ಹನುಮಂತನ ಅಬ್ಬರ & ಕಿಚ್ಚ ಸುದೀಪ್ ಆರ್ಭಟ, ದಾಖಲೆಗಳನ್ನು ಪುಡಿಪುಡಿ ಮಾಡಿದ ಬಿಗ್‌ಬಾಸ್ ಕನ್ನಡ... Bigg Boss Kannada
ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಬಿಟ್ಟು ಈಗಾಗಲೇ ಕಿಚ್ಚ ಸುದೀಪ್ ಹೊರ ಬಂದಿದ್ದಾರೆ. ಇದು ತಮ್ಮ ಕೊನೇ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ನಿರೂಪಣೆ ಎಂಬ ವಿಚಾರವನ್ನ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ ನಂತರ ಸಂಚಲನ ಸೃಷ್ಟಿಯಾಗಿತ್ತು. ಸೋಷಿಯಲ್ ಮೀಡಿಯಾ ಸೇರಿ ಎಲ್ಲೆಲ್ಲೂ ಇದೇ ವಿಚಾರ ಚರ್ಚೆಗೆ ಬಂದಿತ್ತು. ಹೀಗಿದ್ದಾಗಲೇ, ಹನುಮಂತನ ಅಬ್ಬರ & ಕಿಚ್ಚ ಸುದೀಪ್ ಆರ್ಭಟ... ದಾಖಲೆಗಳನ್ನು ಪುಡಿಪುಡಿ ಮಾಡಿದ ಬಿಗ್‌ಬಾಸ್ ಕನ್ನಡ..!
ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ದೊಡ್ಡ ಯಶಸ್ಸು ಗಳಿಸಿದ್ದು, ಬಿಗ್‌ಬಾಸ್ ಕನ್ನಡ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಗಮನ ಸೆಳೆಯುತ್ತಿದೆ. ಯಾಕಂದ್ರೆ ಬಿಗ್‌ಬಾಸ್ ಕನ್ನಡಕ್ಕೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ ಅನ್ನೋದು ಸುದೀಪ್ ಅವರ ಅಭಿಮಾನಿಗಳು ಹೇಳುವ ಮಾತು. ಇಂಥ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಮತ್ತೊಂದು ಸಂಚಲನ ಸೃಷ್ಟಿ ಮಾಡಿದೆ.

ಇತಿಹಾಸ ನಿರ್ಮಿಸಿದ ಬಿಗ್‌ಬಾಸ್ ಕನ್ನಡ
ಹೌದು, ಟಿಆರ್‌ಪಿ ವಿಚಾರದಲ್ಲಿ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಇದೀಗ ದಾಖಲೆ ಬರೆದಿದೆ. 'ಬಿಗ್ ಬಾಸ್ ಕನ್ನಡ ಸೀಸನ್ 11' ಫೈನಲ್ ಎಪಿಸೋಡ್ ಜನವರಿ 25 ಹಾಗೂ 26ಕ್ಕೆ ಪ್ರಸಾರ ಆಗಿತ್ತು. ಆ ದಿನದಂದು ಕನ್ನಡಿಗರು ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಜನರೆಲ್ಲಾ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ನೋಡಿದ್ರು. ಈ ಮೂಲಕ ಟಿಆರ್‌ಪಿ ವಿಚಾರದಲ್ಲಿ ಬಿಗ್‌ಬಾಸ್ ಕನ್ನಡ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಕಿಚ್ಚ ಸುದೀಪ್ ಅವರ ನಿರೂಪಣೆಯ ಕೊನೆಯ ಎಪಿಸೋಡ್ ಹಲ್‌ಚಲ್ ಎಬ್ಬಿಸಿದೆ!
ಕಿಚ್ಚ ಸುದೀಪ್ ಆರ್ಭಟ ಜೋರು!
ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಫೈನಲ್ ಎಪಿಸೋಡ್, ಎರಡು ದಿನ ಪ್ರಸಾರವಾಗಿತ್ತು. ಆ ಪ್ರಕಾರ ಜನವರಿ 25ರ ಶನಿವಾರದ ಎಪಿಸೋಡ್ 9.9 ಟಿವಿಆರ್ ಪಡೆದು ಹೊಸ ದಾಖಲೆಗೆ ಪಾತ್ರವಾಗಿದ್ದರೆ, ಭಾನುವಾರದ ಎಪಿಸೋಡ್ 13.7 ಟಿವಿಆರ್ ಪಡೆಯುವ ಮೂಲಕ ಇತಿಹಾಸ ನಿರ್ಮಾಣ ಮಾಡಿದೆ. ಈ ಮೂಲಕ ಬಿಗ್‌ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ತನ್ನ ಖದರ್ ಏನು ಅನ್ನೋದನ್ನ ಜಗತ್ತಿಗೇ ತೋರಿಸಿದೆ ಅಂತಿದ್ದಾರೆ ಫ್ಯಾನ್ಸ್.
ಒಟ್ನಲ್ಲಿ ಬಿಗ್‌ಬಾಸ್ ಕನ್ನಡ ಅದ್ಧೂರಿಯಾಗಿ ಮುಗಿದಿದ್ದು, ಹಾಗೇ ಟಿಆರ್‌ಪಿ ವಿಚಾರದಲ್ಲಿ ಕೂಡ ಆರ್ಭಟ ತೋರಿಸಿದೆ. ಕನ್ನಡಿಗರು ಪ್ರೀತಿಯಿಂದ ಹನುಮಂತನಿಗೆ ವೋಟ್ ಹಾಕಿದ್ದು, ಈ ಬಾರಿಯ ಬಿಗ್‌ಬಾಸ್ ಕನ್ನಡ ಟ್ರೋಫಿಯನ್ನು ಗೆದ್ದು ಬೀಗಿದ್ದಾರೆ ಉತ್ತರ ಕರ್ನಾಟಕದ ಹನುಮಂತು. ರಿಯಾಲಿಟಿ ಶೋಗಳಲ್ಲಿ ತಾನೇ ಕಿಂಗ್ ಅನ್ನೋದನ್ನು ಮತ್ತೊಮ್ಮೆ ತೋರಿಸಿ ಕೊಟ್ಟಿದೆ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ.












Click it and Unblock the Notifications