Bigg Boss Kannada: ಬಿಗ್‌ ಬಾಸ್‌ ಪಕ್ಕಾ Scripted ಹೌದಾ? ಅಲ್ವಾ?: ಲಾಯರ್‌ ಜಗದೀಶ್‌ ಹೇಳಿದ್ದೇನು?

ಬಿಗ್‌ ಬಾಸ್‌ ಮನೆಗೆ ಹೋದಾಗ ಏನೇನೆಲ್ಲಾ ಆಯ್ತು ಅಂತಾ ನೀವು ನೋಡಿದ್ದೀರಾ. ಈ ಬಿಗ್‌ ಬಾಸ್‌ ಮನೆಯಲ್ಲಿ ನನ್ನ ಆಟವನ್ನು ಪ್ರಾಮಾಣಿಕವಾಗಿ ಆಡಿದ್ದೇನೆ. ನನಗನಿಸಿದ್ದು ಏನು ಎಂದರೆ ಒಂದು ಸಣ್ಣ ಪದ ಬಳಕೆ ಮಾಡಿದೆ ಅಂತಾ ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ಅದೇ ಕೆಟ್ಟ ಪದಗಳನ್ನು ಬಳಕೆ ಮಾಡಿದ ಚೈತ್ರಾ ಕುಂದಾಪುರ, ತುಕಾಲಿ ಸಂತೋಷ್‌ ಪತ್ನಿ, ಮಂಜಣ್ಣ ಇವರೆಲ್ಲಾ ಇದ್ದಾರೆ. ಇವರೆಲ್ಲಾ ಒಳಗೆ ಇದ್ದಾರೆ ನಾನು ಮಾತ್ರ ಹೊರಗೆ ಯಾಕೆ ಎನ್ನುವುದು ನನ್ನ ಪ್ರಶ್ನೆ ಎಂದು ಬಿಗ್‌ ಬಾಸ್‌ ಮನೆಯಿಂದ ಅರ್ಧದಲ್ಲೇ ಹೊರಬಂದ ಲಾಯರ್‌ ಜಗದೀಶ್‌ ಪ್ರಶ್ನಿಸಿದ್ದಾರೆ.

ಲೈವ್‌ ವಿಡಿಯೋದಲ್ಲಿ ಮಾತನಾಡಿದ ಅವರು, ಒಂದಂತೂ ಹೇಳಲು ಇಷ್ಟಪಡುತ್ತೇನೆ. ಬಿಗ್‌ ಬಾಸ್‌ ಒಂದು ಕನ್ನಡಿ ಇದ್ದ ಹಾಗೆ. ನಮ್ಮ ಭಾವನೆಗಳನ್ನು, ನಮ್ಮ ನಿಜವಾದ ಮುಖವನ್ನು, ಅಕಸ್ಮಾತ್‌ ಮುಖವಾಡ ಹಾಕಿಕೊಂಡಿದ್ದರೆ ಮುಖವಾಡವನ್ನು ಕಳಚಿ ನಮ್ಮನ್ನು ಜನರ ಮುಂದೆ ತೋರಿಸುವ ದೊಡ್ಡ ಕನ್ನಡಿಯೇ ನಮ್ಮ ಬಿಗ್‌ ಬಾಸ್‌ ಅಂತಾ ನನಗೆ ಅನಿಸುತ್ತಿದೆ ಎಂದರು.

Bigg Boss Kannada Is Bigg Boss Kannada Scripted What Did lawyer Jagadish Say

ಬಿಗ್‌ ಬಾಸ್‌ಗೆ ಹೋದ ಖುಷಿಯನ್ನು ನಿಜಕ್ಕೂ ನಾನು ಆಚರಿಸುತ್ತಿದ್ದೇನೆ. ಬಿಗ್‌ ಬಾಸ್‌ ಮನೆಯಲ್ಲಿ ನಾನು ಪ್ರಾಮಾಣಿಕವಾಗಿದ್ದೆ. ಈ ಹದಿನೈದು ದಿನದಲ್ಲಿ ನನ್ನ ಕೈಯಲ್ಲಿ ಆಗಿರುವುದನ್ನು ಮಾಡಿದ್ದೇನೆ. ನೀವೆಲ್ಲಾ ಮತ್ತೆ ಬಿಗ್‌ ಬಾಸ್‌ಗೆ ಹೋಗಿ ಎನ್ನುತ್ತೀರಾ ಆದರೆ ನನಗೆ ಆ ರೀತಿಯಾದ ನಂಬಿಕೆ ಇಲ್ಲ. ಯಾಕೆಂದರೆ ಬಿಗ್‌ ಬಾಸ್‌ ಕಥೆಗೆ ಜಗದೀಶ್‌ ಮುಗಿದು ಹೋದ ಅಧ್ಯಾಯಾ ಅಂತಾ ಸುದೀಪ್‌ ಸರ್‌ ಹೇಳಿದ್ದಾರೆ.

ಈ ಬಿಗ್‌ ಬಾಸ್‌ ನನ್ನಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಈ ಮೊಬೈಲ್‌ಗಿಂತ ಬಿಗ್‌ ಬಾಸ್‌ನಲ್ಲಿ ನನ್ನ ದೊಡ್ಡ ಸ್ಟಾರ್ ಮಾಡಿದ್ದಾರೆ. ಅಲ್ಲಿ ಎಪ್ಪತ್ತಕ್ಕೂ ಹೆಚ್ಚು ಕ್ಯಾಮರಾ ಇದೆ. ಸಾವಿರಕ್ಕೂ ಹೆಚ್ಚು ಜನ ನಮಗೋಸ್ಕರ ಕೆಲಸ ಮಾಡುತ್ತಾರೆ. ಬಿಗ್‌ ಬಾಸ್‌ಗೆ ಹೋಗಿರುವುದರಿಂದ ನನಗೆ ಸಿಕ್ಕಿದ್ದೇ ಜಾಸ್ತಿ ಕಳೆದುಕೊಂಡಿದ್ದೇ ಕಡಿಮೆ. ನಿಮ್ಮೆಲ್ಲರನ್ನು ರಂಜಿಸುವ ವ್ಯಕ್ತಿಯಾಗಿ ಹೊರಗೆ ಬಂದಿದ್ದೇನೆ ಎಂದು ಖುಷಿ ಹಂಚಿಕೊಂಡರು.

Bigg Boss Kannada Is Bigg Boss Kannada Scripted What Did lawyer Jagadish Say

ಬಿಗ್‌ ಬಾಸ್‌ನಲ್ಲಿ ಸ್ಕ್ರಿಪ್ಟ್‌ ಕೊಡುತ್ತಾರಾ ಎನ್ನುವ ಅನುಮಾನ ಎಲ್ಲರಿಗಿದೆ. ನೂರಕ್ಕೆ ನೂರು ಬಿಗ್‌ ಬಾಸ್‌ ಸ್ಕ್ರಿಪ್ಟ್‌ ಅಲ್ಲ. ಇಲ್ಲಿ ನಾವು ಯಾವುದೇ ನಾಟಕ ಮಾಡಬೇಕಾಗಿಲ್ಲ. ಇಲ್ಲಿ ಯಾವುದೇ ಪ್ರಭಾವ ನಡೆಯುವುದಿಲ್ಲ. ಇಲ್ಲಿ ನ್ಯಾಯಕ್ಕೆ ಧರ್ಮಕ್ಕೆ ಬೆಲೆ ಇದೆ ಅಂತಾ ನನಗೆ ಅನಿಸಿದೆ. ನನಗೂ ಮೊದಲು ಬಿಗ್‌ ಬಾಸ್‌ ಮೇಲೆ ಅನುಮಾನ ಇತ್ತು ಆದರೆ ಅಲ್ಲಿ ಎಲ್ಲವೂ ಪಾರದರ್ಶಕವಾಗಿದೆ ಎಂದು ಲಾಯರ್‌ ಜಗದೀಶ್‌ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ಹೊಗಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+