ನಿಜವಾಯ್ತು ಪ್ರೇಕ್ಷಕರ ಊಹೆ: ರಜತ್‌ಗೆ ಮನೆ ಬಾಗಿಲು ತೋರಿಸಿದ ಕಿಚ್ಚ ಸುದೀಪ್
ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ರಜತ್ ಬಿಗ್ ಬಾಸ್ ಕನ್ನಡ ಸೀಜನ್ 11 ಮನೆ ಪ್ರವೇಶಿಸಿದ್ದಾರೆ .ಬಂದ ದಿನದಿಂದಲೂ ಅಗ್ರೇಸಿವ್ ಆಗಿ ಆಟ ಆಡುತ್ತಿರುವ ರಜತ್ ಆಟಗಳ ಮಧ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಮನೆಯ ಇತರ ಸ್ಪರ್ಧಿಗಳ ಜೊತೆ ಕಿರಿಕ್ ತೆಗೆಯುತ್ತಿರುವ ರಜತ್‌ಗೆ ಇಂದಿನ ವೀಕೆಂಡ್ ಸಂಚಿಕೆಯಲ್ಲಿ ನಟ ಕಿಚ್ಚ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರತಿಯೊಬ್ಬರ ಜೊತೆಗೂ ಧ್ವನಿ ಏರಿಸೇ ಮಾತನಾಡುವ ರಜತ್ ಟಾಸ್ಕ್ ಆಡುವಾಗ ತಮ್ಮ ನಾಲಿಗೆ ಮೇಲಿನ ನಿಯಂತ್ರಣ ಕಳೆದುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಗೋಲ್ಡ್ ಸುರೇಶ್, ಉಗ್ರಂ ಮಂಜು ಹಾಗೂ ತಮಗೆ ಕಳಪೆ ಕೊಟ್ಟವರ ವಿರುದ್ಧ ತನ್ನ ರೋಷಾವೇಶ ಪ್ರದರ್ಶಿಸಿದ್ದ ರಜತ್ ಇದೀಗ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆ ಕ್ಷಮೆ ಕೇಳುತ್ತಿದ್ದಾರೆ.

ಇಂದಿನ ವೀಕೆಂಡ್ ಸಂಚಿಕೆಯ ಎರಡು ಪ್ರೋಮೋಗಳು ಈಗಾಗಲೇ ವೈರಲ್ ಆಗುತ್ತಿದೆ. ಮೊದಲ ಪ್ರೋಮೋದಲ್ಲಿ ಕಿಚ್ಚ ಸುದೀಪ್, ಒಬ್ಬ ಮನುಷ್ಯನ ಬಾಯಿಂದ ಬರುವ ಪದಗಳು ಬರೀ ಮಾತಲ್ಲ, ಅವನ ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟವನ್ನೂ ಏರಿಸುತ್ತದೆ. ಅದೇ ಒಂದು ಮಾತು ಸೋಲಿನ ದಾರಿಯನ್ನೂ ಸಹ ಹಿಡಿಸುತ್ತದೆ ಎಂದು ವಾರದ ಬೆಳವಣಿಗೆ ಬಗ್ಗೆ ಹೇಳಿದ್ದಾರೆ.
ಎರಡನೇ ಪ್ರೋಮೋದಲ್ಲಿ ಸುದೀಪ್ ನೇರವಾಗಿ ರಜತ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಜತ್, ಕನ್ನಡದಲ್ಲಿ ಮಾತನಾಡಲು ತುಂಬಾ ಇದೆ ಸರ್. ನಿಮ್ಮ ಎಲ್ಲರಿಗೂ ಕೆಲವು ತೂಕಗಳಿವೆ ಸರ್ ಎಂದು ಹೇಳಿದ್ದಾರೆ. ಈ ವೇಳೆ ರಜತ್ ನನಗೆ ಅವರು ಯಾವಾಗ ಎದೆಗೆ ಎದೆ ಕೊಟ್ಟು ನಿಂತರೋ ಅದನ್ನು ತಡೆದುಕೊಳ್ಳಲು ಆಗಲಿಲ್ಲ. ಮಾತಿನ ಭರದಲ್ಲಿ ಅಂತಹ ಪದಗಳು ಬಂತು ಎಂದು ಉತ್ತರ ಕೊಟ್ಟಿದ್ದಾರೆ.

ರಜತ್ ಮಾತಿಗೆ ಉತ್ತರಿಸಿರುವ ಕಿಚ್ಚ ಸುದೀಪ್ ಕೊನೆಯದಾಗಿ ಬುಡ ಎಲ್ಲಿಂದ ಶುರುವಾಯ್ತು ಅಂದರೆ ರಜತ್ ಅವರೇ, ನನಗೆ ಕೋಪ ಬಂದಾಗಲೆಲ್ಲಾ ಇಂತಹ ಪದಗಳೇ ನನ್ನ ಬಾಯಲ್ಲಿ ಬರುವುದು ಎನ್ನುತ್ತೀರಿ. ಈಗ ಅದೇ ಅದನ್ನೇ ನನ್ನ ಮುಂದೆ ರಿಪೀಟ್ ಮಾಡಿ, ಏನು ಹೇಳಿದಿರಿ ಹೇಳಿ. ಯಾಕೆ ಅದನ್ನು ಈಗ ಹೇಳಲು ಆಗುತ್ತಿಲ್ಲ ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಈ ವೇಳೆ ರಜತ್ ಇನ್ನೊಂದು ಸಲ ಈ ತಪ್ಪನ್ನು ರಿಪೀಟ್ ಮಾಡಲ್ಲ ಎಂದಿದ್ದಾರೆ. ಇದಕ್ಕೆ ಜೋರಾಗಿ ನಕ್ಕಿರುವ ಕಿಚ್ಚ ಸುದೀಪ್, ಮುಂದಿನ ಸಹ ಹೊರಗಡೆ ಹೋಗಲು ಬಾಗಿಲು ಇದೆ ಅಂತಾ ರಜತ್‌ಗೆ ಬಿಗ್ ಬಾಸ್ ಮನೆಯ ಮುಖ್ಯದ್ವಾರವನ್ನು ತೋರಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಇಂತಹ ಪದಗಳನ್ನು ಬಳಸಿದರೆ ಮನೆಯಿಂದ ನೇರವಾಗಿ ಹೊರ ಕಳುಹಿಸುವ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications