ಬಿಗ್‌ಬಾಸ್ ಗೆದ್ದ ಹನುಮಂತುಗೆ ಆಘಾತ, 50 ಲಕ್ಷ ರೂಪಾಯಿ ಗೆದ್ದರೂ ಕೈಗೆ... Bigg Boss
ಬಿಗ್‌ಬಾಸ್ ಕನ್ನಡ ಗೆದ್ದು ಬೀಗಿರುವ ಹನುಮಂತು ಕನ್ನಡಿಗರ ಮನಸ್ಸು & ಮತ ಎರಡನ್ನೂ ಗೆದ್ದು ಈಗ ನ್ಯಾಷನಲ್ ಸ್ಟಾರ್ ಆಗಿದ್ದು, ಹನುಮಂತು ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ದೊಡ್ಡ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಕೋಟ್ಯಂತರ ವೋಟ್ ಪಡೆದು ಹೊಸ ಇತಿಹಾಸ ನಿರ್ಮಿಸಿರುವ ಹನುಮಂತು ಯಾವುದೇ ಸಿನಿಮಾ ಸ್ಟಾರ್‌ಗೂ ಕಮ್ಮಿ ಇಲ್ಲ. ಹೀಗಿದ್ದಾಗಲೇ, ಬಿಗ್‌ಬಾಸ್ ಗೆದ್ದ ಹನುಮಂತುಗೆ ಆಘಾತ, 50 ಲಕ್ಷ ರೂಪಾಯಿ ಗೆದ್ದರೂ ಕೈಗೆ...
ಯೆಸ್, ಬಿಗ್‌ಬಾಸ್ ಕನ್ನಡ ಭಾರತದ ಅತಿದೊಡ್ಡ ರಿಯಾಲಿಟಿ ಶೋಗಳ ಪೈಕಿ ಒಂದಾಗಿದೆ. ಹಾಗೇ ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಬಿಗ್‌ಬಾಸ್ ಕನ್ನಡ ನೋಡುತ್ತಾರೆ ಜನ. ಹೀಗೆ, ಬಿಗ್‌ಬಾಸ್ ಕನ್ನಡ ಜಗತ್ತಿನಾದ್ಯಂತ ಕನ್ನಡದ ಕಂಪು ಹರಡುತ್ತಿದೆ. ಇಂತಹ ರಿಯಾಲಿಟಿ ಶೋ ಗೆದ್ದಿರುವ ಹನುಮಂತು ಕೈಗೆ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಬಂದು ಸೇರಿದೆ ಅಂತಾ ಎಲ್ಲರೂ ಅಂದುಕೊಂಡಿದ್ದರು, ಆದರೆ 50 ಲಕ್ಷ ರೂಪಾಯಿ ಗೆದ್ದರೂ ಕೈಗೆ...

50 ಲಕ್ಷ ರೂಪಾಯಿ ಗೆದ್ದರೂ ಕೈಗೆ...
ಹೌದು, ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ನರ್ ಆದ ಸುದ್ದಿ ಕೇಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಕನ್ನಡಿಗರು. ಅಲ್ಲದೆ ಹನುಮಂತ ಈ ರೀತಿ ಗೆದ್ದು ಬೀಗಿದ್ದು ಅವರ ಹಳ್ಳಿಯ ಜನರಿಗೆ ಕೂಡ ತುಂಬಾ ದೊಡ್ಡ ಖುಷಿ ನೀಡಿದೆ. ಬಡತನ & ಕಷ್ಟ ನೋಡಿಕೊಂಡೇ ಬೆಳೆದುಬಂದ ಉತ್ತರ ಕರ್ನಾಟಕದ ಹುಲಿ ಹನುಮಂತ ಇದೀಗ ಬಿಗ್‌ಬಾಸ್ ಗೆದ್ದು 50 ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಅಸಲಿಗೆ ಹನುಮಂತನ ಕೈಗೆ 50 ಲಕ್ಷ ರೂಪಾಯಿ ಸಿಗಲ್ಲ....
ಕೈಗೆ ಸಿಗೋದು 35 ಲಕ್ಷ ರೂಪಾಯಿ!
ಅಂದಹಾಗೆ ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತು 50 ಲಕ್ಷ ರೂಪಾಯಿ ಗೆದ್ದಿದ್ದರೂ ಕೈಗೆ ಸಂಪೂರ್ಣ ಹಣ ಸಿಗುವುದಿಲ್ಲ. ಬಹುಮಾನ ಮೊತ್ತಕ್ಕೆ ಕೇಂದ್ರ ಸರ್ಕಾರದಿಂದ ಬರೋಬ್ಬರಿ ಶೇಕಡಾ 30 ರಷ್ಟು ಟ್ಯಾಕ್ಸ್ ಹಾಕಲಾಗುತ್ತೆ. ಈ ಕಾರಣಕ್ಕೆ ಇದೀಗ ಹನುಮಂತ ಭರ್ಜರಿ 50 ಲಕ್ಷ ರೂಪಾಯಿ ಗೆದ್ದಿದ್ದರೂ ಅದರಲ್ಲಿ ಕೈಗೆ ಸಿಗುವುದು 35 ಲಕ್ಷ ರೂಪಾಯಿ ಮಾತ್ರ. ಯಾಕಂದ್ರೆ ಈ 50 ಲಕ್ಷ ರೂಪಾಯಿಯಲ್ಲಿ 15 ಲಕ್ಷ ರೂಪಾಯಿ ಹಣ ಹನುಮಂತ ಟ್ಯಾಕ್ಸ್ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಕಟ್ಟಬೇಕು. ಹೀಗಾಗಿ ಈ ವಿಚಾರವಾಗಿ ದೊಡ್ಡ ಚರ್ಚೆ ಶುರುವಾಗಿದೆ.
ಒಟ್ನಲ್ಲಿ ಪದೇ ಪದೇ ತೆರಿಗೆ ವಿಚಾರವಾಗಿ ದೊಡ್ಡ ಚರ್ಚೆಗಳು ನಡೆಯುತ್ತಿದ್ದು, ಅದೇ ರೀತಿ ಈಗ ಹನುಮಂತು ವಿಚಾರದಲ್ಲೂ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಕೈಗೆ ಬಂದಿರುವ ಈ ಹಣದಲ್ಲಿ ದೊಡ್ಡ ಮೊತ್ತದ ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕಾದ ಅನಿವಾರ್ಯತೆಗೆ ಸಿಲುಕಿ, ಇದೀಗ ಹನುಮಂತು ಒದ್ದಾಡುತ್ತಿದ್ದಾನೆ ಅಂತಾ ಇದೀಗ ಅಭಿಮಾನಿಗಳು ಹೇಳುತ್ತಾ ಇದ್ದಾರೆ.
50 ಲಕ್ಷ ರೂಪಾಯಿ ಹಣದಲ್ಲಿ...
ಬಿಗ್‌ಬಾಸ್ ಕನ್ನಡ ಸೀಸನ್ 11 ಭಾರಿ ಕುತೂಹಲ ಕೆರಳಿಸಿತ್ತು, ಯಾಕಂದ್ರೆ ಇಡೀ ಇಂಡಿಯಾ ನೋಡುವ ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಟ್ರೋಫಿ ಗೆಲ್ಲುವುದು ಯಾರು?? ಅನ್ನೋ ಪ್ರಶ್ನೆ ಕೋಟಿ ಕೋಟಿ ಕನ್ನಡಿಗರನ್ನು ಕಾಡುತ್ತಿತ್ತು. ಇದೀಗ ಅವರ ಪ್ರಶ್ನೆಗೆ ಉತ್ತರ ಸಿಕ್ಕೇ ಬಿಟ್ಟಿದೆ. ಕನ್ನಡಿಗರು ಇಷ್ಟಪಟ್ಟು, ಕನ್ನಡಿಗರ ಹೃದಯ ಗೆದ್ದಿದ್ದ ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ನರ್ ಆಗಿದ್ದು, 50 ಲಕ್ಷ ರೂಪಾಯಿ ಹಣದಲ್ಲಿ ಏನೆಲ್ಲಾ ಮಾಡ್ತಾರಂತೆ ಗೊತ್ತಾ?
ಹನುಮಂತ ಬಡತನದಲ್ಲಿ ಬೆಂದು ಬಂದಿದ್ದ ಹುಡುಗ, ಹೀಗಿದ್ದಾಗ ತನಗೆ ಬಂದಿರುವ ಈ 50 ಲಕ್ಷ ರೂಪಾಯಿ ಹಣದಲ್ಲಿ ಹನುಮಂತ ಅವರು ಮೊದಲು ಮದುವೆ ಆಗಲಿದ್ದಾರಂತೆ. ಈ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಹನುಮಂತ ಮಾತನಾಡಿದ್ದರು. ಅಲ್ಲದೆ, ಉಳಿದ ಹಣದಲ್ಲಿ ತಮ್ಮ ಸಮುದಾಯಕ್ಕೆ ಸಹಾಯ ಮಾಡುವುದು & ತಮ್ಮ ಊರಿಗೆ ಕೂಡ ಸಹಾಯ ಮಾಡುವ ಕೆಲಸ ಮಾಡುತ್ತಾರಂತೆ ಹನುಮಂತ. ಹೀಗೆ ಬಿಗ್‌ಬಾಸ್ ವಿನ್ನರ್ ಹನುಮಂತ ಅವರ ಈ ಒಳ್ಳೆಯ ಮನಸ್ಸು ಕನ್ನಡಿಗರಿಗೆ ತುಂಬಾನೇ ಇಷ್ಟವಾಗುತ್ತಿದೆ.












Click it and Unblock the Notifications