Bigg Boss Kannada: '16 ಜನರಲ್ಲಿ ಟಾಪ್ ಕ್ರಿಮಿನಲ್ ಅಂದರೆ ಅವನೊಬ್ಬನೇ'
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಲ್ಲಿ ವಕೀಲ ಜಗದೀಶ್ ಹಾಗೂ ರಂಜಿತ್ ಅವರನ್ನು ವಾರದ ಮಧ್ಯವೇ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಮನೆಯಲ್ಲಿ ಮಹಿಳೆಯರಿಗೆ ಆದ ಅಪಮಾನವನ್ನು ಹಾಗೂ ನಿಂದನೆಯನ್ನು ಬಿಗ್ ಬಾಸ್ ಸಹಿಸುವುದಿಲ್ಲ ಎಂದು ವಕೀಲ ಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸಲಾಗಿತ್ತು. ಸದ್ಯ ದೊಡ್ಮನೆಯಿಂದ ಹೊರಬಂದಿರುವ ಜಗದೀಶ್ ಈ ಬಾರಿಯ ಬಿಗ್ ಬಾಸ್ ಸೀಸನ್‌ನ ಟಾಪ್ ಕ್ರಿಮಿನಲ್ ಯಾರು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ಸ್ಪೀಡ್ ಪ್ಲಸ್ ಕರ್ನಾಟಕದ ಜೊತೆ ಮಾತನಾಡಿದ ವಕೀಲ ಜಗದೀಶ್, ನಾನು ಮನೆಯಲ್ಲಿ ನಗು ನಗುತ್ತಾ ಆರಾಮಾಗಿ ಇರುತ್ತೇನೆ. ನಾನು ಇರುವುದೇ ಹೀಗೆ. ಆಚೆ ಕಡೆಗಳಲ್ಲಿ ತೋರಿಸಿಕೊಳ್ಳಲ್ಲ ಅಷ್ಟೇ. ಆದರೆ ಮನೆಯಲ್ಲಿ ನಾನು ಹೀಗೆ ಇರುವುದು. ಅದಕ್ಕಾಗಿ ಈ ಮನೆ ನಗು ನಗುತ್ತಾ ಇರುತ್ತದೆ. ಈ ಮನೆಗೋಸ್ಕರ ನಾನು ಈ ರೀತಿ ನಗುತ್ತಾ ಇರುತ್ತೇನೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನಿಮ್ಮನ್ನು ನೋಡಿ ಯಾರು ನಗುತ್ತಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಗದೀಶ್, ನನ್ನ ಪ್ರಕಾರ ಈಗ ಬಿಗ್ ಬಾಸ್ ಮನೆಯಲ್ಲಿ ಇರುವವರು ಪುಟ್ಟ ಪುಟ್ಟ ಮಕ್ಕಳು. ಯಾಕೆಂದರೆ ಆ ಮೆಚ್ಯುರಿಟಿ ಪುಟ್ಟ ಮಕ್ಕಳಿಗೆ ಮಾತ್ರ ಇರುವುದು. ಹೊರಗಡೆಯಿಂದ ಬಂದ ಒಬ್ಬ ಲಾಯರ್ ಬಿಗ್ ಬಾಸ್ ಸ್ಪರ್ಧಿ ಅಂದಾಗ ಸಾಮಾನ್ಯವಾಗಿ ಅವರು ರಿಯ್ಯಾಕ್ಟ್ ಮಾಡಿದ್ದಾರೆ ಎಂದರು.
ನನ್ನನ್ನು ಬಿಗ್ ಬಾಸ್ ಮನೆಯಲ್ಲಿ ಪಟಾಯಿಸಿಕೊಳ್ಳಲು ಪ್ರಯತ್ನ ಪಟ್ಟರು, ಅದು ಆಗಲಿಲ್ಲ. ಹೀಗಾಗಿ ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ನನ್ನ ವಿರುದ್ಧ ದಾಳಿ ಮಾಡಿದರು. ನನ್ನ ಪ್ರಕಾರ ಇದು ಸಾಮಾನ್ಯ. ನನಗೆ ಖುಷಿ ಇದೆ. ಯಾಕೆಂದರೆ ಅಷ್ಟು ಜನರ ಮುಖವಾಡ ಕಳಚಿದೆನೆಲ್ಲಾ ಎನ್ನುವುದರ ಬಗ್ಗೆ ನನಗೆ ಖುಷಿ ಇದೆ ಎಂದು ಹೇಳಿದರು.

ಮಾತು ಮುಂದುವರಿಸಿದ ಜಗದೀಶ್, ಮೊದಲ ವಾರದ ನಂತರ ಅವರಿಗೆ ಅವರೇ ಫೇಮ್ ಹಾಕಿಕೊಂಡರು. ಜಗದೀಶ್‌ಯೇ ನಮ್ಮ ಟಾರ್ಗೆಟ್ ಅಂತಾ ನಿರ್ಧರಿಸಿದರು. ಸ್ಕೆಚ್ ಹಾಕುತ್ತಾರೆ ಮಗಾ ಹುಷಾರಾಗಿರು ಎನ್ನುವುದು ನನಗೂ ಗೊತ್ತಾಗುತ್ತಿತ್ತು. ಅದನ್ನು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ. ನಾನು ಬಿಗ್ ಬಾಸ್ ಮನೆಗೆ ಹೋಗಿ ತುಂಬಾ ಎಂಜಾಯ್ ಮಾಡಿದ್ದೇನೆ. ನನಗೆ ಹೊರಗೆ ಬರಲು ಇಷ್ಟ ಇರಲಿಲ್ಲ ಎಂದರು.
ಹದಿನಾರು ಜನರಲ್ಲಿ ಟಾಪ್ ಕ್ರಿಮಿನಲ್ ಅಂದರೆ ಅವನೊಬ್ಬನೇ. ಅವನದು ಕ್ರಿಮಿನಲ್ ಆಲೋಚನೆ. ಗೋಲ್ಡ್ ಮುಂದೆ ವಿಕ್ರಮ್, ರಂಜಿತ್ ಏನೂ ಇಲ್ಲ. ಗೋಲ್ಡ್ ಸುರೇಶ್ ಮುಖವಾಡ ತೆಗೆಯಬೇಕಾಗಿತ್ತು. ನಾನು ಒಂದು ಸಲ ಎಂದಿರುವುದನ್ನು ಅವನು ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಹೀಗಂದ ಅಂತಾ ನೂರು ಸಲ ಹೇಳಿದ್ದಾನೆ ಎಂದು ಹೇಳಿದ ಲಾಯರ್ ಜಗದೀಶ್ ತಾವೂ ಹೊರ ಬಂದರೂ ಸಹ ಗೋಲ್ಡ್ ಸುರೇಶ್ ಮುಖವಾಡ ಕಳಚಿದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications