ನಾಟಕ ಗಾಯಕ ಮಾಳು ನಿಪನಾಳ ಅವರು ಎಲ್ಲಾ ಸಂದರ್ಶನಗಳಲ್ಲೂ ಕೊಟ್ಟ ಹೇಳಿಕೆಗಳು ಭಾರೀ ವೈರಲ್‌ ಆಗಿದ್ದವು. ಕಲರ್ಸ್‌ ಕನ್ನಡ ವಾಹಿನಿ ಹಾಗೂ ಸ್ಪರ್ಧಿಗಳ ಮೇಲೂ ಆರೋಪ ಮಾಡಿದ್ದರು. ಆದರೆ, ಇದೀಗ ಕ್ಷಮೆಯಾಚನೆ ಮಾಡಿ ಬೆಂಬಲ ಕೋರಿದ್ದಾರೆ. ಹಾಗಾದ್ರೆ, ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಶನಿವಾರ (ಜನವರಿ 3) ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದ ವೇಳೆ ಮಾಳು ಅವರನ್ನು ವೇದಿಕೆ ಮೇಲೆ ಕರೆಸಲಾಗಿತ್ತು. ಈ ವೇಳೆ ಸುದೀಪ್‌ ಅವರು ಮಾಳು ಅವರನ್ನು ಸ್ವಾಗತ ಮಾಡುತ್ತಾರೆ. ಬಳಿಕ ಸಂದರ್ಶನಗಳಲ್ಲಿ ಅವರು ಮಾತನಾಡಿರುವ ಬಗ್ಗೆ ಪ್ರಶ್ನೆಗಳನ್ನು ಸಹ ಕೇಳುತ್ತಾರೆ. ಆಗ ಮಾಳು ಕಡೆಯಿಂದ ಬಂದ ಉತ್ತರ ಏನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

Bigg Boss Kannada Season 12 Contestant Malu Nipanal Apologises to Kiccha Sudeep on Stage

ಈಗಾಗಲೇ ಬಿಗ್ ಬಾಸ್ ಕನ್ನಡ 11 ಸೀಸನ್‌ನಲ್ಲಿ ಉತ್ತರ ಕರ್ನಾಟಕದ ಗಾಯಕ, ಪ್ರತಿಭಾವಂತ ಹನುಮಂತ ಲಮಾಣಿ ಅವರು ಜನರ ಮನ ಗೆಲ್ಲುವ ಮೂಲಕ ಕರ್ನಾಟಕದ ಮನೆ ಮಾತಾಗಿದ್ದು, ಕೊನೆಗೂ ವಿನ್ನರ್ ಕೂಡ ಆದರು. ಇನ್ನೂ ಈ ಬಾರಿ ಅಂದರೆ ಸೀಸನ್‌ 12ನಲ್ಲೂ ಅಂತಹ ಪ್ರತಿಭೆಯನ್ನ ಉಳ್ಳಂತಹ ಮತ್ತೊಬ್ಬ ಉತ್ತರ ಕರ್ನಾಟಕದ ಗಾಯಕ, ಪ್ರತಿಭಾವಂತ ಮಾಳು ಸಹ ಇದ್ದರು. ಆರಂಭದಲ್ಲಿ ಇವರು ಕೂಡ ಈ ಬಾರಿ ಟ್ರೋಫಿ ಗೆಲ್ಲುವ ಭರವಸೆಯನ್ನು ಹುಟ್ಟುಹಾಕಿದ್ದರು.

ಅವಕಾಶ ಬಳಸಿಕೊಳ್ಳದ ಮಾಳು: ಆರಂಭದಲ್ಲಿ ತಮ್ಮ ಆಡಿನ ಮೂಲಕ ಕರ್ನಾಟಕದ ಜನರ ಮನೆ ಗೆದ್ದಿದ್ದದರು. ಈ ಬಾರಿಯೂ ಉತ್ತರ ಕರ್ನಾಟಕದ ಗಾಯಕ ಮಾಳು ಅವರೇ ಬಿಗ್‌ ಬಾಸ್‌ ವಿನ್ನರ್ ಆಗಲಿದ್ದಾರೆ ಎಂದು ಬಹುತೇಕ ಜನರ ನಂಬಿಕೆಯಾಗಿತ್ತು. ಆದರೆ, ದಿನ ಕಳೆದಂತೆ ಅವಕಾಶ ಇದ್ದರೂ ಸಹ ಅವರು ಅದನ್ನು ಸರಿಯಾಗಿ ಬಳಸಿಕೊಳ್ಳದೆ, ಬಿಗ್ ಬಾಸ್‌ ಮನೆಯಲ್ಲಿ ಸೈಲೆಂಟ್‌ ಆಗಿ ಮರೆಯಾಗಿಬಿಟ್ಟರು. ಇನ್ನೂ ಇತ್ತೀಚೆಗಷ್ಟೇ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಕಳುಹಿಸಲಾಗಿತ್ತು.

ಮಾಳು ಅವರಿಂದ ಆರೋಪಗಳ ಸುರಿಮಳೆ: ಹೊರಗಡೆ ಬಂದಂತಹ ಮಾಳು, ಹಲವಾರು ಸಂದರ್ಶನಗಳಲ್ಲಿ ಭಾಗಿಯಾದರು. ಪ್ರತಿ ಸಂದರ್ಶನದಲ್ಲೂ ಸಹ ಈ ಬಾರಿ ಯಾರು ಬಿಗ್‌ ಬಾಸ್‌ ವಿನ್ನರ್ ಆಗಬೇಕು ಎಂದು ಕೇಳಲಾದ ಪ್ರಶ್ನೆಗೆ ಅವರು, ನಾನೆ ವಿನ್ನರ್. ನಾನು ಬಿಟ್ಟರೆ ಮತ್ಯಾರ ಹೆಸರು ಹೇಳಲು ನನಗೆ ಇಷ್ಟವಿಲ್ಲ ಎಂದು ಹೇಳಿಕೊಂಡು ಬಂದಿದ್ದರು. ಇನ್ನೂ ಇದೀಗ ದೊಡ್ಮನೆಯಲ್ಲಿ ಒನ್‌ ಮ್ಯಾನ್‌ ಆರ್ಮಿಯಂತೆ ಸೌಂಡ್‌ ಮಾಡುತ್ತಿರುವ ಗಿಲ್ಲಿ ಬಗ್ಗೆ ಕೇಳಿದಾಗಲೂ, ಅವರು ತುಂಬಾ ಕಿರಿಕಿರಿ ಮಾಡುತ್ತಿದ್ದರು ಎನ್ನುವ ಆರೋಪ ಮಾಡಿದ್ದರು.

ಮಾಳುಗೆ ಕಿಚ್ಚ ಸುದೀಪ್ ಪ್ರಶ್ನೆ: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬಂದ ಮೇಲೆ ಇಷ್ಟೊಂದು ಅಭಿಮಾನಿಗಳು ಇದ್ದಾರೆ. ನಾನು ಹೇಗೆ ಹೊರಬಂದೆ ಅಂತಾ ಗೊತ್ತಾಗಲಿಲ್ಲ. ನಾನು ಇದನ್ನು ಒಪ್ಪುವುದಿಲ್ಲ ಎಂದು ಹೇಳುವ ಮೂಲಕ ಕಲರ್ಸ್‌ ಕನ್ನಡ ವಾಹಿನಿ ಮೇಲೆ ಆರೋಪ ಮಾಡಿದ್ದರು. ಇದನ್ನೆಲ್ಲ ಇಟ್ಟುಕೊಂಡು ಬಿಗ್‌ ಬಾಸ್‌ ವೇದಿಕೆ ಮೇಲೆ ಸುದೀಪ್‌ ಅವರು ಮಾಳುಗೆ ಪ್ರಶ್ನೆ ಮಾಡಿದರು.

ಮಾಳು ನಿಪನಾಳ ಕ್ಷಮೆಯಾಚನೆ: ಎಲಿಮಿನೇಟ್ ಆದಮೇಲೆ ಮಾಳು ನಿಪನಾಳ ಸಂದರ್ಶನಗಳಲ್ಲಿ ಕಲರ್ಸ್ ಕನ್ನಡ ವಾಹಿನಿ, ಬಿಗ್ ಬಾಸ್ ಮೇಲೆಯೇ ಗಂಭೀರ ಆರೋಪ ಮಾಡಿದ್ದರು. ಆದರೆ, ಇದೀಗ ಬಿಗ್ ಬಾಸ್‌ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ಮಾಳು ನಿಪನಾಳ ಕ್ಷಮೆ ಕೇಳಿದ್ದಾರೆ. ಇದು ಇದೀಗ ಎಲ್ಲಡೆ ವೈರಲ್‌ ಆಗುತ್ತಿದೆ.

ತಮ್ಮ ಮಾರ್ಕ್‌ ಸಿನಿನಾ ಬಿಡುಗಡೆ ಹಿನ್ನೆಲೆ ಕಳೆದ ವೀಕೆಂಡ್‌ ಸಂಚಿಕೆಗಳಿಗೆ ಕಿಚ್ಚ ಸುದೀಪ್ ಬರಲು ಸಾಧ್ಯವಾಗಿರಲಿಲ್ಲ. ಈ ವೇಳೆ ಸೂರಜ್ ಸಿಂಗ್ ಹಾಗೂ ಮಾಳು ನಿಪನಾಳ ಎಲಿಮಿನೇಟ್ ಆದರು. ಆದ್ದರಿಂದ ಶನಿವಾರದಂದು ನಡೆದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆ ಮೊದಲು ಸೂರಜ್ ಸಿಂಗ್, ಬಳಿಕ ಮಾಳು ನಿಪನಾಳ ಬಂದರು.

ಈ ವೇಳೆ ಬಿಗ್ ಬಾಸ್‌ನಿಂದ ಹೊರಗೆ ಹೋದ್ಮೇಲೆ ಹೇಗಿದೆ ಜೀವನ ಎಂದು ಕಿಚ್ಚ ಸುದೀಪ್ ಅವರು ಮಾಳು ಅವರಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಾಳು, "ಚೆನ್ನಾಗಿದೆ ಸರ್, ಇಷ್ಟು ಬೇಗ ಹೊರಗೆ ಹೋಗುತ್ತೀನಿ ಅಂದುಕೊಂಡಿರಲಿಲ್ಲ. ನಾನು ನಿರೀಕ್ಷೆ ಮಾಡಿದ್ದೇ ಬೇರೆ. ನನ್ನ ಅಭಿಮಾನಿಗಳಿಗೆ ಏನೂ ಕೊಡುವುದಕ್ಕೆ ಆಗಲಿಲ್ಲ," ಎಂದು ಹೇಳಿದರು.

ಹೊರಗಡೆ ಸಂದರ್ಶನಗಳಲ್ಲಿ ಕೊಟ್ಟ ಹೇಳಿಕೆ ಬಗ್ಗೆ ಕೇಳಿದರು. ಅವರು ಒಂದು ಪ್ರಶ್ನೆ ಕೇಳಿದರೆ, ಇಡೀ ಎಪಿಸೋಡ್ ಅನ್ನೇ ಬಿಚ್ಚಿಡುತ್ತಿದ್ದೀರ. ಅಷ್ಟು ಮಾತು ನಿಮ್ಮ ಒಳಗಿದೆ. ಆದರೆ, ಬಿಗ್ ಬಾಸ್ ಮನೆಯ ಒಳಗಡೆ ಯಾಕೆ ಸುಮ್ನೆ ಇದ್ರ ಎಂದು ಸುದೀಪ್‌ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಮಾಳು "ಏನೋ ನಿರೀಕ್ಷೆ ಇಟ್ಟುಕೊಂಡು ಹೊರಗೆ ಬಂದೆ. ಆದರೆ, ಇಲ್ಲಿ ಬೇರೇನೋ ಆಗಿತ್ತು. ಏನಾದರೂ ನನ್ನ ಕಡೆಯಿಂದ ತಪ್ಪು ಆಗಿದರೆ, ಮನೆ ಮಗ ಅಂದುಕೊಂಡು ಕ್ಷಮಿಸಿಬಿಡಿ. ಹಾಗೆ ನನ್ನನ್ನು ಬೆಂಬಲಿಸಿ," ಎಂದು ಕೇಳಿಕೊಂಡರು.

ಸಂದರ್ಶನಗಳಲ್ಲಿ ಮಾಳು ಆರೋಪಗಳು: "ನನ್ನನ್ನ ಬಿಟ್ಟು ಇನ್ಯಾರೂ ಬಿಗ್ ಬಾಸ್‌ ಗೆಲ್ಲಲ್ಲಿ ಅರ್ಹರಲ್ಲ. ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ. ಗಿಲ್ಲಿಯಿಂದ ತುಂಬಾ ಕಿರಿಕಿರಿ ಆಗುತ್ತಿತ್ತು," ಅಂತಲೂ ಹೇಳಿದ್ದರು. ಈ ಹೇಳಿಕೆಗಳು ವೈರಲ್‌ ಆಗಿ, ಮಾಳು ವಿರುದ್ಧ ಉತ್ತರ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವ ಭಾಗಗಳಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟನ ಜೊತೆ ಮಾಳು ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಆದರೂ, ಅವರು ತನಗೆ ತುಂಬಾ ಕಿರಿಕಿರಿ ಮಾಡುತ್ತಿದ್ದರು ಎಂದು ಪ್ರತಿ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗಲೂ ಎಲ್ಲಡೆ ವೈರಲ್‌ ಆಗುತ್ತಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+