Bigg Boss: ಈ ವಾರದ ಬಿಗ್ ಬಾಸ್ ಮನೆ ಕ್ಯಾಪ್ಟನ್ ಗೋಲ್ಡ್ ಸುರೇಶ್
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಇನ್ನೇನು ಈ ಸೀಜನ್ ಮುಗಿಯುವ ದಿನಗಳು ಸಮೀಪಿಸುತ್ತಿದೆ. ಆಟ ಈಗ ರೋಚಕವಾಗಿದ್ದು, ಬಿಗ್ ಬಾಸ್ ಕನ್ನಡದ ಈ ಬಾರಿಯ ವಿಜೇತರು ಯಾರಾಗಬಹುದು, ಟಾಪ್ ಐದು ಸ್ಥಾನದಲ್ಲಿ ಯಾರಿರಬಹುದು ಎನ್ನುವುದನ್ನು ಊಹಿಸಲು ಕಷ್ಟವಾಗುತ್ತಿದೆ. ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಹೆಚ್ಚು ಎನ್ನುವಂತೆ ಆಡುತ್ತಿದ್ದಾರೆ.
ಕಳೆದ ವಾರ ನಾಮಿನೇಷನ್ ಇಲ್ಲದ ಕಾರಣ ಮುಗಿಯುವ ದಿನಗಳ ಹತ್ತಿರ ಬಂದರೂ ಬಿಗ್ ಬಾಸ್ ಮನೆ ಸ್ಪರ್ಧಿಗಳಿಂದ ತುಂಬಿ ತುಳುತ್ತಿದೆ. ಹೀಗಾಗಿ ಈ ಬಾರಿ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. ಈ ಬಾರಿ ನಾಮೀನೇಟ್ ತ್ರಿವಿಕ್ರಮ್, ಭವ್ಯಾ, ಧನರಾಜ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮೀನೇಟ್ ಆಗಿದ್ದಾರೆ. ಇವರ ಪೈಕಿ ಯಾರು ಮನೆಯಿಂದ ಹೊರಬರುತ್ತಾರೆ ಎನ್ನುವ ಕುತೂಹಲ ಒಂದೆಡೆಯಾದರೆ ಈ ಬಾರಿ ಕ್ಯಾಪ್ಟನ್ ಯಾರು ಎನ್ನುವುದು ಕೂಡ ಕುತೂಹಲವಾಗಿದೆ.

ಇದೀಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಕನ್ನಡ ಸೀಜನ್ 11ರ ಈ ವಾರದ ಕ್ಯಾಪ್ಟನ್ ಆಗಿ ಗೋಲ್ಡ್ ಸುರೇಶ್ ಆಯ್ಕೆಯಾಗಿದ್ದಾರೆ. ಈ ವಾರ ಹನುಮಂತ ನಾಯಕತ್ವದ ಜವಾರಿ ಮಂದಿ ತಂಡದ ಪ್ರತಿಯೊಬ್ಬರು ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದು, ಈ ಪೈಕಿ ಗೋಲ್ಡ್ ಸುರೇಶ್ ಮುಂದಿನ ವಾರದ ಕ್ಯಾಪ್ಟನ್ ಆಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಇಂದಿನ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಈ ವಾರದ ಕಳಪೆಯಾಗಿದ್ದಾರೆ. ಈ ವಾರದ ಕಳಪೆಯನ್ನು ಘೋಷಿಸಿರುವುದು ಹಾಗೂ ಅವರನ್ನು ಜೈಲಿನ ಬಳಿಕ ಕರೆದುಕೊಂಡು ಬಂದಿರುವುದು ಗೋಲ್ಡ್ ಸುರೇಶ್ ಆಗಿದ್ದು, ಹೀಗಾಗಿ ಇವರೇ ಈ ವಾರದ ಕ್ಯಾಪ್ಟನ್ ಎಂದು ಅಂದಾಜಿಸಲಾಗಿದೆ.

ಮತ್ತೆ ಕಳಪೆ ಪಟ್ಟ ಹೊತ್ತ ಚೈತ್ರಾ ಕುಂದಾಪುರ
ಈ ಬಾರಿ ಗೌತಮಿ ತಂಡದಲ್ಲಿ ಆಡಿದ್ದ ಚೈತ್ರಾ ಕುಂದಾಪುರ ಈ ವಾರದ ಕಳಪೆಯಾಗಿ ಮತ್ತೆ ಜೈಲು ಸೇರಿದ್ದಾರೆ. ಈ ವಾರ ಚೈತ್ರಾ ಕುಂದಾಪುರಗೆ ಆಟವಾಡಲು ಯಾವುದೇ ಅವಕಾಶವನ್ನು ತಂಡ ನೀಡಿರಲಿಲ್ಲ. ಬರೀ ನನಗೆ ಉಸ್ತುವಾರಿ ಕೊಡುತ್ತಾರೆ. ಆಟವಾಡಲು ಅವಕಾಶ ನೀಡುವುದಿಲ್ಲ. ಒಂದು ಸಾರಿ ಎಲಿಮಿನೇಟ್ ಹಂತಕ್ಕೆ ಹೋಗಿ ಬಂದಿದ್ದೇನೆ. ಈ ವಾರ ನಾನು ಕ್ಯಾಪ್ಟನ್ ಆಗಲೇ ಬೇಕಿತ್ತು ಎಂದು ಚೈತ್ರಾ ಕಣ್ಣೀರು ಹಾಕಿದ್ದಾರೆ.












Click it and Unblock the Notifications