Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಪಾಸಿಟಿವ್‌ ಗೌತಮಿ ಕಣ್ಣೀರ ಹೊಳೆ

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಒಂಬತ್ತು ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಹತ್ತನೇ ವಾರದತ್ತ ಸಾಗುತ್ತಿದೆ. ಕಳೆದ ವಾರ ರಾಜರ ಸಾಮ್ರಾಜ್ಯವಾಗಿದ್ದ ಬಿಗ್ ಬಾಸ್ ಮನೆ ಈ ವಾರ ಎರಡು ಟಿವಿ ಚಾನೆಲ್‌ಗಳಾಗಿವೆ. ಮಸ್ತ್‌ ಮಜಾ ಹಾಗೂ ಧೂಳ್‌ ಧಮಾಕ ಎರಡು ಚಾನೆಲ್‌ಗಳನ್ನು ಮಾಡಲಾಗಿದ್ದು, ಧನರಾಜ್‌ ಹಾಗೂ ಗೋಲ್ಡ್‌ ಸುರೇಶ್‌ ಟಿವಿ ಚಾನೆಲ್‌ಗಳ ಮುಖ್ಯಸ್ಥರಾಗಿ ಮುನ್ನೆಡೆಸುತ್ತಿದ್ದಾರೆ.

ನಿನ್ನೆ ಕೆಲವು ಟಾಸ್ಕ್‌ಗಳನ್ನು ಪೂರೈಸಿರುವ ಎರಡೂ ತಂಡಗಳು, ಇಂದು ಕೂಡ ಬಿಗ್‌ ಬಾಸ್‌ ಕೊಡುವ ಟಾಸ್ಕ್‌ಗಳನ್ನು ಎದುರಿಸಲು ಸಜ್ಜಾಗಿದೆ. ನಿನ್ನೆಯ ಟಾಸ್ಕ್‌ಗಳಲ್ಲಿ ಉಸ್ತುವಾರಿಗಳು ನೀಡಿರುವ ಅಂಕದ ಮೇಲೆ ಗೋಲ್ಡ್‌ ಸುರೇಶ್‌ ತಂಡ ಮುನ್ನಡೆ ಸಾಧಿಸಿದೆ. ಇನ್ನು ಈ ವಾರ ವಿಶೇಷ ಎಂಬಂತೆ ತಂಡದ ಗೆಲುವು ಪ್ರೇಕ್ಷಕರು ನೀಡುವ ಅಂಕಗಳ ಮೇಲೆ ಕೂಡ ನಿಂತಿದೆ. ಹೀಗಾಗಿ ಸ್ಪರ್ಧಿಗಳು ಕೂಡ ಹೆಚ್ಚಿನ ಮನೋರಂಜನೆ ನೀಡುತ್ತಿದ್ದಾರೆ.

Bigg Boss Kannada season 11 Actress Gouthami Jadav Cried A Lot In Bigg Boss House

ಇಂದು, ಹೂ ಅಂತೀಯಾ..? ಉಹೂಂ ಅಂತಿಯಾ..? ಎನ್ನುವ ಟಾಸ್ಕ್‌ ಬಿಗ್‌ ಬಾಸ್‌ ನೀಡಲಾಗಿದ್ದು, ಬಿಗ್‌ ಬಾಸ್‌ ಕೊಟ್ಟಿರುವ ವಸ್ತುಗಳನ್ನು ಬಳಸಿಕೊಂಡು ಎದುರಾಳಿ ತಂಡಕ್ಕೆ ಎದುರಿಸಲಾಗದ ಟಾಸ್ಕ್‌ಗಳನ್ನು ಮತ್ತೊಂದು ತಂಡ ನೀಡಬೇಕು. ಇಂದಿನ ಪ್ರೋಮೋದಲ್ಲಿ ಶಿಶಿರ್, ಐಶ್ವರ್ಯರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಹೇಳಿದ್ದಾರೆ. ಐಶ್ವರ್ಯ ಕೂಡ ಹಾಗಲಕಾಯಿ ತಿನ್ನುವ ಪ್ರಯತ್ನ ಮಾಡಿದ್ದಾರೆ.

ಅದೇ ರೀತಿ ಗೌತಮಿಗೆ ಎರಡು ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್​ ನೀಡಲಾಗಿದೆ. ಗೌತಮಿ ಕೂಡ ತಿಂದಿದ್ದು, ಖಾರ ಸಹಿಸಿಕೊಳ್ಳಲಾಗದೇ ಕಣ್ಣೀರು ಹಾಕಿದ್ದಾರೆ. ಇತರ ಸ್ಪರ್ಧಿಗಳು ಅವರನ್ನು ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ. ಇನ್ನು ಉಗ್ರಂ ಮಂಜು, ಇಲ್ಲಿ ಟ್ರಿಮ್ಮರ್ ಇದೆ ಹೀಗಾಗಿ ಎದುರಾಳಿ ತಂಡದ ರಜತ್ ತಲೆ ಬೋಳಿಸಿಕೊಳ್ಳಬೇಕು ಎಂದು ಸವಾಲು ಹಾಕಿದ್ದಾರೆ. ಉಗ್ರಂ ಮಂಜು ಸವಾಲು ಒಪ್ಪಿಕೊಂಡ ರಜತ್ ತಲೆ ಬೋಳಿಸಿಕೊಳ್ಳಲು ಕುಳಿತಿದ್ದಾರೆ.

Bigg Boss Kannada season 11 Actress Gouthami Jadav Cried A Lot In Bigg Boss House

ಇನ್ನು ಈ ಮಧ್ಯೆ ತ್ರಿವಿಕ್ರಮ್‌ ಹಾಗೂ ಚೈತ್ರಾ ಕುಂದಾಪುರ ನಡುವೆ ಜೋರಾಗಿ ಗಲಾಟೆ ನಡೆದಿದೆ. ತ್ರಿವಿಕ್ರಮ್‌, ಶಿಶಿರ್‌ಗೆ ಸವಾಲು ಹಾಕಿದ್ದು, ರಜತ್‌ ಅವರನ್ನು ಬೆನ್ನಮೇಲೆ ನಿಲ್ಲಿಸಿಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ತಂಡದ ಉಸ್ತುವಾರಿ ವಹಿಸಿದ್ದ ಚೈತ್ರಾ ಕುಂದಾಪುರ, ಶಿಶಿರ್‌ಗೆ ಇರುವ ಆರೋಗ್ಯದ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಇದಕ್ಕೆ ಒಪ್ಪದೇ ವಾದಕ್ಕಿಳಿದಾಗ ಚೈತ್ರಾ ಕುಂದಾಪುರ ಮಾತಿ ಭರದಲ್ಲಿ ತ್ರಿವಿಕ್ರಮ್‌ಗೆ ಮುಚ್ಚಿಕೊಂಡು ಕೂತ್ಕೋಬೇಕು ಎಂದಿದ್ದಾರೆ. ಇದರಿಂದ ತ್ರಿವಿಕ್ರಮ್‌ ತಂಡ ಚೈತ್ರಾ ಕುಂದಾಪುರ ಜೊತೆ ಜಗಳವಾಡಿದ್ದು, ಈ ವೇಳೆ ತ್ರಿವಿಕ್ರಮ್‌ ಚೈತ್ರಾ ಕುಂದಾಪುರಗೆ ಸಂಸ್ಕಾರ ಇಲ್ಲದವಳು ಎಂದು ಬೈದಿದ್ದಾರೆ. ಸದ್ಯ ಈ ಪ್ರೋಮೋ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+