Bigg Boss Kannada: ಶೋಭಾ ಶೆಟ್ಟಿ ಆರ್ಭಟಕ್ಕೆ ಎಲ್ಲಾ ಗಪ್‌ಚುಪ್: ಹನುಮಂತ ಗಡಗಡ
ಬಿಗ್ ಬಾಸ್ ಕನ್ನಡ ಸೀಜನ್ 11 ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಬಿಗ್ ಬಾಸ್ ಟ್ವಿಸ್ಟ್ ಕೊಡುತ್ತಿದ್ದಾರೆ. ಇನ್ನೇನು ಅರ್ಧ ಸೀಜನ್ ಮುಗಿತು ಎನ್ನುವಷ್ಟರಾಗಲೇ ಇಬ್ಬರು ಸ್ಪಧಿಗಳು ಮತ್ತೆ ವಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಬಿಗ್ ಬಾಸ್ ಸ್ಪರ್ಧಿಯಾಗಿ ಜನಪ್ರಿಯತೆ ಪಡೆದಿದ್ದ ಶೋಭಾ ಶೆಟ್ಟಿ ಹಾಗೂ ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ರಜತ್ ಸದ್ಯ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಯಾಗಿದ್ದಾರೆ.
ಬಿಗ್ ಬಾಸ್ ಮನೆ ಪ್ರವೇಶಿಸಿ ಮೊದಲ ದಿನವೇ ಶೋಭಾ ಶೆಟ್ಟಿ ಹಾಗೂ ರಜತ್ ಹವಾ ಜೋರಾಗಿದ್ದು, ತಮಗೆ ಸಿಕ್ಕಿರುವ ವಿಶೇಷ ಅಧಿಕಾರಗಳನ್ನು ಚಾಣಕ್ಷ್ಯತನದಿಂದ ಬಳಸಿಕೊಳ್ಳುತ್ತಿದ್ದಾರೆ. ಇದೀಗ ಶೋಭಾ ಶೆಟ್ಟಿ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅರ್ಹ ಹಾಗೂ ಯಾರು ಅನರ್ಹರು ಎಂದು ಆರಿಸಬೇಕು ಎಂದು ಆದೇಶ ಕೊಟ್ಟಿರುವ ಬಿಗ್ ಬಾಸ್, ಅರ್ಹ ಹಾಗೂ ಅನರ್ಹ ಎನ್ನುವ ಬೋರ್ಡ್ ವೊಂದನ್ನು ಕೊಟ್ಟಿದ್ದು, ಅದರ ಜೊತೆಗೆ ಇಬ್ಬರ ಫೋಟೋ ಇರುವ ಸ್ಟಿಕ್ಕಿಂಗ್ ಕಾರ್ಡ್‌ಗಳನ್ನು ಕೊಟ್ಟಿದ್ದಾರೆ.

ಉಳಿದ ಸ್ಪರ್ಧಿಗಳು ಅರ್ಹ ಹಾಗೂ ಅನರ್ಹ ಆಯ್ಕೆ ಮಾಡಿದ್ದು, ಬಹುತೇಕರು ಶೋಭಾ ಶೆಟ್ಟಿಯನ್ನು ಅರ್ಹ ಎಂದು ಆಯ್ಕೆ ಮಾಡಿದನ್ನು ನೋಡಬಹುದಾಗಿದೆ. ಆದರೆ ಉಗ್ರಂ ಮಂಜು ಶೋಭಾ ಶೆಟ್ಟಿಯನ್ನು ಅನರ್ಹ ಎಂದು ಆಯ್ಕೆ ಮಾಡಿ ಕಾರಣ ಕೊಟ್ಟಿದ್ದಾರೆ. ಬಿಗ್ ಬಾಸ್ ನಿಯಮ ಏನಿರುತ್ತೋ ಅದನ್ನು ಅಲ್ಲಾಡಿಸಿದು ನನಗೆ ಶೋಭಾ ಅವರು ಅನಿಸಿತು ಎಂದು ಹೇಳಿದ್ದಾರೆ.
ಇದರಿಂದ ಕೋಪಗೊಂಡ ಶೋಭಾ ಶೆಟ್ಟಿ ಅಲ್ಲಾಡಿಸಿದ್ದು, ಗಿಲ್ಲಾಡಿಸಿದ್ದು ಅಂದರೆ ಏನು..? ಆ ಯಪ್ಪನಿಗೆ ಕ್ಲಾರಿಟಿನೇ ಇಲ್ಲ. ನಾನ್‌ಸೆನ್ಸ್ ಕಾರಣಗಳನ್ನು ಕೊಡುತ್ತಿದ್ದಾರೆ ಎಂದಾಗ ಉಗ್ರಂ ಮಂಜು ಕಿರುಚಾಡಬೇಡಿ ನಾನು ಇಲ್ಲೇ ಇದ್ದೀನಿ ಎಂದು ಕೂಗಾಡಿದ್ದಾರೆ. ಈ ವೇಳೆ ಶೋಭಾ ಶೆಟ್ಟಿ ಕೇಳಿಸಿಕೊಳ್ಳಿ, ಗೌರವ ಕಳೆದುಕೊಳ್ಳಬೇಡಿ ಎಂದು ಅರುಚಾಡಿದ್ದಾರೆ.

ಈ ಎಲ್ಲಾ ಗಲಾಟೆಗಳನ್ನು ಕಂಡ ಹನುಮಂತು ಹಾಗೂ ಧನರಾಜ್ ಮಾತನಾಡಿಕೊಂಡಿದ್ದು, ಹೇಗೆ ಮಾತನಾಡುತ್ತಾಳೋ ಯಪ್ಪಾ..? ನಾವು, ನೀವು ಆದರೆ... ಎಂದು ಶೋಭಾ ಶೆಟ್ಟಿ ಆರ್ಭಟದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗಿದ್ದು, ಇಂದಿನ ಸಂಚಿಕೆಯಲ್ಲಿ ಏನೇನಾಯ್ತು ಎನ್ನುವುದನ್ನು ನೋಡಬಹುದಾಗಿದೆ.












Click it and Unblock the Notifications