Karthik Mahesh: ಕಿಚ್ಚ ಸುದೀಪ್ ಜೊತೆ ಬಿಗ್‌ಬಾಸ್ ಕಾರ್ತಿಕ್: ಏನಿದು ಹೊಸ ವಿಷಯ?
ನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿ ಬರುವ ಈ ಕಾರ್ಯಕ್ರಮ ಕಿರುತೆರೆ ಪ್ರೇಕ್ಷಕರಿಗೂ ಅಚ್ಚುಮೆಚ್ಚು. ಬಿಗ್‌ಬಾಸ್ ರಿಯಾಲಿಟಿ ಶೋಗೆ ಬಂದ ಸ್ಫರ್ಧಿಗಳಿಗೆ ಈ ಅವಕಾಶ ಜೀವನದಲ್ಲಿ ಮಹತ್ವದ ತಿರುವು ನೀಡುತ್ತದೆ ಎನ್ನುವ ಮಾತಿದೆ.
ಅನೇಕರ ಜೀವನ ಈ ಶೋ ಬಳಿಕ ಬದಲಾಗಿದೆ ಹಾಗೂ ಜನರಿಗೆ ಸ್ಫರ್ಧಿಗಳ ಮೇಲಿನ ಭಾವನೆ ಬದಲಾದ ಉದಾಹರಣೆಗಳು ಸಹ ಇದೆ. ಅದರಂತೆ ಬಿಗ್‌ಬಾಸ್ ಕನ್ನಡ ಸೀಸನ್ 10 ಅನೇಕರಿಗೆ ಅವಕಾಶ ನೀಡಿ ಬದುಕು ಬದಲಿಸಿದೆ. ಅವರಲ್ಲಿ ವಿನ್ನರ್ ನಟ ಕಾರ್ತಿಕ್ ಮಹೇಶ್ ಕೂಡ ಒಬ್ಬರು.

ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದು ನಾಲ್ಕೈದು ತಿಂಗಳು ಕಳೆಯುತ್ತಾ ಬಂದರೂ ಬಿಗ್‌ಬಾಸ್ ಸ್ಫರ್ಧಿಗಳ ಹವಾ ಮಾತ್ರ ಕಡಿಮೆಯಾಗಿಲ್ಲ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಇನ್ನು ಬಿಗ್‌ಬಾಸ್ ಕನ್ನಡ ಸೀಸನ್ 10 ವಿನ್ನರ್ ನಟ ಕಾರ್ತಿಕ್ ಮಹೇಶ್ ಮತ್ತೆ ತಮ್ಮ ಹಳೆ ಲುಕ್‌ಗೆ ಮರಳಿದ್ದು, ಸಖತ್ ಸುದ್ದಿಯಲ್ಲಿದ್ದಾರೆ.
ಸದ್ಯ ಕಾರ್ತಿಕ್ ಮಹೇಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೋಸ್ಟ್ವೊಂದನ್ನು ಶೇರ್ ಮಾಡಿದ್ದು, ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್ ನೋಡಿ ಪ್ರತಿಯೊಬ್ಬರು ಕಾರ್ತಿಕ್ ಮಹೇಶ್ ತುಂಬಾ ಲಕ್ಕಿ ಎನ್ನುತ್ತಿದ್ದಾರೆ. ಅಂತಹ ಫೋಟೋವೊಂದನ್ನು ಕಾರ್ತಿಕ್ ಶೇರ್ ಮಾಡಿದ್ದಾರೆ.
ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಂದಿಗಿನ ಆತ್ಮೀಯವಾದ ಫೋಟೋವನ್ನು ಕಾರ್ತಿಕ್ ಮಹೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅದರೊಂದಿಗೆ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 'ಒಂದೊಮ್ಮೆ ಕಿಚ್ಚ ಸರ್ ಮನೆ.. ಕಿಚ್ಚ ಸರ್ ಮನೆ.. ಅಂತಾ ಅವರ ಜೆ.ಪಿ ನಗರದ ಮನೆ ಮುಂದೆ ಬೀಟ್ಸ್ ಹಾಕ್ತಿದ್ದೆ..ಇಂದು ಮನೆಯೊಳಗೆ ಅವರೊಂದಿಗೆ ಸಮಯ ಕಳೆಯುವ ಅವಕಾಶ ಕಲ್ಪಿಸಿದ್ದಾರೆ. ಧನ್ಯವಾದಗಳು ಕಿಚ್ಚ ಸುದೀಪ್ ಸರ್ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಿಚ್ಚ ಸುದೀಪ್ ಜೊತೆಗಿನ ಫೋಟೋವನ್ನು ನೋಡಿದ ಕಾರ್ತಿಕ್ ಮಹೇಶ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಅದೃಷ್ಟ ಅಂದ್ರೆ ಇದೆ ಅಲ್ವಾ. ಎಷ್ಟು ಖುಷಿ ಆಗುತ್ತದೆ ಈ ತರ ಫೋಟೋ ನೋಡಲು, ಅಭಿನಯ ಚಕ್ರವರ್ತಿ ಜೊತೆ ನಮ್ಮ ಕಾರ್ತಿ ಎಂದು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications