Bigg Boss: ಬಿಗ್‌ಬಾಸ್ ಫಿನಾಲೆಗಾಗಿ ಜಿದ್ದಾಜಿದ್ದಿ- ಭವ್ಯ ಕತ್ತು ಹಿಸಿಕ್ಕಿದ್ರಾ ಮಂಜು? ಗೌತಮಿಗೆ ಪಂಚ್ ಕೊಟ್ರಾ ಮೋಕ್ಷಿ?
ಬಿಗ್‌ಬಾಸ್ ಮನೆಯಲ್ಲಿ ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ನಡುವೆ ಭಾರೀ ಜಿದ್ದಾಜಿದ್ದಿನ ಆಟ ಶುರುವಾಗಿದೆ. ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಈ ಆಟದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇಂದಿನ ಬಿಗ್ ಬಾಸ್ ಮನೆಯ ವೀಡಿಯೋವೊಂದನ್ನು ಕಲರ್ಸ ಕನ್ನಡ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಆಟ ಆಡುವ ವೇಳೆ ಭವ್ಯ ಕತ್ತನ್ನು ಮಂಜು ಹಿಸಿಕ್ಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜೊತೆಗೆ ಮೋಕ್ಷಿತಾ ಅವರು ಗೌತಮಿ ಅವರಿಗೆ ಪಂಚ್ ಕೊಟ್ರು ಎಂದು ಹೇಳಲಾಗುತ್ತಿದೆ. ಹಾಗಾದರೆ ವೈರಲ್ ಆದ ವೀಡಿಯೋದಲ್ಲಿ ಏನಿದೆ? ಭವ್ಯಾ ಹಾಗೂ ಮಂಜು ನಡುವೆ ಜಗಳ ನಡೆದಿದ್ದು ಯಾಕೆ? ಮೋಕ್ಷಿತಾ ನಿಜವಾಗಿಯೂ ಗೌತಮಿ ಅವರಿಗೆ ಪಂಚ್ ಕೊಟ್ರಾ? ಇದೆಲ್ಲವನ್ನೂ ತಿಳಿಯೋಣ.

ಬಿಗ್‌ಬಾಸ್ ಕನ್ನಡ ಸೀಸನ್ 11ರ ಮೊದಲ ಫಿನಾಲೆ ಟಿಕೆಟ್ ಪಡೆಯಲು ಮನೆಯ ಎಲ್ಲಾ ಸ್ಪರ್ಧಿಗಳು ಹೆಚ್ಚು ಶ್ರಮ ಪಡುತ್ತಿದ್ದಾರೆ. ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಮೂರನೇ ಟಾಸ್ಕ್ ಅನ್ನು ನೀಡಲಾಗಿದೆ. ಫಿನಾಲೆ ಟಿಕೆಟ್‌ಗಾಗಿ ಬಿಗ್‌ಬಾಸ್ ಸ್ಪರ್ಧಿಗಳು ಆಡುವ ಮೂರನೇ ಆಟ ಇದಾಗಿದೆ. ಹಾಗಾದರೆ ಈ ಟಾಸ್ಕ್ ಯಾವ ರೀತಿ ಇದೆ? ಈ ಟಾಸ್ಕ್ ನಿಯಮ ಏನು? ಈ ಟಾಸ್ಕ್ ಅನ್ನು ಜಯ ಗಳಿಸಿದ ತಂಡ ಯಾವುದು? ಎಲ್ಲವನ್ನು ಕಂಪ್ಲೀಟ್ ಆಗಿ ತಿಳಿಯೋಣ.
ಟಾಸ್ಕ್ ಉಸ್ತುವಾರಿ ವಹಿಸಿದ ರಜತ್
ಮನೆಯ ಎಲ್ಲಾ ಒಂಬತ್ತು ಸ್ಪರ್ಧಿಗಳಲ್ಲಿ ರಜತ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಹೀಗಾಗಿ ಇವರು ನೇರವಾಗಿ ಬಿಗ್‌ಬಾಸ್ ಫಿನಾಲೆ ಟಾಸ್ಕ್‌ಗೆ ಆಯ್ಕೆ ಆಗಿದ್ದಾರೆ. ಇನ್ನೂ ಮನೆಯಲ್ಲಿ ಉಳಿದುಕೊಂಡ ಎಂಟು ಸ್ಪರ್ಧಿಗಳ ಪೈಕಿ ಕೇವಲ ಮೂರು ಜನ ಮಾತ್ರ ಫಿನಾಲೆ ಟಿಕೆಟ್ ಪಡೆಯಲು ಆಯ್ಕೆ ಆಗುತ್ತಾರೆ. ಹೀಗಾಗಿ ಫಿನಾಲೆ ಟಿಕೆಟ್ ಪಡೆಯಲು ಸ್ಪರ್ಧಿಗಳ ನಡುವಿನ ಯುದ್ಧ ಚುರುಕುಕೊಂಡಿದೆ. ಇನ್ನೂ ಮನೆಯಲ್ಲಿ ಉಳಿದುಕೊಂಡ ಎಂಟು ಜನ ಆಟಗಾರರ ಪೈಕಿ (ಕ್ಯಾಪ್ಟನ್ ರಜತ್ ಹೊರತುಪಡಿಸಿ) ಐದು ಜನ ನಾಮಿನೇಟ್ ಆಗಿದ್ದಾರೆ.
ಫಿನಾಲೆ ಟಿಕೆಟ್ ಆಟದ ನಿಯಮವೇನು?
ಇನ್ನೂ ಫಿನಾಲೆ ಟಾಸ್ಕ್ ಆಡಲು ಇಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಹನುಮಂತ, ಭವ್ಯಾ, ಮೋಕ್ಷಿತಾ ಅವರದ್ದು ಒಂದು ತಂಡ ಆದರೆ, ಧನ್‌ರಾಜ್ ಅವರ ತಂಡದಲ್ಲಿ ಗೌತಮಿ, ಉಗ್ರಂ ಮಂಜು ಅವರು ಆಟ ಆಡಿದ್ದಾರೆ. ಒಂದು ತಂಡದ ಮೂವರು ಸದಸ್ಯರ ಕಾಲಿಗೆ ಮತ್ತೊಬ್ಬರ ಕಾಲನ್ನು ಜೋಡಿಸಿ ಹಗ್ಗವನ್ನು ಕಟ್ಟಲಾಗಿರುತ್ತದೆ.
ಆಟದಲ್ಲಿ ಎರಡೂ ತಂಡದವರಿಗೆ ಒಂದೊಂದು ಬಾಸ್ಕೇಟ್ ಅನ್ನು ನೀಡಲಾಗಿರುತ್ತದೆ. ಹನುಮಂತು ಅವರ ತಂಡಕ್ಕೆ ನೀಲಿ ಬಣ್ಣದ ಬಾಸ್ಕೇಟ್ ಹಾಗೂ ಧನ್‌ರಾಜ್ ಅವರ ತಂಡಕ್ಕೆ ಕೆಂಪು ಬಣ್ಣದ ಬಾಸ್ಕೇಟ್ ನೀಡಲಾಗಿದೆ.
ಇನ್ನೂ ಆಟದ ಅಂಗಳದಲ್ಲಿ ಮೂರು ಚಂಡುಗಳನ್ನು ಇಟ್ಟಿರುತ್ತಾರೆ. ಆ ಚಂಡುಗಳ ಮೇಲೆ ಸಂಖ್ಯೆಗಳನ್ನು ಬರೆದಿರಲಾಗುತ್ತದೆ. ಬಿಗ್‌ಬಾಸ್ ಬಝರ್ ಮಾಡಿ ಚಂಡುಗಳ ಸಂಖ್ಯೆಯನ್ನು ಹೇಳಿದ ಬಳಿಕ ಕಾಲಿಗೆ ಹಗ್ಗ ಕಟ್ಟಿದ ತಂಡ ಆ ಚಂಡು ಇರುವ ಸ್ಥಳಕ್ಕೆ ತೆರಳಿ ಆ ಮೂರು ಚಂಡುಗಳನ್ನು ಮೂವರು ಸದಸ್ಯರು ತಲಾ ಒಂದರಂತೆ ಕೈಯಲ್ಲಿ ಹಿಡಿದುಕೊಂಡು ತಮಗೆ ನಿಗಧಿಪಡಿಸಿದ ಬಾಸ್ಕೇಟ್ ಅಲ್ಲಿ ಹಾಕಬೇಕು. ಚಂಡು ಪಡೆದ ಮೊದಲ ತಂಡ ಆ ಚಂಡುಗಳನ್ನು ಕಾಪಾಡಿಕೊಳ್ಳಬೇಕು.
ಈ ಟಾಸ್ಕ್‌ನಲ್ಲಿ ಅತೀ ಹೆಚ್ಚು ಚಂಡುಗಳನ್ನು ಯಾರು ತಮ್ಮ ಬಾಸ್ಕೇಟ್‌ಗಳಲ್ಲಿ ಹಾಕುತ್ತಾರೋ ಅವರು ಈ ಟಾಸ್ಕ್ ವಿನ್ ಆಗುತ್ತಾರೆ. ಇದು ಫಿನಾಲೆ ಟಿಕೆಟ್ ಪಡೆದುಕೊಳ್ಳುವ ಆಟ ಆಗಿರುವುದರಿಂದ ಎಲ್ಲರೂ ಕೂಡ ತಮ್ಮ ಆಟವನ್ನು ಬಿಟ್ಟುಕೊಡದೆ ತುಂಬಾ ಅಗ್ರೆಸ್ಸಿವ್ ಆಗಿ ಆಟ ಆಡುತ್ತಾರೆ.
ಫಿನಾಲೆ ಟಿಕೆಟ್‌ಗಾಗಿ ಪಂಚ್ ಕೊಟ್ರಾ ಮೋಕ್ಷಿತಾ- ಮಂಜು?
ಅದ್ರಲ್ಲೂ ಮಂಜು ಅವರು ತುಂಬಾ ಅಗ್ರೆಸ್ಸಿವ್ ಆಗಿ ಆಟ ಆಡಿರುವುದು ಕಂಡು ಬಂದಿದೆ. ಕಳೆದ ಕೆಲ ವಾರಗಳಿಂದ ಮಂಜು, ತ್ರಿವಿಕ್ರಮ್ ಹಾಗೂ ರಜತ್ ನಡುವೆ ಸಿಕ್ಕಾಪಟ್ಟೆ ಜಗಳಗಳು ನಡೆದಿವೆ. ಸದ್ಯ ಈ ಟಾಸ್ಕ್‌ನಲ್ಲೂ ಸಹ ಮಂಜು ಹಾಗೂ ಭವ್ಯ ನಡುವೆ ಜಗಳವಾಗಿದೆ. ಇದಕ್ಕಾಗಿ ಕ್ಯಾಪ್ಟನ್ ರಜತ್ ಹಾಗೂ ಮಂಜು ನಡುವೆ ದೊಡ್ಡ ಜಗಳ ಶುರುವಾಗಿರುವುದನ್ನೂ ವೀಡಿಯೋದಲ್ಲಿ ನೋಡಬಹುದು.
ಈ ಆಟದಲ್ಲಿ ಮಂಜು ಅವರು ಭವ್ಯಾ ಗೌಡ ಅವರ ಕತ್ತು ಹಿಸುಕಿದ್ರು ಎಂದು ಆರೋಪಿಸಲಾಗುತ್ತಿದೆ. ಹಾಗೇ ಮೋಕ್ಷಿತಾ ಅವರು ಗೌತಮಿ ಅವರಿಗೆ ಪಂಚ್ ಕೊಟ್ರು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರಿಂದಾಗಿ ಕ್ಯಾಪ್ಟನ್ ರಜತ್ ಮಂಜು ಅವರಿಗೆ ಹೀಗೆ ಮಾಡುವುದು ಸರಿ ಅಲ್ಲ ಅನ್ನೋ ಬುಧ್ದಿ ಮಾತು ಹೇಳಿದ್ದು ಕಂಡು ಬಂದಿದೆ. ಆದರೆ ಯಾರಿಗೆ ಯಾರು ಪಂಚ್ ಕೊಟ್ರು ಅನ್ನೋದು ಮಾತ್ರ ವೀಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಇದನ್ನು ತಿಳಿಯಲು ಇಂದಿನ ಸಂಚಿಕೆ ನೋಡಲೇಬೇಕು.












Click it and Unblock the Notifications