Varthur Santhosh: ನನ್ನ ಶತ್ರು ಅಂದ್ರೆ..: ತನಿಷಾ ಮುಂದೆ ಡೈಲಾಗ್ ಹೊಡೆದ ವರ್ತೂರು ಸಂತೋಷ್
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾಗಿ ತಿಂಗಳು ಕಳೆದರೂ ಬಿಗ್ ಬಾಸ್ ಕನ್ನಡ ಸೀಜನ್ 10ರ ಹವಾ ಮಾತ್ರ ಕಮ್ಮಿ ಆಗಿಲ್ಲ. ಬಿಗ್ ಬಾಸ್ ಸೀಜನ್ 10ರ ಸ್ಪರ್ಧಿಗಳು ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಪೈಕಿ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಕೂಡ ಒಬ್ಬರು. ಇತ್ತೀಚಿಗೆ ಕಿರುತೆರೆ ಸೇರಿದಂತೆ ರೈತರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ವರ್ತೂರು ಸಂತೋಷ್, ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ಬಹಿರಂಗವಾಗಿ ಖಡಕ್ ಡೈಲಾಗ್ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಇತ್ತೀಚಿಗೆ ಒಂದು ಮಾತು ಹೇಳಿದರು. ಯಾರಾದರೂ ಬೆಳೆಯ ಬೇಕಾದರೆ ಒಬ್ಬ ಒಳ್ಳೆ ಶತ್ರು ಇರಬೇಕು ಅಂತಾ ಹೇಳಿದರು. ನಮ್ಮ ಎದುರಿಗೆ ಒಳ್ಳೆ ಶತ್ರು ಇದ್ದರೆ ಮಾತ್ರ ನಾವು ಬೆಳೆಯುವುದು. ಆದರೆ ಈಗ ನನಗಂತೂ ಶತ್ರಗಳು ಇಲ್ಲ. ನನಗೆ ಶತ್ರೂನೇ ಇಲ್ಲ. ನನ್ನ ಪ್ರಕಾರ ನನ್ನ ಶತ್ರು ನನಗಿಂತ ಹೆಚ್ಚಾಗಿರಬೇಕು.

ಇಲ್ಲಾ ನನ್ನ ಸರಿ ಸಮಾನವಾಗಿರಬೇಕು. ಆದರೆ ಈಗ ಎರಡೂ ಇಲ್ಲ. ಅಂತವರನ್ನು ನಾನು ಶತ್ರು ಅಂತಾ ಹೇಗೆ ತೆಗೆದುಕೊಳ್ಳಲಿ. ಆದರೆ ಕ್ರಿಮಿ, ಕೀಟ, ಹುಳಗಳು ಇದ್ದಾವೆ ಎಂದು ತಮ್ಮ ಹಿಂದೆ ಮಾತನಾಡುವವರಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ತನಿಷಾ ಕುಪ್ಪಂಡ ಜೊತೆ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ ವೇಳೆ ಮಾತನಾಡಿದ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್, ನಮ್ಮದು ಹಳ್ಳಿ ಭಾಷೆ, ನಮ್ಮ ಮಾತುಗಳು ಖಡಕ್ ಆಗೇ ಇರುತ್ತದೆ. ನಾನು ಹೇಳಿವುದರಲ್ಲಿ ತಪ್ಪೇನು ಇಲ್ಲ. ಯಾರೇ ಆಗಲಿ ನೇರವಾಗಿ ಮಾತನಾಡಬೇಕು. ಏನೇ ಕೋಪತಾಪಗಳಿದ್ದರೂ ಬಂದು ನೇರವಾಗಿ ಮಾತನಾಡಬೇಕು ಎಂದರು.

ನಮ್ಮ ಮನೆ ಅಡ್ರೆಸ್ ಎಲ್ಲರಿಗೂ ಗೊತ್ತು. ಗೂಗಲ್‌ನಲ್ಲಿ ನಮ್ಮ ಮನೆ ವಿಳಾಸ ಇದೆ. ನನ್ನ ನಂಬರ್ ಇದೆ. ಭಗವಂತ ನನಗೆ ಎಲ್ಲಾ ಕೊಟ್ಟಿದ್ದಾನೆ. ಒಳ್ಳೆಯ ಸ್ನೇಹ ಗಳಿಸಿಕೊಂಡಿದ್ದೇನೆ. ಜನರೇ ನನಗೆ ಎಲ್ಲಾ. ಜನರು ಅವತ್ತು ಬೆಳೆಸಿದಕ್ಕೆ ನಾನು ಇವತ್ತು ವರ್ತೂರು ಸಂತೋಷ್ ಆಗಿ ಗುರುತಿಸಿಕೊಂಡಿದ್ದೇನೆ.
ಅದನ್ನು ನಾನು ಯಾವತ್ತೂ ಮರೆಯಲ್ಲ..ಜನರಿಗೆ ಚಿರಋಣಿಯಾಗಿರುತ್ತೇನೆ. ನನ್ನ ಬಗ್ಗೆ ಯಾವುದೋ ಆರೋಪ ಇದ್ದರೆ ಬಂದು ಮಾತನಾಡಿ, ಆದರೆ ಯಾವುದೋ ಅವಿವೇಕಿಗಳ ಮಾತು ಕೇಳಿಕೊಂಡು ನನ್ನ ಬಗ್ಗೆ ಮಾತನಾಡಬೇಕು ಎಂದು ವರ್ತೂರು ಸಂತೋಷ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications