Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ, ರನ್ನರ್-ಅಪ್ ತ್ರಿವಿಕ್ರಮ್- ವಿಕ್ಕಿಪೀಡಿಯಾ ರಿಸಲ್ಟ್ ವೈರಲ್
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನೂ ಎರಡರಿಂದ ಮೂರು ವಾರಗಳು ಬಾಕಿ ಇದೆ. ಅದಾಗಲೇ ವಿಕ್ಕಪೀಡಿಯಾದಲ್ಲಿ ವಿಜೇತರ ಹೆಸರು ಹಂಚಿಕೊಳ್ಳಲಾಗಿದೆ. ವಿಕ್ಕಿಪೀಡಿಯಾದಲ್ಲಿ ಹಂಚಿಕೊಳ್ಳಲಾದ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಾಗಾದರೆ ವಿಕ್ಕಿಪೀಡಿಯಾದಲ್ಲಿ ಏನಿದೆ?
ವಿಕ್ಕಿಪೀಡಿಯಾದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವ ಮುನ್ನ ವಿನ್ನರ್ ಹೆಸರು ಘೋಷಣೆ ಮಾಡಲಾಗಿದೆ. ಜೊತೆಗೆ ರನ್ನರ್-ಅಪ್ ಹೆಸರು ಕೂಡ ಘೋಷಣೆ ಮಾಡಲಾಗಿದೆ. ಸಾಮಾನ್ಯವಾಗಿ ವಿಕ್ಕಿಪೀಡಿಯಾದಲ್ಲಿ ಸಿಕ್ಕ ಮಾಹಿತಿ ನಿಖರವಾದ ಮಾಹಿತಿ ಎಂದು ಜನ ಭಾವಿಸುತ್ತಾರೆ. ಆದರೆ ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿಯುವ ಮುನ್ನ ಈ ಮಾಹಿತಿಯನ್ನು ವಿಕ್ಕಿಪೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಭಾರೀ ಅನುಮಾನಗಳನ್ನು ಸೃಷ್ಟಿ ಮಾಡಿದೆ.

ಸಾಮಾನ್ಯವಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಕನ್ನಡ ಸೀಸನ್ 11ರ ಎಲ್ಲಾ ಮಾಹಿತಿ ಹಾಗೂ ದೃಶ್ಯಗಳು ತಿಳಿಯುವುದು ರಾತ್ರಿ 9:30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಬಿಟ್ಟರೆ ಪ್ರೋಮೋ ಮೂಲಕ ಮಾತ್ರ ಪ್ರಸಾರವಾಗಬೇಕು. ಆದರೆ ವಿಕ್ಕಿಪೀಡಿಯಾದಲ್ಲಿ ಬಿಗ್‌ಬಾಸ್ ಮುಗಿಯಲು ಇನ್ನೂ ಎರಡರಿಂದ ಮೂರು ವಾರ ಬಾಕಿ ಇರುವಾಗಲೇ ಮಾಹಿತಿ ಹೇಗೆ ಹಂಚಿಕೊಳ್ಳಲಾಗಿದೆ ಎನ್ನುವ ಪ್ರಶ್ನೆ ಉದ್ಬವವಾಗಿದೆ.
ಈ ಮಾಹಿತಿ ಫೇಕ್ ಆಗಿರಬಹುದಾ? ಅಥವಾ ನಿಜಾನಾ? ಯಾವುದು ತಿಳಿಯದೇ ಬಿಗ್‌ಬಾಸ್ ವೀಕ್ಷಕರು ಗೊಂದಲಗೊಂಡಿದ್ದಾರೆ. ವಿಕ್ಕಿಪೀಡಿಯಾದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ ಹನುಮಂತ ಹಾಗೂ ರನ್ನರ್ ಅಪ್ ತ್ರಿವಿಕ್ರಮ್ ಎನ್ನುವ ಮಾಹಿತಿ ನೀಡಲಾಗಿದೆ. ಇದರೊಂದಿಗೆ ಸೀಸನ್ ಆರಂಭವಾದ ದಿನಾಂಕ ಹೋಸ್ಟರ್ ಹೆಸರು, ಎಪಿಸೋಡ್ ಸಂಖ್ಯೆ ಹೀಗೆ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.
ಇದು ಬಿಗ್‌ಬಾಸ್ ತಂಡದಿಂದ ಪಡೆದ ಮಾಹಿತಿನಾ ಅಥವಾ ಇದೊಂದು ಪೇಕ್ ಅಕೌಂಟಾ? ಯಾವುದೂ ಕೂಡ ಗೊತ್ತಾಗುತ್ತಿಲ್ಲ. ಆದರೆ ವಿಕ್ಕಿಪೀಡಿಯಾ ಮಾಹಿತಿ ಬಹುತೇಕ ಬಾರಿ ಸರಿಯಾಗೇ ಇರುತ್ತಾರೆ. ಆದರೆ ಯಾವುದೇ ಮಾಹಿತಿಯನ್ನು ವಿಕ್ಕಿಪೀಡಿಯಾದಲ್ಲಿ ಖಾತರಿಯಿಂದ ಮಾತ್ರ ಹಂಚಿಕೊಳ್ಳಲಾಗುತ್ತದೆ. ಇಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11 ಇನ್ನೂ ಕೂಡ ಮುಗಿದಿಲ್ಲ. ವಿನ್ನರ್ ಹಾಗೂ ರನ್ನರ್ ಯಾರು ಅನ್ನೋದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಹೀಗಿರುವಾಗ ಅದು ಹೇಗೆ ವಿಕ್ಕಿಪೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎನ್ನುವುದು ತಿಳಿಯದಾಗಿದೆ.
ಬಹುತೇಕರು ಇದೊಂದು ಫೇಕ್ ಇನ್ಫಾರ್ಮೇಷನ್ ಎಂದರೆ, ಇನ್ನೂ ಕೆಲವರು ಇದೇ ಫೈನಲ್ ಎಂದು ಭಾವಿಸಿದ್ದಾರೆ. ಇನ್ನೂ ಹನುಮಂತ ಕಳೆದ ದಿನ ಫಿನಾಲೆ ಟಿಕೆಟ್ ಟಾಸ್ಕ್‌ನಲ್ಲಿ ಗೆದ್ದಿದ್ದರು. ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಅವರು ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದ ಹನುಮಂತನಿಗೆ ಟಿಕೆಟ್ ನೀಡಿ ಶುಭ ಹಾರೈಸಿದ್ದರು. ಇದನ್ನೇ ವಿಕ್ಕಿಪೀಡಿಯಾ ತಪ್ಪಾಗಿ ಭಾವಿಸಿ ಬಿಡ್ತಾ ಎನ್ನುವ ಗೊಂದಲು ಕೂಡ ಇದೆ. ಹೀಗಾಗಿ ಯಾವುದು ಸರಿ ಯಾವುದು ತಪ್ಪು ಇದಕ್ಕೆ ಬಿಗ್‌ಬಾಸ್ ತಂಡವೇ ಉತ್ತರ ನೀಡಬೇಕಿದೆ.
-
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್












Click it and Unblock the Notifications