ಕೆಟ್ಟ ಫೋಟೋ ಕೇಳಿದ್ರೆ ನಿಮ್ಮ ಅಮ್ಮನನ್ನು ಹೋಗಿ ಕೇಳು ಅಂತೀನಿ- ಬೆಂಕಿ ತನಿಷಾ
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಮುಗಿದು ಹಲವು ತಿಂಗಳಾದರೂ, ಸ್ಪರ್ಧಿಗಳ ಹವಾ ಮಾತ್ರ ಕಮ್ಮಿಯಾಗಿಲ್ಲ. ಬಿಗ್ ಬಾಸ್ ಸೀಜನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಈ ಸೀಜನ್‌ನ ಸ್ಟ್ರಾಂಗ್ ಕಂಟೆಸ್ಟೆಂಟ್ ಅನಿಸಿಕೊಂಡಿದ್ದ ನಟಿ ತನಿಷಾ ಕುಪ್ಪಂಡ ಶೋ ಮುಗಿದ ಬಳಿಕ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.
ಈ ಹಿಂದೆಯೇ ರೆಸ್ಟೋರೆಂಟ್ ಆರಂಭಿಸಿದ್ದ ತನಿಷಾ ಕುಪ್ಪಂಡ ಇದೀಗ ಸಿಲ್ವರ್ ಜ್ಯುವೆಲ್ಲರಿ ಉದ್ಯಮ ಕೂಡ ಆರಂಭಿಸಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಸದಾ ಕೆಲಸದಲ್ಲಿ ಬ್ಯೂಸಿಯಾಗಿರುವ ನಟಿ ತನಿಷಾ ತಮ್ಮ ಕೆಲಸ ಹಾಗೂ ಶ್ರಮದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವವರ ವಿರುದ್ಧ ಬೆಂಕಿ ಉಗುಳಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 'ಬಹಳಷ್ಟು ಜನರು ನಾನು ಪೆಂಟಗನ್ ಸಿನಿಮಾ ಮೂಲಕನೇ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇನೆ ಅಂತಾ ತಿಳಿದುಕೊಂಡು ಬಿಟ್ಟಿದ್ದಾರೆ. ಹೀಗಾಗಿ ನಿನ್ನೆ ಮೊನ್ನೆ ಯಾವಗಲೋ ಬಂದವಳು, ರೆಸ್ಟೋರೆಂಟ್ ಓಪನ್ ಮಾಡಿದಳು, ಕಾರು ತೆಗೆದುಕೊಂಡಳು, ಇವಾಗೆಲ್ಲೋ ಜ್ಯುವೆಲರಿ ಶಾಪ್ ಓಪನ್ ಮಾಡಿದಳು ಅನ್ನೋ ತರ ಮಾತನಾಡುತ್ತಾರೆ. ಅದು ಏಕವಚನದಲ್ಲಿ ಮಾತಾಡ್ತಾರೆ.
ನನಗೆ ಏಕವಚನ ಕೇಳಿದರೆ ಎರಡು ಬಿಟ್ಟು ಬಿಡೋಣ ಅನಿಸುತ್ತದೆ. ತುಂಬಾ ಕೋಪ ಬರುತ್ತದೆ. ಯಾಕಂದ್ರೆ ನೀವು ಸಾಕಿಲ್ಲ. ಮತ್ಯಾಕೆ ಏಕವಚನದಲ್ಲಿ ಮಾತನಾಡ್ತೀರಾ. ನೀವು ಹೇಳಬೇಕು ಎನ್ನುವುದನ್ನು ಸರಿಯಾಗಿ ಹೇಳಿ. ಅದನ್ನು ಬಿಟ್ಟು ಹೋಗೆ ಬಾರೇ ಅಂದರೆ ನನಗೆ ಆಗಲ್ಲ. ಅದರಲ್ಲೂ ಕಮೆಂಟ್ ಪಾಸ್ ಮಾಡುವವರು. ಅಂತವರಿಗೆ ನೇರವಾಗಿ ನಿಮ್ಮ ಅಮ್ಮನನ್ನು ಹೋಗಿ ಕೇಳು ಅಂತಾ ರೀಪ್ಲೇ ಮಾಡುತ್ತೇನೆ ಎಂದರು.
ಕೆಲವರು ಕೆಟ್ಟ ಫೋಟೋ ಕಳಿಸು ಅಂತಾ ಕೇಳುತ್ತಾರೆ. ಅವರಿಗೆ ಹೋಗು ಗುರು ನಿಮ್ಮ ಅಮ್ಮನನ್ನು ಕೇಳು ಅಂತಿನಿ. ಅವರು ನಿಮ್ಮ ಮನೇಲೆ ನಿಮ್ಮ ಜೊತೆಲೇ ಇರುತ್ತಾರೆ. ಕೇಳು ಸುಲಭವಾಗಿ ಫೋಟೋ ಸಿಗುತ್ತಲ್ಲ. ಲೈವ್ ಅಲ್ ನೋಡು ಯಾಕೆ ಬೇರೆ ಹೆಣ್ಣು ಮಕ್ಕಳ ಮೇಲೆ ಕಣ್ಣು ಅಂತಾ ಹೀಗೆ ಕೇಳುತ್ತೇನೆ ನಾನು.

ನನಗೆನೂ ಅನಿಸಲ್ಲ. ಯಾಕೆಂದರೆ ನೀನು ಯಾರೋ ಒಬ್ಬರ ಮಗಳ ಬಳಿ ಕೇಳುತ್ತಿದ್ದೀಯಾ. ನಾಳೆ ದಿನ ನಿನ್ನ ಮಗಳನ್ನೇ ಯಾರೋ ಕೇಳಬಹುದು. ನನ್ನ ಮಗ ನಿನ್ನ ಮಗಳನ್ನೇ ಕೇಳಬಹುದು. ಮುಂದೆ ಏನು ಬೇಕಾದರೂ ಆಗಬಹುದು ಅಲ್ವಾ. ಈ ರೀತಿ ಹುಚ್ಚು ಹುಚ್ಚು ತರ ಮಾತನಾಡುತ್ತಾರೆ ಎಂದು ತಮ್ಮ ಜೊತೆ ಕೆಟ್ಟದಾಗಿ ಮಾತನಾಡುವವರಿಗೆ ತನಿಷಾ ತಿರುಗೇಟು ನೀಡಿದ್ದಾರೆ.
ಇನ್ನು ಕೆಲಸದಲ್ಲಿ ಹೆಣ್ಣು ಮಕ್ಕಳ ಶ್ರಮದ ಬಗ್ಗೆ ಗೊತ್ತಿಲ್ಲದೇ ಅವರ ಏಳಿಗೆ ಬಗ್ಗೆ ಕೆಟ್ಟದಾಗಿ ಅಸಹ್ಯವಾಗಿ ಕಮೆಂಟ್ ಪಾಸ್ ಮಾಡುವವರ ಬಗ್ಗೆ ಮಾತನಾಡಿದ ತನಿಷಾ, ಎಲ್ಲಾ ಕಡೆಗಳಲ್ಲಿಯೂ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಇದ್ದೇ ಇರುತ್ತದೆ. ಅದು ಯಾವಾಗ ನಿಲ್ಲುತ್ತೋ ಆಗ ಹುಡುಗರ ಮೇಲೆ ಗೌರವ ಹೆಚ್ಚಾಗುತ್ತದೆ.
ನಮ್ಮವರು ನಮ್ಮ ಸುತ್ತಲು ಇರುವವರೇ ಅಂತಹ ಕಮೆಂಟ್‌ಗಳನ್ನು ಮಾಡುತ್ತಾರೆ. ನಾವು ಕೆಲಸ ಮಾಡುವಾಗ ನಮ್ಮನ್ನು ಹೊಗಳಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತೇವೆ. ಯಾವಾಗಲೂ ಕಷ್ಟಪಟ್ಟು ಮಾಡುವ ಕೆಲಸಕ್ಕಿಂತ ಖುಷಿ ಪಟ್ಟು ಮಾಡುವ ಕೆಲಸದ ಫಲಿತಾಂಶ ಚೆನ್ನಾಗಿರುತ್ತದೆ ಎಂದಿದ್ದಾರೆ.












Click it and Unblock the Notifications