Bigg Boss: ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಈ ವಾರಾನಾ? ಮುಂದಿನ ವಾರಾನಾ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಮುಗಿಯುವ ಹಂತ ತಲುಪಿದೆ. ದೊಡ್ಮನೆಯಲ್ಲಿ ಪ್ರಸ್ತುತ ಕೇವಲ ಆರು ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದು ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಇನ್ನೂ ಬಿಗ್‌ಬಾಸ್ ಮುಗಿದ ಬಳಿಕ ಪ್ರಸಾರವಾಗುವ ಧಾರವಾಹಿಗಳ ಪ್ರಮೋಷನ್‌ಗಾಗಿ ಹೊಸ ತಾರೆಯರು ಮನೆಗೆ ಬರಲು ಆರಂಭಿಸಿದ್ದಾರೆ. ಇದರ ನಡುವೆ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಈ ವಾರಾಂತ್ಯಾನಾ ಅಥವಾ ಮುಂದಿನ ವಾರಾನಾ ಅನ್ನೋ ಅನುಮಾನ ಶುರುವಾಗಿದೆ. ಹಾಗಾದರೆ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯುವುದು ಯಾವಾಗಾ? ಗ್ರ್ಯಾಂಡ್ ಫಿನಾಲೆ ದಿನಾಂಕ ಮುಂದೂಡುವ ಸಾಧ್ಯತೆ ಇದಿಯಾ? ಈ ಪ್ರಶ್ನೆ ಮೂಡಿದ್ದು ಯಾಕೆ?
ಬಿಗ್ ಬಾಸ್ ನಂತರ ಮಜಾ ಟಾಕೀಸ್ ಸೇರಿದಂತೆ ಕೆಲ ಧಾರವಾಹಿಗಳು ಶುರುವಾಗುತ್ತಿವೆ. ಹೀಗಾಗಿ ಆಯಾ ತಂಡದವರು ಧಾರವಾಹಿ ಪ್ರಮೋಷನ್‌ಗಾಗಿ ಬಿಗ್‌ಬಾಸ್ ಮನೆಗೆ ಆಗಮಿಸುತ್ತಿದ್ದಾರೆ. ಪ್ರತಿ ದಿನ ಬಿಗ್‌ಬಾಸ್ ಮನೆಗೆ ಹೊಸ ಧಾರವಾಹಿಯ ತಂಡಗಳು ಬರುತ್ತಿದ್ದು, ಈ ವಾರ ಬಿಗ್‌ಬಾಸ್ ಪ್ರೋಮೋಗಳಲ್ಲಿ ಹೊಸದಾಗಿ ಶುರುವಾಗುವ ಧಾರವಾಹಿಗಳ ಪ್ರಮುಖ ಪಾತ್ರದಾರಿಗಳೇ ಕಾಣಿಸಿಕೊಳ್ಳುತ್ತಿದ್ದಾರೆ.

ನಿತ್ಯ ಒಂದಲ್ಲಾ ಒಂದು ಸೀರಿಯಲ್ ಪ್ರಮೋಷನ್ ಪ್ರೋಮೋವನ್ನು ಹಾಕಲಾಗುತ್ತಿದೆ. ಇಂದು ಬೆಳಗ್ಗೆ ಪ್ರೋಮೋದಲ್ಲಿ ಮಜಾ ಟಾಕೀಸ್ ತಂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಇತ್ತು. ಮಧ್ಯಾಹ್ನ ಬಿಟ್ಟಿರುವ ಪ್ರೋಮೋದಲ್ಲಿ ಡಿವರ್ಸ್ ಲಾಯರ್ ಮದುವೆ ಕಥೆ ಎಂಬ ವಧು ಧಾರವಾಹಿಯ ಪ್ರಮುಖ ತಾರೆಯರು ಬಿಗ್‌ಬಾಸ್ ಮನೆಗೆ ಬಂದಿರುವುದು ಕಂಡು ಬಂದಿದೆ. ಹೀಗಾಗಿ ಫಿನಾಲೆ ಇದೇ ವಾರ ನಡೆಯುತ್ತಾ ಅಥವಾ ಮುಂದಿನ ವಾರ ನಡೆಯಲಿದಿಯಾ ಎನ್ನುವ ಅನುಮಾನ ಸೃಷ್ಟಿಯಾಗಿದೆ.
ಗ್ರ್ಯಾಂಡ್ ಫಿನಾಲೆ ಈ ವಾರನಾ? ಮುಂದಿನ ವಾರಾನಾ?
ಯಾಕೆಂದರೆ ಬಿಗ್‌ಬಾಸ್ ಮುಗಿದ ಬಳಿಕ ಕೆಲವು ಧಾರವಾಹಿಗಳು ಪ್ರಸಾರವಾಗಲಿದೆ. ಕೆಲ ಧಾರವಾಹಿಗಳ ಪ್ರೋಮೋ ಹಾಗೂ ಪ್ರಮೋಷನ್ ಇನ್ನೂ ಬಾಕಿ ಇದೆ. ಈ ಕಾರಣದಿಂದಾಗಿ ಬಿಗ್‌ಬಾಸ್ ಫಿನಾಲೆ ಈ ವಾರ ನಡೆಯುವ ಲಕ್ಷಣಗಳು ಕಾಣಿಸುತ್ತಲೇ ಇಲ್ಲ. ಕೇವಲ ಧಾರವಾಹಿಗಳು ಮಾತ್ರ ಅಲ್ಲ, ಬಿಗ್‌ಬಾಸ್ ಮನೆಯಲ್ಲಿ ಕೊನೆಯಲ್ಲಿ ಉಳಿದಿರುವ ಸ್ಪರ್ಧಿಗಳ ಕೈಯಿಂದ ಮಾಡಿಸಬೇಕಾದ ಕೆಲ ಚಟುವಟಿಕೆಗಳು ತುಂಬಾ ಇವೆ. ಹೀಗಾಗಿ ಈ ಪ್ರಶ್ನೆ ಹುಟ್ಟಿಕೊಂಡಿದೆ.
ಆದರೆ ಇದೇ ವಾರ ಫಿನಾಲೆ ಎಂದು ದಿನಾಂಕ ಈಗಾಗಲೇ ಫಿಕ್ಸ್ ಆಗಿದೆ. ಆದರೆ ಫಿನಾಲೆಯ ವೈಬ್ಸ್ ಬಿಗ್‌ಬಾಸ್ ಮನೆಯಲ್ಲಿ ಕಂಡು ಬರುತ್ತಿಲ್ಲ. ಧಾರವಾಹಿಗಳ ತಂಡ ಬಿಗ್‌ಬಾಸ್ ಮನೆಗೆ ಬಂದು ಹೋದ ಬಳಿಕ, ಸ್ಪರ್ಧಿಗಳು ಮತ್ತೊಬ್ಬ ಸ್ಪರ್ಧಿಗೆ ಪತ್ರ ಬರೆಯುವುದು ಅದನ್ನು ಓದುವುದು, ಜೊತೆಗೆ ಬಿಗ್‌ಬಾಸ್ ಮನೆಗೆ ಊಟ ಕೂಡ ಬರುತ್ತದೆ. ಜೊತೆಗೆ ವಾಲ್ ಆಫ್ ಫ್ರೇಮ್ ಚಟುವಟಿಕೆ ಕೂಡ ನಡೆಯಬೇಕಿದೆ. ಆದರೆ ಇದ್ಯಾವುದು ಕೂಡ ಈ ವಾರ ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಇನ್ನೂ ಒಂದು ದಿನ ಬಿಗ್‌ಬಾಸ್ ಸ್ಪರ್ಧಿಗಳು ಕೇಳಿಕೊಂಡ ಆಸೆ ಈಡೇರಿಸುವುದರಲ್ಲೇ ಹೋಗಿ ಬಿಡುತ್ತದೆ. ಜೊತೆಗೆ ನಿತ್ಯದ ಎಪಿಸೋಡ್ ಪ್ರಸಾರ ಮಾಡಬೇಕು. ಗ್ರ್ಯಾಂಡ್ ಫಿನಾಲೆ ವೇದಿಕೆ ಸಜ್ಜಾಗುತ್ತಿರುವುದು ನಿಜ. ಆದರೆ ಇದೇ ವಾರಕ್ಕೆ ಎಲ್ಲವೂ ಮುಗಿಯುತ್ತಾ ಅಥವಾ ಮುಂದಿನ ವಾರ ಇದು ಮುಂದುವರೆಯುತ್ತಾ ಅನ್ನೋ ಕುತೂಹಲ ಇದೆ.
ಯಾಕೆಂದರೆ ಈ ವಾರಾಂತ್ಯದಲ್ಲಿ ಗ್ರ್ಯಾಂಡ್ ಫಿನಾಲೆ ಆರಂಭವಾದರೂ ನೃತ್ಯ ಹಾಡು ಎಲ್ಲಾ ಕಾರ್ಯಗಳೂ ಇರಲಿದೆ. ಹಾಡು, ನೃತ್ಯ, ಕಾಮಿಡಿ ಎಲ್ಲವೂ ಇರಲಿದೆ ಎಂದು ಹೇಳಲಾಗುತ್ತಿದೆ. ಇದೆಲ್ಲದಕ್ಕೂ ಈ ವಾರ ಸಾಕಾಗುವುದಿಲ್ಲ. ಮತ್ತೊಂದು ವಿಚಾರ ಅಂದರೆ ಇಂದು ಬುಧವಾರ, ವಾರಾಂತ್ಯಕ್ಕೆ ಇನ್ನೂ ಎರಡೇ ದಿನ ಬಾಕಿ ಇದೆ.
ಈ ಎರಡು ದಿನದಲ್ಲಿ ಇದೆಲ್ಲವನ್ನೂ ಮಾಡಿಸುವುದು ತೋರಿಸುವುದು ತುಂಬಾನೇ ಕಷ್ಟ ಇದೆ. ಹೀಗಾಗಿ ಈ ಬಾರಿ ಫಿನಾಲೆ ಮುಂದಿನ ವಾರಕ್ಕೂ ಮುಂದೂಡುವ ಸಾಧ್ಯತೆ ಇದೆ. ಆದರೂ ಬಿಗ್‌ಬಾಸ್ ಸೂಚನೆಯಂತೆ ಇದೇ ವಾರ ಫಿನಾಲೆ ನಡೆಯುತ್ತಾ ಅಥವಾ ಮುಂದಿನ ವಾರಕ್ಕೆ ಮುಂದೂಡಲಾಗುತ್ತಾ ಕಾದು ನೋಡಬೇಕಿದೆ.












Click it and Unblock the Notifications