ಉಗ್ರಂ ಮಂಜು ಬದುಕಿಗೆ ಹೊಸ ಹುಡುಗಿ ಎಂಟ್ರಿ, ಕನ್ಫರ್ಮ್‌ ಮಾಡಿದ ಗೌತಮಿ

ಬಿಗ್‌ಬಾಸ್‌ ಸೀಸನ್‌ 11ರ ಸ್ಪರ್ಧಿಗಳಿಗೆ ಕಂಕಣ ಭಾಗ್ಯ ಕೂಡಿಬರುತ್ತಿದೆ. ಈ ಸೀಸನ್‌ನ ರಂಜಿತ್‌ ಇತ್ತೀಚೆಗೆ ಮದುವೆಯಾದರು. ಚೈತ್ರಾ ಕುಂದಾಪುರ ಅವರ ಮದುವೆಯೂ ನೆರವೇರಿದೆ. ಇನ್ನು ಈಗ ಈ ಸಾಲಿಗೆ ಉಗ್ರಂ ಮಂಜು ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಬಿಗ್‌ಬಾಸ್‌ ಮನೆಯಲ್ಲೇ ಉಗ್ರಂ ಮಂಜು ಮದುವೆ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಇಷ್ಟು ವಯಸ್ಸಾದ್ರೂ ಮಂಜಣ್ಣ ಯಾಕೆ ಇನ್ನೂ ಮದುವೆ ಆಗಿಲ್ಲ ಎಂದು ಎಲ್ರೂ ಪ್ರಶ್ನೆ ಕೇಳಿದ್ದರು. ಆಗ ಮದುವೆ ಆಗ್ತೀನಿ, ಹುಡುಗಿ ಹುಡುಕಿ ಎಂದಿದ್ದ ಮಂಜಣ್ಣ ಸದ್ಯದಲ್ಲೇ ಗುಡ್‌ನ್ಯೂಸ್‌ ಕೊಡಲು ರೆಡಿಯಾಗಿದ್ದಾರೆ.

ಇನ್ನೂ ಮದುವೆಯಾದ ಮಂಜು ಅವರ ಬಾಳಲ್ಲಿಯೂ ಹುಡುಗಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಇದು ಯಾವುದೋ ಗಾಳಿ ಸುದ್ದಿಯಲ್ಲ. ಬಿಗ್‌ಬಾಸ್‌ ಮನೆನಲ್ಲಿ ಮಂಜಣ್ಣನಿಗೆ ಸಾಥ್‌ ಕೊಡುತ್ತಿದ್ದ ಗೌತಮಿ ಜಾಧವ್‌ ಅವರೇ ಈ ಬಗ್ಗೆ ವಿಚಾರವನ್ನು ಕನ್ಫರ್ಮ್‌ ಮಾಡಿದ್ದಾರೆ.

Bigg Boss Kannada Fame Ugram Manju Shares Surprise Video Hudugi Coming Soon

ಹೌದು ಗೌತಮಿ ಜಾಧವ್‌ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡು ಸರ್‌ಪ್ರೈಸ್‌ ನೀಡಿದ್ದಾರೆ. ಮಂಜಣ್ಣನ ಲೈಫಿಗೆ ಹುಡುಗಿಯೊಬ್ಬರು ಎಂಟ್ರಿಯಾಗುತ್ತಿರುವ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ. "ಹುಡುಗಿ ಕಮಿಂಗ್ ಸೂನ್" ಎಂದು ಗೌತಮಿ ಜಾಧವ್‌ ಅವರು ಉಗ್ರಂ ಮಂಜು ಅವರ ಫೋಟೋ ಜೊತೆಗೆ ವಿಡಿಯೋ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ ವೇದಿಕೆಯಲ್ಲಿ ಮಂಜು ಅವರು ಮದುವೆ ಆಗುತ್ತೀನಿ, ಹುಡುಗಿಯನ್ನ ಹುಡುಕಿ ಎಂದು ತಮ್ಮ ತಂದೆಗೆ ಮಾತು ನೀಡಿದ್ದರು. ಮಂಜು ಅವರ ತಂದೆ ಕೂಡ ನಾವು ಮದುವೆ ಮಾಡಲು ರೆಡಿ ಇದ್ದೀವಿ. ಯಾರನ್ನಾದರೂ ಲವ್‌ ಮಾಡಿದ್ರೆ ಹೇಳು, ಅವರ ಜೊತೆಯಲ್ಲೇ ಮದುವೆ ಮಾಡಿಸ್ತೀವಿ ಎಂದು ಹೇಳಿದ್ರು.

ಇದಕ್ಕೆ ಉತ್ತರಿಸಿದ್ದ ಮಂಜು ಅವರು ಮೊದಲು ಒಬ್ಬರನ್ನು ಲವ್‌ ಮಾಡಿದ್ದೆ, ಈಗ ಇಲ್ಲ ಎಂದಿದ್ದರು. ಆ ವಿಚಾರ ನನಗೂ ಗೊತ್ತಿತ್ತು. ಮನೆಯಲ್ಲಿ ಹೆಣ್ಣು ಮಕ್ಕಳಿದ್ದ ಕಾರಣ ಆಗ ಮಂಜು ಲವ್‌ ಮ್ಯಾರೇಜ್‌ಗೆ ಒಪ್ಪಿರಲಿಲ್ಲ. ಅವರ ಮದುವೆ ಆದ ಮೇಲೆ ನೋಡೋಣ ಎಂದಿದ್ದೆ. ಆದ್ರೆ ನಮ್ಮನೆ ಹೆಣ್ಣು ಮಕ್ಕಳ ಮದುವೆ ಆಗುವಷ್ಟರಲ್ಲಿ ಮಂಜು ಇಷ್ಟಪಟ್ಟಿದ್ದ ಹುಡುಗಿ ಮದುವೆಯೂ ಆಗಿ ಹೋಗಿತ್ತು. ಇದಾದ ಮೇಲೆ ಹಲವು ಸಂಬಂಧಗಳು ಬಂದರೂ ಅದನ್ನು ಬೇಡ ಎನ್ನುತ್ತಿದ್ದ ಎಂದು ಮಂಜು ತಂದೆ ಬಹಿರಂಗಪಡಿಸಿದ್ದರು.

Bigg Boss Kannada Fame Ugram Manju Shares Surprise Video Hudugi Coming Soon

ಬಿಗ್‌ಬಾಸ್‌ನಿಂದ ಹೊರಬಂದ ನಂತರವೂ ಮಂಜು ಅವರ ಮದುವೆ ವಿಚಾರ ಸದ್ದು ಮಾಡುತ್ತಲೇ ಇತ್ತು. ಇದೀಗ ಕೊನೆಗೂ ಮಂಜಣ್ಣ ಸದ್ಯದಲ್ಲೇ ಮದುವೆ ಊಟ ಹಾಕಿಸುವ ದಿನಗಳು ಹತ್ತಿರದಲ್ಲೇ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಬಿಗ್‌ಬಾಸ್‌ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ಮದುವೆಗೂ ಉಗ್ರಂ ಮಂಜು ಹೋಗಿದ್ದರು. ನವಜೋಡಿಗೆ ಶುಭಹಾರೈಸುವ ಚೈತ್ರಾ ಅವರಿಗೆ ತುಂಬಾ ಇಷ್ಟವಾದ ಗೋವಿನ ಮೂರ್ತಿಯನ್ನು ವಿಶೇಷವಾಗಿ ಗಿಫ್ಟ್‌ ಮಾಡಿದ್ದರು. ಹಿಂದೂ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದ ಚೈತ್ರಾ ಬಿಗ್ಬಾಸ್ ಮನೆಯಲ್ಲಿದ್ದಾಗಲೂ ಗೋವಿನ ಬಗ್ಗೆ ಜಪ ಮಾಡ್ತಿದ್ರು. ಈ ಕಾರಣಕ್ಕೆ ಗೋವಿನ ಮೂರ್ತಿಯನ್ನೇ ಗಿಫ್ಟ್‌ ಆಗಿ ನೀಡಿದ್ದಾರೆ. ಉಗ್ರಂ ಮಂಜು ಕೊಟ್ಟ ಗಿಫ್ಟ್ ತೆರೆದ ಕೂಡಲೇ ಚೈತ್ರಾ ಕುಂದಾಪುರ ಫುಲ್‌ ಹ್ಯಾಪಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+